ಶ್ರೀ ಚಿದಂಬರ ಮೂಲಪೀಠ ಮೂಲಮಹಾಕ್ಷೇತ್ರ ಮೂಲ ಸಂಸ್ಥಾನದ ವಿವಿಧ ವಿಭಾಗಗಳು, ವಿಭಾಗದ ನಿಯಮಗಳು ಈ ಕೆಳಕಂಡಂತೆ ಇವೆ:

1)ದೇವಸ್ಥಾನದ ವಿಭಾಗ:
i)  ಶ್ರೀ ಕ್ಷೇತ್ರ ಒಳಾಂಗಣಗಳಲ್ಲಿ ಪ್ರತಿ ದಿವಸ ಸಕಲ ದೇವತೆಗಳಿಗೆ ತ್ರಿಕಾಲ ಪೂಜೆ, ಧೂಪ- ದೀಪ, ನೈವೇದ್ಯ, ಆರತಿ, ಮಂತ್ರ ಪುಷ್ಪ ಹಾಗೂ ಪ್ರಾರ್ಥನೆ ಮಾಡುವುದು.

ii)  ಪ್ರಾಥ:ಕಾಲ 4:30 ರಿಂದ 6:00 ಗಂಟೆಯ ವರೆಗೆ ಶ್ರೀ ಶಿವಚಿದಂಬರೇಶ್ವರರಿಗೆ ಹಾಗೂ ಸಕಲ ದೇವತೆಗಳಿಗೆ ಭೂಪಾಳಿ ಕಾಕಡಾರತಿ.

iii)  ಪ್ರಾಥ:ಕಾಲ ಪೂಜೆ, ಅಲಂಕಾರ, ನೈವೇದ್ಯ, ಆರತಿ, ಮಂತ್ರ ಪುಷ್ಪ ಹಾಗೂ ಪ್ರಾರ್ಥನೆ ಹಾಗೂ ಪ್ರಾಸಾದ ವಿತರಣೆ. (ಶೋಡಶೋಪಚಾರ ಪೂಜಾ).

iv) ಮಧ್ಯಾನ್ಹ 11:00 ರಿಂದ 1:00 ರವರೆಗೆ ಶ್ರೀ ಶಿವಚಿದಂಬರೇಶ್ವರ ದೇವರಿಗೆ ಶುಧ್ಧೋದಕದಿಂದ ಪಂಚಾಮೃತ ರುದ್ರಾಭಿಷೇಕ, ಅಲಂಕಾರ ಪೂಜೆ, ಆರತಿ, ಮಂಗಳಾರತಿ, ನೈವೇದ್ಯ, ತೀರ್ಥ ಪ್ರಾಸಾದ ವಿತರಣೆ.

v) ಸಕಲ ದೇವತೆಗಳಿಗೆ ಪೂಜೆ, ಧೂಪ ಮತ್ತು ಆರತಿ.

vi ಸಾಯಂಕಾಲ 6:00 ರಿಂದ 8:00 ರವರೆಗೆ, ಶ್ರೀ ಶಿವಚಿದಂಬರೇಶ್ವರರಿಗೆ ಸಾಯಂಕಾಲ ಪೂಜೆ, ಧೂಪ, ದೀಪ, ನೈವೇದ್ಯ, ಸಕಲ ದೇವತೆಗಳಿಗೆ ಪೂಜೆ, ಧೂಪ ನೈವೇದ್ಯ. ಶೇಜಾರತಿ ಆದ ಮೇಲೆ ಸಕಲ ದೇವಸ್ಥಾನಗಳ ಹಾಗೂ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನದ ದ್ವಾರಗಳನ್ನು ಮುಚ್ಚುವುದು.

vii) ಪ್ರಾಥಕಾಲ ಸಕಲ ಸಕಲ ದೇವತೆಗಳಿಗೆ ಹಾಗೂ ಶ್ರೀ ಚಿದಂಬರೇಶ್ವರರಿಗೆ ಭೂಪಾಳಿ ಕಾಕಡಾರತಿ ಆದಮೇಲೆ ಬಾಗಿಲನ್ನು ತೆಗೆಯುವುದು. ಶೋಡಶೋಪಚಾರ ಪೂಜೆಯಿಂದ ಮಾಡಬೇಕು. (ವೈದಿಕ ಶಾಸ್ತ್ರೋಕ್ತ ಮಾಡುವುದು).

2)ಸಂಕಲ್ಪ ವಿಭಾಗ:
i) ಅಭಿಷೇಕ ಹಾಗು ಅರ್ಚನಾ ವಿಭಾಗದಲ್ಲಿ ನೋಂದಾಯಿಸಿದ ಹೆಸರು – ಗೋತ್ರಗಳನ್ನು ಅಭಿಷೇಕ ಹಾಗು ಅರ್ಚನಾ ಪೂರ್ವದಲ್ಲಿ ಸಂಕಲ್ಪ ಮಾಡುವ ವಿಧಾನ.

ii) ಆಯು – ಅರೋಗ್ಯ, ಐಶ್ವರ್ಯಾದಿ ಫಲ ಪ್ರಾಪ್ತಂ ಸಹಕುಟುಂಬ ಕ್ಷೇಮ ಸ್ಥೈರ್ಯ ವೀರ್ಯ ವಿಜಯ ಪ್ರಾಪ್ತ್ಯೆರ್ಥಂ ಸಕಲ ದುಷ್ಠ ದೋಷ ಪರಿಹಾರಾರ್ಥಂ ಮನೋಕಾಮನಾ ಸಿಧ್ಯರ್ಥಂ ಶ್ರೇಯೋಭಿವೃಧ್ಧಿಗಾಗಿ ಈ ರೀತಿಯಾಗಿ ಸಂಕಲ್ಪ ಮಾಡುವುದು.

iii)  ಸ್ತ್ರೀಯರು ಅಭಿಷೇಕ ಪೂಜದಿಗಳನ್ನು ಮಾಡಿಸಿದರೆ ಅವರಿಗೆ ಅಖಂಡ ಸೌಭಾಗ್ಯ ಪ್ರಾಪ್ತಿಗಾಗಿ ಮತ್ತು ವಿದ್ಯಾರ್ಥಿಗಳು ಮಾಡಿಸಿದರೆ ಅವರ ಶಿಕ್ಷಣ ಅಭಿವೃಧ್ಧಿ ಸಲುವಾಗಿ ಮತ್ತು ಉದ್ಯೋಗಸ್ತರು ಉದ್ಯೋಗ ಅಭಿವೃಧ್ಧಿ ಸಲುವಾಗಿ ಸಂಕಲ್ಪ ಮಾಡುವುದು.

3)ಶ್ರೀ ಶಿವಚಿದಂಬರೇಶ್ವರ ವೇದ ಸಂಸ್ಕøತ ಪಾಠಶಾಲೇ ವಿಭಾಗ :
i) ಶ್ರೀ ಶಿವಚಿದಂಬರೇಶ್ವರ ವೇದ ಸಂಸ್ಕøತ ಪಾಠಶಾಲೆಗೆ ಪ್ರತಿ ವರ್ಷ ಚೈತ್ರ ಹಾಗು ವೈಶಾಖ ಮಾಸಗಳಲ್ಲಿ ಹೊಸದಾಗಿ ವಿದ್ಯಾರ್ಥಿಗಳನ್ನು ಆರಿಸಿ ಕೊಳ್ಳುತ್ತೇವೆ.

ii) ಪಾಠಶಾಲೆಯಲ್ಲಿ ಪ್ರವೇಶ ಮಾಡುವ ವಿದ್ಯಾರ್ಥಿಗಳ ವಯೋಮಿತಿ 10 ರಿಂದ 15 ವರ್ಷದಳೊಗಿರಬೇಕು.

iii) ವಿದ್ಯಾರ್ಥಿಗಳಿಗೆ ಹಿಂದು ವೈದಿಕ ಧರ್ಮ ಸಂಸ್ಕಾರ ಅನುಸಾರವಾಗಿ ಉಪನಯನವಾಗಿರಬೇಕು.

iv) ವಿದ್ಯಾಲಯದಲ್ಲಿ ಪ್ರವೇಶಿಸಲು ಪಾಲಕರ ಅನುಮತಿ ಪತ್ರ ಹಾಗು ಶಾಲೆಯ ಪಾಸಾದ ಎಲ್. ಸಿ. ಮೂಲ ಪ್ರತಿಯನ್ನು ತಂದು ಕೊಡಬೇಕಾಗುವುದು.

v) ವಿದ್ಯಾರ್ಥಿಗಳು ಕಡ್ಡಾಯವಾಗಿ ಚಂಡಕಿಯನ್ನು ಬಿಡಬೇಕು.

vi) ವಿದ್ಯಾರ್ಥಿಗಳು ಶುಭ್ರ ವಸ್ತ್ರ, ಧೋತರ ಪಂಚೆಯನ್ನು ಧರಿಸಬೇಕು.

vii) ಪಾಠಶಾಲೆಯಿಂದ ಶ್ರೀ ಕ್ಷೇತ್ರ ಪೀಠಾಧಿಕಾರಿಗಳ ಹಾಗು ಗುರುಗಳ ಅಪ್ಪಣೆ ಯಿಲ್ಲದೆ ಎಲ್ಲಿಗೂ ಹೋಗಬಾರದು.

viii) ವಿದ್ಯಾಲಯದ ಅಭ್ಯಾಸ ಕ್ರಮವು ಆರು ವರ್ಷದ ಮೂಲ ಸಂಹಿತೆ ಆಗಿರುತ್ತದೆ. ಅವರು ಇಚ್ಚಿಸಿದಲ್ಲಿ ಘನಾಂತ ಮಾಡಲು 12 ವರ್ಷ ಇರಲು ಅವಕಾಶ ಇರುತ್ತದೆ.

ix) ವಿದ್ಯಾರ್ಥಿಗಳು “ವಿದ್ಯಾ ತುರಾಣಾಂ ನಾ ಸುಖಂ ನಾ ನಿದ್ರಾ” ಎಂಬಂತೆ ವಿದ್ಯಾಭ್ಯಾಸ ಮುಗಿಯುವ ವರೆಗೆ ನೈಷ್ಠಿಕ ಬ್ರಹ್ಮಚರ್ಯದಿಂದ ಇರಬೇಕು.

x) ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ಸಂಘಟನೆ ಈ ಮೂರು ಅತ್ಯವಶ್ಯಕವಾಗಿರಬೇಕು.

xi) ಈ ಕ್ಷೇತ್ರದಲ್ಲಿ ಜರಗುವ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು.

xii) ವಿದ್ಯಾರ್ಥಿಗಳು ಪರಸ್ಪರ ಪ್ರೇಮದಿಂದ ಇರಬೇಕು. ಮತ್ತೊಬರ ವಸ್ತುಗಳನ್ನು ಅನುಮತಿ ಇಲ್ಲದೆ ಮುಟ್ಟಬಾರದು.

xiii) ವಿದ್ಯಾಲಯದ ನಿಯಮದಂತೆ ಸೂರ್ಯನಮಸ್ಕಾರ ವ್ಯಾಯಾಮಗಳನ್ನು ಮಾಡಬೇಕು.

xiv) ಪ್ರತಿ ವರ್ಷ ಪರೀಕ್ಷೆ ತೆಗೆದು ಕೊಳ್ಳಲಾಗುತ್ತದೆ. ಅದರೊಳಗೆ ಉಪೋಕ್ಷವಾಗಿ ಉತ್ತಿರ್ಣರಾದವರಿಗೆ ಯೋಗ್ಯ ರೀತಿಯ ಸತ್ಕಾರ ಹಾಗೂ ಪ್ರಶಸ್ತಿ ಪತ್ರಗಳನ್ನು ಕೊಡಲಾಗುವುದು.

xv) ಪ್ರತಿ ವರ್ಷ 1 ತಿಂಗಳ ರಜೆ ಕೊಡಲಾಗುವುದು.

xvi) ಚತುರ್ವೇದಗಳ ಹಾಗೂ ಶಾಸ್ತ್ರಗಳ ಅಧ್ಯಯನ ಮತ್ತು ಹಿಂದು ಧರ್ಮ ಗ್ರಂಥಗಳ ಶಿಕ್ಷಣವನ್ನು ಅವುಗಳ ನಿಯಮದ ಅನುಸಾರ ಹೇಳಿಕೊಡಲಾಗುವುದು.

xvii) ಈ ಪಾಠಶಾಲೆಯಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅಧ್ಯಯನ ಅವಧಿ ಮುಗಿದ ನಂತರ ಪೌರೋಹಿತ್ಯ ಅಥವಾ ಬೇರೆ ಬೇರೆ ಪಾಠಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆ ಮಾಡಬಹುದು.

4 ಹಿಂದೂ ಬ್ರಾಹ್ಮಣ ವರ-ಕನ್ಯಾ ನಿರ್ದೇಶನ ವಿಭಾಗ :
i) ಭಕ್ತರು ಈ ವಿಭಾಗಕ್ಕೆ ನೀಡಿದ ಕುಂಡಲಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು. ಅವರವರ ಕನ್ಯಾ – ವರ ಹೊಂದಾಣಿಕೆ ಮನಸ್ಸಿಗೆ ಬಂದರೆ ಅಂತಹವರಿಗೆ ನಿರ್ದೇಶನ ನೀಡುವುದು.

5) ಅರ್ಥ ವಿಭಾಗ:
i) ವಿವಿಧ ವಿಭಾಗಗಳಿಂದ ಬಂದ ಹಣವನ್ನು ಸಮಯೋಚಿತವಾಗಿ ಸಂರಕ್ಷಿಸುವುದು.

ii) ಸಮಯೋಚಿತವಾಗಿ ಆಯಾ ವಿಭಾಗಗಳಿಗೆ ಖರ್ಚು ಮಾಡುವುದು. ಲೆಕ್ಕ ಪತ್ರ ಇಡುವುದು.

iii) ಅವಶ್ಯಕತೆ ಅನುಸಾರ ಸಾಲದ ರೂಪದಿಂದ ಹಣ ತಂದು ಆ ಕಾರ್ಯಕ್ರಮವನ್ನು ನಡೆಸುವದು ನಂತರ ಸಾಲ ತೀರಿಸುವದು.

6)ಪಾಕ ಸೇವಾ ವಿಭಾಗ:
i) ಬೆಳಿಗ್ಗೆ 6:00 ರಿಂದ 7:00 ಚಹಾ, ಶುಂಠಿ, ಕಾಡೆ ತಯ್ಯಾರಿಸುವುದು.
ii) 9:00 ಘಂಟೆಗೆ ಅಲ್ಪೋಪಹಾರ ತಯ್ಯಾರಿಸುವುದು.
iii) 12:00 ರಿಂದ 1:00 ಮಹಾಪ್ರಸಾದ ತಯ್ಯಾರಿಸುವುದು.
iv) ಸಂಜೆ 5:00 ರಿಂದ 6:00 ಚಹಾ, ಕಾಫಿ ತಯ್ಯಾರಿಸುವುದು.
v) ರಾತ್ರಿ 8:00 ರ ಒಳಗೆ ಮಹಾಪ್ರಸಾದ ತಯ್ಯಾರಿಸುವುದು.

7) ಪಾತ್ರೆಗಳ ರಕ್ಷಣಾ ವಿಭಾಗ :
i) ಎಲ್ಲ ಪಾತ್ರೆಗಳನ್ನು ನಿತ್ಯ ಹಾಗು ಉತ್ಸವ ಮಹೋತ್ಸವಗಳಲ್ಲಿ ಅವಶ್ಯಕತೆಗೆ ಅನುಸಾರ ಉಪಿಯೋಗಿಸುವುದು ಮತ್ತು ರಕ್ಷಿಸುವುದು. ವಿವಿಧ ಕಾರ್ಯಗಳಿಗೆ ಬಾಡಿಗೆ ಮೂಲಕ ಪಾತ್ರೆಗಳನ್ನು ಒದಗಿಸುವದು. ಇದರಿಂದ ಬಂದ ಹಣವನ್ನು ಆರ್ಥಿಕ ವಿಭಾಗಕ್ಕೆ ಜಮಾ ಮಾಡುವುದು.

8)ಅಭಿಷೇಕ ಹಾಗೂ ವಿವಿಧ ಅರ್ಚನಾ ವಿಭಾಗ :
i) ಈ ಮೂಲ ಪೀಠದಿಂದ ಮಹಾಸ್ವಾಮಿಗಳಿಗೆ ಅಭಿಷೇಕ ಹಾಗು ಅರ್ಚನಾ ಸೇವೆ ಸಲ್ಲಿಸುವದು.
ii) ಭಕ್ತರಿಗೆ ಅಭೀಷೇಕ ಹಾಗೂ ಅರ್ಚನೆ ಮಾಡಿಸಲು ಅನುಮತಿ ಕೊಡುವದು.
iii) ನಿಗದಿತ ಶುಲ್ಕ ನೀಡಿದ ಭಕ್ತರು ಅವರ ಇಚ್ಛಾನುಸಾರ ಅಭೀಷೇಕ ಹಾಗೂ ಅರ್ಚನಾದಿಗಳನ್ನು ಮಾಡುವ ವ್ಯವಸ್ಥೆ ಮಾಡಿ ಅವರ ಹೆಸರು, ಗೋತ್ರ ವಿವರಣೆ ಪಡೆದು ಸಂಕಲ್ಪ ವಿಭಾಗಕ್ಕೆ ಅರ್ಹತಾ ಪತ್ರ ಕಳುಹಿಸಿಕೊಡುವುದು ನಂತರ ಅಭೀಷೇಕ ಹಾಗೂ ಅರ್ಚನಾದಿಗಳನ್ನು ಸಲ್ಲಿಸಿದವರಿಗೆ ಅಭೀಷೇಕ ಹಾಗೂ ಅರ್ಚನಾ ಪ್ರಸಾದ ವಿತರಣಾ ವಿಭಾಗದಿಂದ ವಿತರಿಸುವುದು.
iv) ಅಭೀಷೇಕ ಹಾಗೂ ವಿವಿಧ ಅರ್ಚನೆಗಳು ಈ ರೀತಿ ವ್ಯವಸ್ಥೆ ಇರುತ್ತದೆ.
• ಅಭೀಷೇಕ
• ಕುಂಕುಮಾರ್ಚನೆ
• ಬಿಲ್ವಾರ್ಚನೆ
• ಬುತ್ತಿ ಪೂಜೆ
• ಸತ್ಯ ಚಿದಂಬರ ಪೂಜಾ
• ಸತ್ಯ ನಾರಾಯಣ ಪೂಜಾ
• ಕ್ಷೀರಾಭಿಷೇಕ
• ನೈವೇದ್ಯ (ಅನ್ನ ಸಂತರ್ಪಣ)

9) ಎಮ್. ಓ. ವಿಭಾಗ ಭಕ್ತರು ದಾನಿಗಳು ಅವರ ಉದ್ದೇಶಗಳಲ್ಲಿರುವ ಸೇವೆ ಮತ್ತು ಇಚ್ಚಾನುಸಾರಕ್ಕಾಗಿ ಉಪಯೋಗಿಸು ಎಮ. ಓ. ಚೆಕ್, ಮೂಲಕ ಕಳಿಸಿಕೊಟ್ಟಂತ ಸೇವೆ ಅವರ ಇಚ್ಚಾನುಸಾರವಾಗಿ ಆ ಕಾರ್ಯಕ್ಕೆ ವಿನಿಯೋಗಿಸಿ ಭಕ್ತಾದಿಗಳಿಗೆ ಪೋಸ್ಟ ಮೂಲಕ ಪ್ರಸಾದ ಹಾಗೂ ಆಶೀರ್ವಾದ ಅರ್ಹತಾ ಪತ್ರಗಳನ್ನು ಕಳಿಸಿಕೊಡಲಾಗುವುದು.

10) ಶ್ರೀ ಶಿವಚಿದಂಬರೇಶ್ವರ ಭಕ್ತರ ವಿಳಾಸ ದಾಖಲಾತಿ ವಿಭಾಗ ಗ್ರಾಮ, ಪಟ್ಟಣ, ಶಹರ, ದೇಶ, ವಿದೇಶಗಳಲ್ಲಿರು ಭಕ್ತರ ವಿಳಾಸವನ್ನು ದಾಖಲಿಸಿಕೊಂಡು ಅವರಿಗೆ ಉತ್ಸವ ಆಮಂತ್ರಣ ಪತ್ರಿಕೆಗಳನ್ನು ಕಳಿಸಿಕೊಡಲಾಗುವುದು.

11) ಶ್ರೀ ಚಿದಂಬರ ದಿಂಡಿ ವಿಭಾಗ:
i) ದಿಂಡಿ ವಿಭಾಗದಿಂದ ಪ್ರತಿ ದಿವಸ ಸಾಯಂಕಾಲದಲ್ಲಿ ಶ್ರೀ ಚಿದಂಬರ ಸನ್ನಿಧಾನದಲ್ಲಿ ತಾಳ, ಮೃದಂಗ ಸಹಿತ ಆ ವಿಭಾಗದಿಂದ ಅಭಂಗ ಸೇವಾ ಪಠಣ ಮಾಡುವದು ಹಾಗು ಉತ್ಸವ ಮಹೋತ್ಸವದಲ್ಲಿ ತಾಳ, ಮೃದಂಗ, ನಿಶಾನೆ ಸಮೇತ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹಾಗು ದಿಂಡಿ ಭಜನಾ ವಿಭಾಗದಿಂದ ಸಮಯೋಚಿತ ಅಭಂಗ ಧ್ವನಿ ಸುರಳಿಗಳನ್ನು ಬಿಡುಗಡೆ ಮಾಡಿ ವಿತರಿಸುವುದು.
ii) ದಿಂಡಿ ವಿಭಾಗಕ್ಕೆ ನಿಯಮಿಸಿದ ಸಂತರು ಹಾಗು ಕಾರ್ಯಕರ್ತರು ದಿಂಡಿ ವಿಭಾಗದ ನಿಯಮದಂತೆ ಅನುಸರಿಸಬೇಕು. iii) ಅವಶ್ಯಕತೆ – ಅನುಕೂಲತೆ ನೋಡಿಕೊಂಡು ವಿವಿಧ ಗ್ರಾಮ, ಪಟ್ಟಣ, ಶಹರ, ದೇಶ, ವಿದೇಶಕ್ಕೆ ಹೋಗಿ ಚಿದಂಬರ ಭಜನೆ, ನಾಮಸಂಕೀರ್ತನೆ, ಭಕ್ತಿ ಸಂಪ್ರದಾಯ ಜಾಗೃತಿ ಮೂಡಿಸುವುದು. ಮತ್ತು ಅವಶ್ಯಕತೆಗೆ ಅನುಸಾರ ವಿವಿಧ ಸ್ಥಳಗಳಿಗೆ ಪಾದಯಾತ್ರೆ ಕೈಗೊಳ್ಳುವುದು.

12) ಅಥಿತಿ ಸೇವೆ ಹಾಗು ಅನ್ನದಾನ ವಿಚಾರಣಾ ವಿಭಾಗ:
ಶ್ರೀ ಕ್ಷೇತ್ರಕ್ಕೆ ಆಗಮಿಸಿದಂತ ಅತಿಥಿ ಅಭ್ಯಾಗತರಿಗೆ ಭಕ್ತಾದಿಗಳಿಗೆ ಅಲ್ಪೋಪಹಾರ, ಊಟದ ವ್ಯವಸ್ಥೆ ಮಾಡುವುದು ಹಾಗೂ ತಾವು ಎಲ್ಲಿಂದ ಬಂದಿದ್ದಿರಿ ಅಂತ ವಿಚಾರಣೆ ಮಾಡುವುದು ಹಾಗೂ ಅವರಿಗೆ ಇಳಿದುಕಳ್ಳಲು ವ್ಯವಸ್ಥೆ ಮಾಡುವುದು.

13) ಅಲ್ಪೋಪಹಾರ ಮತ್ತು ಅನ್ನದಾ£ ಮಹಾಪ್ರಸಾದ ವಿತರಣೆ ವಿಭಾಗ:
ಪಾಕ ಸೇವಾ ವಿಭಾಗ ತಯಾರಿಸಿದಂತೆ ಉಪಹಾರ ಹಾಗು ಮಹಾಪ್ರಸಾದ ಅನ್ನಛತ್ರದಲ್ಲಿ ವೇಳೆ ನಿಗದಿಪಡಿಸಿದಂತಹ ಸಮಯದಲ್ಲಿ ವಿತರಣೆ ಮಾಡುವುದು. ಉಪಸ್ಥಿತರಿದ್ದವರಿಗೆ ಕಾರ್ಯಕರ್ತರಿಗೆ ಪಾಠಶಾಲೆ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವುದು. ಭೋಜನ ಶಾಲೆಯಲ್ಲಿ ಶಾಂತತೆಯನ್ನು ಹಾಗು ನೈರ್ಮಲ್ಯತೆಯನ್ನು ಕಾಪಾಡಬೇಕು.

14)ಶ್ರೀ ಚಿದಂಬರ ಪ್ರಭೆ ಪತ್ರಿಕೆ ವಿಭಾಗ ಶ್ರೀ ಚಿದಂಬರ ಪ್ರಭೆ ಪತ್ರಿಕೆಯ ನಿಜವಾದ ಉದ್ದೇಶವನ್ನು ಈ ಮೂಲಕ ತಿಳಿಸುವುದು ಅಚಶ್ಯಕವೆಂದು ಭಾವಿಸುತ್ತೇವೆ. ನಮ್ಮ ನಾಡಿನ ದೇಶದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಡೆದರೇ ನಶಿಸುತ್ತಿರುವ ನಿಸ್ವಾರ್ಥ ಭಾವನೆ, ವಿಶಾಲವಾದ ಮಾನವೀಯತೆ, ಆತ್ಮೀಯ ಮನೋಭಾವವನ್ನು ಪುನರುತ್ಥಾನ ಮಾಡುವುದೆ ನಮ್ಮ ಉದ್ದೇಶನಾಗಿದೆ. ನಮ್ಮ ದೇವದ ವೇದ ಉಪನಿಷತ್ತುಗಳ ರಹಸ್ಯ ಮತ್ತು ತತ್ವಜ್ಞಾನದ ವೇದಾಂತದ ತಾತ್ಪರ್ಯಗಳನ್ನು ತಿಳಿದು ನಡೆಯುವ ಜನ ಕಡಿಮೆಯಾಗುತ್ತಿದ್ದಾರೆ ಎನ್ನುವದೇ ಶ್ರೀ ಚಿದಂಬರ ಪ್ರಭೆ ಪತ್ರಿಕೆಯ ಉದ್ದೇಶವಾಗಿದೆ. ಧಾರ್ಮಿಕ ಆಧ್ಯಾತ್ಮ ವಿಶಯಗಳು ಕಡೆಗೆ ಯಾರದು ಲಕ್ಷ್ಯವಿಲ್ಲ. ಇತ್ತಿಚಿಗೆ ಕೆಲವು ಅಶ್ಲೀಲ ಚಲನಚಿತ್ರಗಳು ಕೆಲವು ಪತ್ರಿಕೆಗಳು ಇಂದಿನ ಯುವಕ ಯುವತಿಯರ ಮೇಲೆ ಕೆಟ್ಟ ಪರಿಣಾಮವನ್ನು ಬಿರುತ್ತಿರುವ ವಿಷಯಗಳ ಉದಾಹರಣೆ ಬಹಳಷ್ಠಿವೆ. ಇದಕ್ಕೆ ಧಾರ್ಮಿಕ ಪತ್ರಿಕೆಗಳ ಪ್ರಕಟಣೆಯ ಪಾತ್ರ ಕೊರತೆ ಎಂಬುವುದೇ ಭಾವಿಸಲಾಗಿದೆ. ಮಾನವೀಯತೆ ಪರಿಕಲ್ಪನೆ ಇಲ್ಲದೆ ಸ್ವಾರ್ಥಭಾವನೆಗಳು ಧನ, ಅಧಿಕಾರ, ಪ್ರತಿಷ್ಠೆ ಅಹಂಭಾವದಿಂದ ಜನರು ಅಂಧಕಾರದಲ್ಲಿ ಪರಿತಪಿಸುತ್ತಿದ್ದಾರೆ. ಭವ್ಯ ಭಾರತದ ಶ್ರೇಷ್ಠ ಸಂಸ್ಕøತಿಯನ್ನು ಮರೆತು ಬಂದ ಹಾಗೆ ನಡೆಯುತ್ತಿದ್ದಾರೆ. ಆ ಆಧೂನಿಕ ಯುಗವು ಕೂಡಾ ಹೆಚ್ಚಾಗಿ ವಿಜ್ಞಾನ ತಂತ್ರಜ್ಞಾನಗಳಿಗೆ ಮಹತ್ವ ಕೊಡುತ್ತಾ ಸಾಗಿ ಸರ್ವರನ್ನು ಅತಂತ್ರ ಮಾಡುತ್ತಾ ಸಾಗಿದೆ. ಪ್ರಜ್ಞಾವಂತ ವಿದೇಶಿಯರು ಭಾರತೀಯ ಸನಾತನ ಧರ್ಮವು ಶ್ರೇಷ್ಠ ಧರ್ಮವೆಂದು ತಿಳಿದು ಭಾರತದತ್ತ ಆಗಮಿಸುತ್ತಿದ್ದಾರೆ. ಈ ಪುಣ್ಯ ಭೂಮಿಯಲ್ಲಿ ಜನಿಸಿದ ಮಹಾನ ಧಾರ್ಮಿಕ ಸಂಪ್ರದಾಯದ ವಾರಸುದಾರರಾದ ಭಾರತೀಯರಲ್ಲಿ ಅಲ್ಲೂ ಇಲ್ಲ ಇಲ್ಲೂ ಇಲ್ಲಿ ಇತ್ತಾಲಡದಲ್ಲಿ ತೇಲಾಡುತ್ತಿರುವದು ವಿಷಯ ಗಮನಕ್ಕೆ ಬರುತ್ತಿದೆ. ಇದರ ಫಲವಾಗಿ ಸಮಾಜದ ಸಮಸ್ಥ ರಂಗಗಳ ಋಜುತ್ವಕ್ಕೆ ಸಭ್ಯತೆಗೆ ಸುಸಂಸ್ಕøತಿಗೆ ಮನ್ನಣೆ ಕಡಿಮೆಯಾಗುತ್ತಿದೆ. ಇಂತಹ ಸಂಧಿಕಾಲದಲ್ಲಿ ನಮ್ಮ ಪುರಾತನ ಧಾರ್ಮಿಕ, ಆಧ್ಯಾತ್ಮಿಕ ಗ್ರಂಥಗಳ ಮೂಲ ಸಂದೇಶ ಹಾಗೂ ನೀತಿ ಮಾರ್ಗದ ಮೇಲೆ ತಿಳಿಸದ ಪರಿಸ್ಥಿತಿಯಲ್ಲಿ ಮುಳುಗಿದ ಜನರನ್ನು ಒಂದು ಪತ್ರಿಕೆಯ ಮೂಲಕ ಸನ್ಮಾರ್ಗದತ್ತ ಸಾಗಲು ಸಾಧನ ಮಾರ್ಗವಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳ ಕೃಪಾನುಗ್ರಹ ಪಡೆದು ಅವರ ಹೆಸರಿನಲ್ಲಿ ಶ್ರೀ ಚಿದಂಬರ ಪ್ರಭೆ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದೇವೆ.

i) ಅಪಾರವಾದ ಶ್ರೀ ಚಿದಂಬರ ಸಾಹಿತ್ಯ ಭಂಡಾರವನ್ನು ಹಂತ ಹಂತವಾಗಿ ಪತ್ರಿಕೆಯಲ್ಲಿ ಪ್ರಕಟಿಸುವದು.

ii) ಶ್ರೀ ಚಿದಂಬರ ನೀತಿ ಮಾರ್ಗಗಳನ್ನು ಹಾಗು ಮೂಲ ಕ್ಷೇತ್ರದಲ್ಲಿ ಜರಗಿದ ಕಾರ್ಯಕ್ರಮಗಳನ್ನು ಮತ್ತು ಶ್ರೀ ಕ್ಷೇತ್ರ ಸಮಾಚಾರವನ್ನು ಪ್ರಕಟಿಸುವದು.

iii) ಶ್ರೀ ಕ್ಷೇತ್ರದ ಕೃಪಾನುಗ್ರಹದಿಂದ ಪೋಷಿತರಾದ ಮನದಾಶೆತಳು ಪೂರ್ತಿಯಾಗಿ ಅವರಿಗಾದ ಅನುಭವವನ್ನು ಪತ್ರಿಕೆಯಲ್ಲಿ ಪ್ರಕಟಿಸುವದು.

iv) ಶ್ರಧ್ಧೆ, ಭಕ್ತಿ ಜ್ಞಾನ ಮೋಕ್ಷಸಾಧನೆ ಕುರಿತು ನಮ್ಮ ಸಂಪಾದಕೀಯದಲ್ಲಿ ಮತ್ತು ಬೇರೆ ಬೇರೆ ಲೇಖಕರ ಲೇಖನಗಳನ್ನು ಮತ್ತು ಆಧ್ಯಾತ್ಮಿಕ ದಾರಾವಾಹಿಗಳನ್ನು ಪ್ರಕಟಿಸುವದು.

v) ಜ್ಞಾನಾಮೃತವನ್ನು ಪಾನ ಮಾಡಿದ ಶ್ರೇಷ್ಠ ವದ್ವಾಂಸರು, ಸಾಹಿತಿಗಳು ಲೇಖನಗಳನ್ನು ಪ್ರಕಟಿಸುವದು.

vi) ಜ್ಞಾನಾಭಿವೃಧ್ಧಿಯ ಸಲುವಾಗಿ ಜ್ಞಾನ ಜ್ಯೋತಿ ಕಾರ್ಯಕ್ರಮವನ್ನು ಪತ್ರಿಕೆಯಲ್ಲಿ ಪ್ರಾರಂಭಿಸಿ ಅದರಲ್ಲಿ ಧಾರ್ಮಿಕ ಹಾಗೂ ಶ್ರೀ ಚಿದಂಬರ ಮಹಾಸ್ವಾಮಿಗಳ ಕುರಿತು ಪ್ರಶ್ನೆಗಳನ್ನು ಕೇಳಿ ಸರಿಯಾಗಿ ಉತ್ತರಿಸಿದವರಿಗೆ ಬಹುಮಾನ ವಿತರಿಸುವದು.

vii) ಶ್ರೀ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ, ಸಲ್ಲಿಸಲಿಚ್ಚಿದ ಭಕ್ತರ ಪರಿಚಯ ಮಾಡುವುದು.

viii.) ಶ್ರೀ ಚಿದಂಬರ ಪ್ರಭೆ ಪತ್ರಿಕೆಯ ವಾರ್ಷೀಕೋತ್ಸವ ಶುಭ ಸಂಧರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ, ಸಲ್ಲಿಸುತ್ತ ಮುಂದೆ ನಡೆದಿರುವ ವಿದ್ವಾಂಸರಿಗೆ ಹಾಗೂ ಸಾಹಿತಿಗಳಿಗೆ ಅದರ ಪೂರ್ವಕ ಸನ್ಮಾನ ಸಲ್ಲಿಸಲಾಗುವುದು.

ix) ಸಾಧು ಸಂತರ, ಋಷಿಮುನಿಗಳ ಕುರಿತು ಅವರ ದಿವ್ಯ ಜೀವನದ ಬಗ್ಗೆ ಸಮಂಜಸವಾಗಿ ಲೇಖನ ಪ್ರಕಟಿಸುವದು ಮತ್ತು ಶ್ರೀ ಚಿದಂಬರ ಸಾಹಿತ್ಯ ನಿರ್ಮಾಪಕರನ್ನು ಪರಿಚಯಿಸುವದು.

x) ಶ್ರೀ ಚಿದಂಬರ ಪ್ರಭೆ ಪತ್ರಿಕೆಗೆ ಮಹಾ-ಪೋಷಕರಾಗಿ, ಪೋಷಕ, ಆಜೀವ ಸದಸ್ಯ ಹಾಗು ವಾರ್ಷಿಕ ಚಂದಾದಾರರನ್ನಾಗಿ ಮಾಡುವುದು.

xii) ಪ್ರಕಟಿಸಬೇಕಾದ ಕೆಲವು ಸಾಹಿತ್ಯವನ್ನು ಶ್ರೀ ಚಿದಂಬರ ಪ್ರಭೆ ಜೊತೆಗೆ ಪತ್ರಿಕಯ ಪ್ರತ್ಯೇಕ ಪುರವಣಿಯನ್ನು ಅವಶ್ಯವೆನಿಸಿದಾಗ ಪ್ರಕಟಿಸುವುದು.

15) ಅಂಚೆ ಮೂಲಕ ಪ್ರಸಾದ ಕಳಿಸುವ ವಿಭಾಗ :
ಪರಸ್ಥಳ ಅಥವಾ ಶ್ರೀ ಕ್ಷೇತ್ರದಲ್ಲಿ ಸ್ವತ: ಹೆಸರು ನೋಂದಾಯಿಸಿ ಅಭಿಷೇಕ, ಅರ್ಚನೆ ಸೇವಾ ಸಲ್ಲಿಸುವವರಿಗೆ ಅಂಚೆ ಮೂಲಕ ಪ್ರಸಾದ ತಲುಪಿಸುವುದು.

16) ನಾದ ಬ್ರಹ್ಮ ಚಿದಂಬರ ಸಂಗೀತ ವಿಭಾಗ :

ಪ್ರತಿ ದಿವಸ ಉತ್ಸವ ಮಹೋತ್ಸವಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಶ್ರೀ ಚಿದಂಬರೇಶ್ವರ ಸನ್ನಿಧಾನದಲ್ಲಿ (ಸಭಾ ಮಂಟಪದಲ್ಲಿ) ನಿಗದಿ ಪಡಿಸಿದ ಸಮಯದಲ್ಲಿ ಚಿದಂಬರ ಸಂಗೀತ ಸೇವಾ ಕಾರ್ಯಕ್ರಮವನ್ನು ಶ್ರೀ ಸ್ವಾಮಿಗೆ ಸಮರ್ಪಿಸುವುದು. ಈ ವಿಭಾಗಕ್ಕೆ ನಿಯಮಿಸಿದ ಕರ್ಯಕರ್ತರು ನಿಯಮಾನುಸಾರವಾಗಿ ಅನುಸರಿಸಬೇಕು. ಅವಶ್ಯಕತೆ ಅನುಸಾರವಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳ ಭಕ್ತಿ ಗೀತೆಗಳ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡುವುದು. ಇದರಲ್ಲಿ ಹೊಸ ಹೊಸ ಸಂಗೀತ ಕಲಾವಿದರಿಗೆ ಕಂಠದಾನ ಮಾಡುವುದಕ್ಕೆ ಅವಕಾಶ ಮಾಡಿಕೊಡುವುದು. ಕವಿಗಳು, ಸಾಹಿತಿಗಳು, ಶ್ರೀ ಚಿದಂಬರ ಸಾಹಿತ್ಯ ಪದ್ಯ ರಚಿಸಿದಂತಹ ಸಾಹಿತ್ಯವನ್ನು ಅವಶ್ಯಕತೆಗನುಗುಣವಾಗಿ ಧ್ವನಿ ಸುರುಳಿಯಲ್ಲಿ ಪ್ರಕಟಿಸುವದು. ಅಲ್ಲದೆ “ ನಾದ ಬ್ರಹ್ಮ ಚಿದಂಬರ ಸಂಗೀತ ” ಇದು ಧ್ವನಿ ಸುರುಳಿಗಳ ಟ್ರೇಡಮಾರ್ಕ ಇರುತ್ತದೆ.


17) ಸಂಚಾರ ಆಮಂತ್ರಣ ಆಶೀರ್ವಾದ ವಿಭಾಗ :
ಶ್ರೀ ಚಿದಂಬರ ಮೂಲಪೀಠ ಸಂಸ್ಥಾನದ ಪೀಠಾಧಿಕಾರಿಗಳು ಗ್ರಾಮ, ಪಟ್ಟಣ, ಶಹರ, ದೇಶ, ವಿದೇಶಗಳಲ್ಲಿ ಇರುವಂತಹ ನಮ್ಮ ಭಕ್ತರ ಮನೆ ಮನೆಗೆ ವರ್ಷಕ್ಕೊಮ್ಮೆ ಸಂಚಾರ ಕೈಗೊಂಡು ಶ್ರೀ ಚಿದಂಬರೇಶ್ವರ ಉತ್ಸವ ಆಮಂತ್ರಣ ಪತ್ರಿಕೆಗಳನ್ನು ಕೊಡುವದು ಹಾಗೂ ಶ್ರೀ ಕ್ಷೇತ್ರದ ಪ್ರಸಾದ, ಮಂತ್ರಾಕ್ಷತೆಗಳನ್ನು ಮತ್ತು ಆಶೀರ್ವಾದವನ್ನು ಕೊಡುವುದು ಇದು ಕ್ಷೇತ್ರದ ಹಿಂದಿನಿಂದ ಬಂದ ಪರಂಪರೆ ಆಗಿದೆ.
ಈ ಸಂಧರ್ಭದಲ್ಲಿ ಭಕ್ತಾದಿಗಳು ಸಲ್ಲಿಸಿದ ಸೇವೆಯನ್ನು ಚಿದಂಬರ ಉತ್ಸವ ಹಾಗೂ ಅನ್ನದಾನ ಉದ್ದೇಶಿತ ಕ್ಷೇತ್ರದ ಕಾರ್ಯಕ್ಕೆ ಯಪಯೋಗಿಸುವುದು.

18) ಸ್ವಚ್ಚತಾ ವಿಭಾಗ :
i) ಶ್ರೀ ಕ್ಷೇತ್ರದ ಒಳಗಿನ ಹಾಗೂ ಹೊರಗಿನ ಆವರಣ ಹಾಗೂ ಪರಿಸರವನ್ನು ಸ್ವಚ್ಚವಾಗಿ ಮಾಡುವದು.
ii) ಅನ್ನಛತ್ರದ ಪಾತ್ರೆಗಳನ್ನು ಹಾಗು ಛತ್ರವನ್ನು ಚೊಕ್ಕಟವಗಿಡುವುದು.
iii) ಶ್ರೀ ಕ್ಷೇತ್ರದ ಸ್ನಾನದ ಹಾಗೂ ಸ್ವಚ್ಚತಾ ಗ್ರಹಗಳನ್ನು ಶುಚಿತ್ವವನ್ನು ಕಾಪಾಡುವುದು.
iv) ವಸತಿ ಗೃಹಗಳನ್ನು ಸ್ವಚ್ಚವಾಗಿಡುವುದು.

19)ಶ್ರೀ ಚಿದಂಬರ ಸಾಹಿತ್ಯ ಸಂಗ್ರಹ ಹಾಗೂ ರಕ್ಷಣಾ ವಿಭಾಗ: ಶ್ರೀ ಚಿದಂಬರ ಶಿಷ್ಯರು ಸಂತರು ಭಕ್ತರಾದಂಥ:
i) ದಾಸ ರಾಜಾರಾಮ ಹಾಗೂ ಸಂತ ವಿಠಾಬಾಯಿ
ii) ಸಖಾರಾಮ ಗರ್ದೆ
iii) ಶಿವ ಶಾಸ್ತಿಗಳು
iv) ರಾಮಚಂದ್ರ ಭೋಜಪುತ್ರ ದೇಶಪಾಂಡೆ.
v) ಶ್ರೀ ಸಾಂಬ ದೀಕ್ಷೀತರು ಇನ್ನೂ ಕೆಲವು ಸಂತರು, ಸಾಹಿತಿಗಳು, ಕವಿಗಳು ರಚಿಸಿದಂಥ ಸಾಹಿತ್ಯವನ್ನು ಸಂರಕ್ಷಿಸಿ ಕಾಪಾಡುವುದು.
vi) ನವೀನ ಶ್ರೀ ಚಿದಂಬರ ಸಾಹಿತ್ಯವನ್ನು ಸಂಗ್ರಹಿಸಿ ಅಭಿವೃಧ್ಧಿ ಪಡಿಸುವುದು.
vii)  ಶ್ರೀ ಚಿದಂಬರ ಸಾಹಿತ್ಯ ರಚಿಸುವರನ್ನು ಪ್ರೋತ್ಸಾಹಿಸಿ ಗೌರವಿಸುವುದು.

20) ಶ್ರೀ ಚಿದಂಬರ ಸಂಶೋಧನ ಹಾಗೂ ಭಾಷಾಂತರ ವಿಭಾಗ :
i) ದಾಸ ರಾಜಾರಾಮ, ಸಂತ ವಿಠಾಬಾಯಿ, ಸಖಾರಾಮ ಗರ್ದೆ, ಶಿವ ಶಾಸ್ತಿಗಳು, ರಾಮಚಂದ್ರ ಭೋಜಪುತ್ರ ದೇಶಪಾಂಡೆ ವಿರಚಿತ ಸಂಸ್ಕøತ ಹಾಗು ಮರಾಠಿಯಲ್ಲಿರುವ ಸಾಹಿತ್ಯ ಹಾಗೂ ಮಹತ್ಮ್ಯೆಯನ್ನು ಸಂಶೋಧಿಸುವುದು ಹಾಗು ಭಾಷಾಂತರಿಸುವುದು.
ii) ಈ ಕಾರ್ಯಕ್ಕಾಗಿ ಕೆಲವು ಸಂಶೋಧಕರನ್ನು ಭಾಷಾಂತರ ಮಾಡುವುದಕ್ಕೆ ತಜ್ಞ ಪಂಡಿತರನ್ನು ನೇಮಿಸುವುದು.

21) ಶ್ರೀ ಚಿದಂಬರ ಸಾಹಿತ್ಯ ಪ್ರಕಾಶನ ವಿಭಾಗ : ಶ್ರೀ ಚಿದಂಬರ ಸಾಹಿತ್ಯ ಪ್ರಕಾಶನ ವಿಭಾಗದಿಂದ ಸಂಶೋಧಿಸಲ್ಪಟ್ಟ ಸಾಹಿತ್ಯವನ್ನು ಪ್ರಕಾಶನಗೊಳಿಸುವುದು. ಶ್ರೀ ಚಿದಂಬರ ಹಾಗು ಶ್ರೀ ಕ್ಷೇತ್ರದ ಮಹತ್ವ , ಸ್ತೋತ್ರ , ನಾಮಾವಳಿ , ಭಕ್ತಿ ಸಂಪ್ರದಾಯ ಆಚರಣೆ ಗ್ರಂಥ, ಶ್ರೀ ಕ್ಷೇತ್ರದ ನೀತಿ ನಿಯಮಾವಳಿಗಳ ಕುರಿತು ಪುಸ್ತಕಗಳನ್ನು ಪ್ರಕಾಶನ ಮಾಡುವುದು. ಇದು ಅಲ್ಲದೆ ಹಿಂದು ವೈದಿಕ, ಆಧ್ಯಾತ್ಮಿಕ, ವೇದಾಂತಿಕ , ಧರ್ಮ ಶಾಸ್ತ್ರ, ಪುರಾಣ ಮುಂತಾದ ಗ್ರಂಥಗಳನ್ನು ಪ್ರಕಾಶನ ಮಾಡುವುದು.

22) ಶ್ರೀ ಚಿದಂಬರ ಕಂಪ್ಯೂಟರ್ಸ ಮತ್ತು ಅಕ್ಷರ ಜೋಡಣೆ ವಿಭಾಗ : ಶ್ರೀ ಚಿದಂಬರ ಸಾಹಿತ್ಯವನ್ನು ಮುದ್ರಣ ಪೂರ್ವದಲ್ಲಿ ಅಕ್ಷರ ಜೋಡಣೆ ಮಾಡುವುದು. ಶ್ರೀ ಚಿದಂಬರ ಸಾಹಿತ್ಯವನ್ನು ಕಂಪ್ಯೂಟರನಲ್ಲಿ ಸಂಗ್ರಹಿಸಿ, ಸಂರಕ್ಷಿಸಿ ಅದನ್ನು ಇಂಟರನೆಟ್ ಮೂಲಕ ಪ್ರಸಾರ ಮಾಡುವುದು. ಅಲ್ಲದೆಯೆ ಜಾಬ ವರ್ಕ ಮಾಡುವುದು.

23) ಶ್ರೀ ಚಿದಂಬರ ಅನುಗ್ರಹ ಆಶೀರ್ವಾದ ವಿಭಾಗ : ಭಕ್ತರು ಅನೇಕ ಅಥವಾ ವಿವಿಧ ಸಮಸ್ಯೆಗಳು, ತೊಂದರೆ, ಕೌಟುಂಬಿಕ ತಾಪತ್ರಯಗಳಲ್ಲಿ ನೊಂದು ಬಂದವರಿಗೆ ಸಂತೈಸಿಸಿ, ಅವರಿಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಚಿದಂಬರ ಸೇವಾ, ಜಪ, ಪಾರಾಯಣ, ಪ್ರದಕ್ಷಿಣ, ಮಾಡಲು ತಿಳಿಸುವುದು ಮತ್ತು ಅವರಿಗೆ ಅನುಗ್ರಹ ಆಶೀರ್ವಾದ ನೀಡಿ ಫಲ ಮಂತ್ರಾಕ್ಷತೆಗಳನ್ನು ನೀಡುವುದು. ಹಾಗು ದರ್ಶನಾರ್ಥಿಗಳಿಗೂ ಶ್ರೀ ಚಿದಂಬರ ಅನುಗ್ರಹ ಆಶೀರ್ವಾದವನ್ನು ಪೀಠಾಧಿಕಾರಿಗಳು ದಯಪಾಲಿಸುವರು.

24) ಅಭಿಷೇಕ ಹಾಗೂ ಅರ್ಚನಾ ಪ್ರಸಾದ ಫಲ ವಿತರಣ ವಿಭಾಗ : ಸಂಕಲ್ಪ ವಿಭಾಗದಲ್ಲಿ ಸಂಕಲ್ಪಿಸಿದಂಥ ಭಕ್ತರಿಗೆ, ಅರ್ಚನಾ, ಫಲ, ಮಂತ್ರಾಕ್ಷತೆಗಳು ಹಾಗು ಪ್ರಸಾದ ವಿತರಿಸುವುದು.

25) ಶ್ರೀ ಚಿದಂಬರ ನಾಮ ದೀಕ್ಷಾ ಗುರೂಪದೇಶ ವಿಭಾಗ : ಶ್ರೀ ಚಿದಂಬರ ಭಕ್ತಾದಿಗಳು ಶ್ರೀ ಚಿದಂಬರ ಭಕ್ತ ಸಂಪ್ರದಾಯ, ಮೂಲ ಮಂತ್ರ, ಗುರು ಉಪದೇಶ ಪಡೆಯುವವರು ಈ ಕೆಳಕಂಡ ನಿಯಮಾವಳಿಗಳನ್ನು ಪಾಲಿಸಬೇಕು. ಪೀಠಾಧಿಕಾರಿಗಳಿಂದ ನಾಮ ದೀಕ್ಷೆ ಕೊಡಿಸಬೇಕು:

i) ಭಕ್ತಾದಿಗಳು ಸ್ತ್ರೀ - ಪುರುಷರು ಯಾವುದೇ ಭೇದ ಭಾವವಿಲ್ಲದೆ ನಾಮ ದೀಕ್ಷೆ ಪಡೆಯಬಹುದು.

ii) ಭಕ್ತಾದಿಗಳು 15 ವರ್ಷಕ್ಕಿಂತ ಮೇಲ್ಪಟ್ಟವರಿರಬೇಕು ಮತ್ತು ದುಶ್ಚಟಗಳಿದ ಮುಕ್ತರಾಗಿರಬೇಕು.

iii) ಶ್ರೀ ಚಿದಂಬರ ನಾಮ ಉಪದೇಶ ಪಡೆದ ಮೇಲೆ ಪ್ರಾತ:ಕಾಲ ಮತು ಸಂಜೆ ನಿತ್ಯ 108 ನಾಮ ಜಪ ತಪ್ಪದೇ ಮಾಡಬೇಕು.

iv) ಉಪದೇಶ ಪಡೆದವರು ದಿನಾಲು ಸ್ನಾನದ ನಂತರ ಶ್ರೀ ಚಿದಂಬರ ಪ್ರತಿಮೆ ಅಥವಾ ಭಾವಚಿತ್ರವನ್ನು ಪೂಜಿಸಬೇಕು.

v) ಶಿಕ್ಷಣ, ಉದ್ಯೊಗ ಹಾಗು ಸಂಸಾರಗಳಲ್ಲಿ ವೇಳೆ ಮಾಡಿಕೊಂಡು ಧ್ಯಾನ, ಜಪ, ತಪಗಳನ್ನು ಮಾಡಬೇಕು.

vi) ಪ್ರವಾಸ ಕಾಲದಲ್ಲಿಯೂ ಮೇಲಿನ ನಿಯಮಗಳನ್ನು ಬಿಡಬಾರದು.

vii) ಸೂತಕ ಬಂದಾಗ ಮಾನಸೋಪಚಾರ ಪೂಜೆ ಹಾಗೂ ಜಪ ಮಾಡಬೇಕು.

viii) ಶ್ರೀ ಚಿದಂಬರ ನಾಮ ದೀಕ್ಷೆ ಪಡೆದ ನಂತರ ಭಕ್ತಿ ಸಂಪ್ರದಾಯದ ನಿಯಮ ಪಾಲಿಸಬೇಕು.

ix) ಶ್ರೀ ಚಿದಂಬರ ನಾಮ ದೀಕ್ಷೆ, ಗುರೂಪದೇಶ ಪಡೆದ ಮೇಲೆ ನಾಮಸ್ಮರಣೆ, ಧ್ಯಾನ ಮಾಡುವುದಕ್ಕೆ ಅಧಿಕಾರ ಬರುತ್ತದೆ.

x) ನಾಮ ದೀಕ್ಷೆ ಪಡೆದ ಮೇಲೆ ಮನುಷ್ಯತ್ವದಿಂದ ದೇವತ್ವದ ಕಡೆಗೆ ಸಾಗುವ ಸಾಧನಾಮಾರ್ಗವಾಗಿರುತ್ತದೆ. ಭಕ್ತ ಲೌಕಿಕ, ಪಾರಮಾರ್ಥಿಕ ಸಾಧನೆಯಿಂದ ಮೋಕ್ಷ ಪ್ರಾಪ್ತಿ, ಆತ್ಮಜ್ಞಾನ, ಪರಮಾತ್ಮನ ದರ್ಶನ ಪಡೆಯಬಹುದಾಗಿದೆ. ಇದು ಸಾಧನೆಯಿಂದ ಸಿಧ್ಧಿಸುತ್ತದೆ.

xii) ಶ್ರೀ ಚಿದಂಬರ ನಾಮ ದೀಕ್ಷೆ ಪಡೆದ ಮೇಲೆ ಭಗವದ್ ಭಕ್ತನಾಗುತ್ತಾನೆ. ಇದು ಅವನಿಗೆ ಒಂದು ಸಂಸ್ಕಾರ.

xiii) ಶ್ರೀ ಚಿದಂಬರ ನಾಮ ದೀಕ್ಷೆ ಪಡೆದ ಮೇಲೆ ಭಗವದ್ ಭಕ್ತನು ಪ್ರತಿ ವರ್ಷದಲ್ಲಿ ಶ್ರೀ ಚಿದಂಬರ ಮೂಲಕ್ಷೇತ್ರಕ್ಕೆ ಬರುವ ವಾಡಿಕೆ (ವಾರಿ) ಅನುಸಾರ ಬರಬೇಕು. ದರ್ಶನ, ಆಶೀರ್ವಾದ ಪ್ರಸಾದ ಪಡೆಯಬೇಕು.
a) ವೈಶಾಖ ಶುಧ್ಧ ಷಷ್ಠಿ ಶ್ರೀ ಚಿದಂಬರ ಪ್ರತಿಷ್ಠಾ ವಾರ್ಷಿಕೋತ್ಸವ.
b) ಶ್ರಾವಣೋತ್ಸವ.
c) ಕಾರ್ತಿಕ ವದ್ಯ ಷಷ್ಠಿಯಿಂದ ಮಾರ್ಗಶೀರ್ಷ ಶುಧ್ಧ ಸಪ್ತಮಿಯವರೆಗೆ ಜರುಗುವ ಶ್ರೀ ಚಿದಂಬರ ಅವತಾರ ಜಯಂತಿ ಮತ್ತು ಶೈವಾಗಮೋಕ್ತ ಮಹೋತ್ಸವಕ್ಕೆ ಬರುವ ವಾಡಿಕೆ ನಡೆಸಿಕೊಂಡು ಹೋಗಬೇಕು. ಇದಲ್ಲದೆ ತಮ್ಮ ಇಛ್ಛಾನುಸಾರ ಶ್ರೀ ಕ್ಷೇತ್ರಕ್ಕೆ ಬರಬಹುದು.

26) ಸ್ವಾಗತ ವಿಭಾಗ :
ಅತಿಥಿ ಅಭ್ಯಾಗತರಿಗೆ, ದಿಂಡಿಗಳಿಗೆ, ಭಕ್ತರಿಗೆ ಸ್ವಾಗತಿಸುವುದು.

27) ಸನ್ಮಾನ ವಿಭಾಗ :
i) ಶ್ರೀ ಚಿದಂಬರ ಮೂಲ ಕ್ಷೇತ್ರಕ್ಕೆ ಪಾದಯಾತ್ರೆ ಹಾಗೂ ವಿವಿಧ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಸದ್ಭಕ್ತರನ್ನು, ವಿವಿಧ ಕ್ಷೇತ್ರಗಳಾದ ಸಾಹಿತ್ಯ , ಕಲೆ, ಶಿಲ್ಪಕಲೆ, ಚಿತ್ರಕಲೆ, ವೈದ್ಯಕೀಯ ಸೇವೆ, ನೃತ್ಯ ಕಲೆ, ನಾಟಕ, ಚಿತ್ರರಂಗ, ಶ್ರೀ ಚಿದಂಬರ ಪ್ರಭೆ ಪತ್ರಿಕೆಯ ಅಜೀವ ಹಾಗು ಪೋಷಕರನ್ನು, ವಾಸ್ತು ಶಾಸ್ತ್ರ, ವೇದ ವಿಪ್ರೋತ್ತಮರಿಗೆ, ಗಣ್ಯರಿಗೆ ಶಾಲು, ಶ್ರೀ ಫಲ ಹಾಗೂ ಮಂತ್ರಾಕ್ಷತೆಗಳಿಂದ ಸನ್ಮಾನ ಪತ್ರ ಸಮೇತ ಸನ್ಮಾನಿಸಲಾಗುವುದು.
ii) ಪಾದಯಾತ್ರೆ, ದಿಂಡಿ ಭಕ್ತಾದಿಗಳನ್ನು, ತನು-ಮನ-ಧನ ಹಾಗು ಧಾನ್ಯ, ಮುಷ್ಠಿ ಭಿಕ್ಷೆ ಅಕ್ಕಿ ಹಾಗು ಧಾನ್ಯಗಳನ್ನು ದಾನ ಮಾಡುತ್ತಿರುವ ಗೃಹಿಣಿಯರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಗುವುದು.

28)ವಸ್ತ್ರ ದಾನ ವಿಭಾಗ :
ಶ್ರಾವಣ ಮಾಸದ ಕೊನೆಯ ದಿನ ಶ್ರಾವಣೋತ್ಸವದಲ್ಲಿ ಈ ಕೆಳಕಂಡ ಸೇವೆ ಸಲ್ಲಿಸಿದವರಿಗೆ, ವಸ್ತ್ರ ದಾನ ಮಾಡುವುದು.
i) ವೈದಿಕ ವೃಂದ
ii) ಬಿಲ್ವಾರ್ಚನೆ ಸೇವೆ
iii)  ಪುರಾಣ ಸೇವೆ
iv) ಸಂಗೀತ ಮತು ವಾಂಗ್ಮೀಯ ಸೇವೆ
vi) ಸಾಂಪ್ರದಾಯಿಕ ಭಜನೆ
vii) ನಗರ ಸಂಕೀರ್ತನ ಸೇವೆಯಲ್ಲಿ ಸೇವೆ ಸಲ್ಲಿಸಿದ ಭಜನಾ ಮಂಡಳಿಗಳಿಗೆ, ಉತ್ಸವ, ಅವತಾರ ಜಯಂತಿ, ಶೈವಾಗಮಹೋತ್ಸವದಲ್ಲಿ ಈ ಕೆಳಕಂಡ ಸೇವೆ ಸಲ್ಲಿಸುವವರಿಗೆ:
• ವೈದಿಕ ವೃಂದ
• ಗಡೇಕರ
• ಆಮಂತ್ರಣ ಸಂಚಾರ ವಿಭಾಗದ ಕಾರ್ಯಕರ್ತರಿಗೆ ಹಾಗು ಸಿಬ್ಬಂಧಿಗಳಿಗೆ ವಸ್ತ್ರ ದಾನ ಮಾಡುವುದು.

29)ಕೋಠಿ ಖೋಲಿ (ಕಿರಾಣಿ) ಧಾನ್ಯ ಸಂಗ್ರಹ ಹಾಗೂ ವಿತರಣೆ ವಿಭಾಗ :
i) ಅನ್ನದಾನಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳನ್ನು (ಕಿರಾಣಿ) ಸಂಗ್ರಹಿಸುವುದು.
ii) ಮುಷ್ಠಿ ಭಿಕ್ಷೆ ಯೋಜನೆಯಿಂದ ಹಾಗೂ ದಾನಿಗಳಿಂದ ಸಂಗ್ರಹವಾದ ಧಾನ್ಯಗಳನ್ನು ನಿತ್ಯ ಅನ್ನದಾನಕ್ಕೆ ವಿತರಿಸುವುದು.

30) ಸಾಮುಹಿಕ ಶ್ರೀ ಸತ್ಯ ಚಿದಂಬರ ಪೂಜಾ ವಿಭಾಗ :
ಪ್ರತಿ ಸೋಮವಾರ (ಶ್ರಾವಣ) ಶ್ರೀ ಕ್ಷೇತ್ರದಲ್ಲಿ ಶ್ರೀ ಸತ್ಯ ಚಿದಂಬರ ಪೂಜಾ ಕೈಗೊಳ್ಳುವುದು. ಈ ಪೂಜೆಯನ್ನು ಶ್ರೀ ಕ್ಷೇತ್ರ ಪೀಠದಿಂದ ಕೈಗೊಳ್ಳಲಾಗುವುದು. ಉತ್ಸವ ಮಹೋತ್ಸವಗಳಲ್ಲಿ ಸಾಮೂಹಿಕ ಶ್ರೀ ಸತ್ಯ ಚಿದಂಬರ ಪೂಜಾ ಕೈಗೊಳ್ಳಲಾಗುವುದು. ಭಕ್ತಾದಿಗಳು ಇಚ್ಛಿಸಿದಲ್ಲಿ ಪ್ರತಿ ಸೋಮವಾರ ಶ್ರೀ ಕ್ಷೇತ್ರದಲ್ಲಿ ಶ್ರೀ ಸತ್ಯ ಚಿದಂಬರ ಪೂಜೆ ನೆರವೇರಿಸಲು ಅನುವು ಮಾಡಿಕೊಡಲಾಗುತ್ತದೆ.

31)ಸಾಮುಹಿಕ ಶ್ರೀ ಸತ್ಯ ನಾರಾಯಣ ಪೂಜಾ ವಿಭಾಗ :
ಉತ್ಸವ ಮಹೋತ್ಸವಗಳಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಗುವುದು. ಇದರಲಿ ್ಲ ಭಕ್ತಾದಿಗಳು ಪೂಜಾ ಮಾಡಲು ಅನುಕುಲ ಮಾಡಿಕೊಡಲಾಗುತ್ತದೆ.

32) ಸಾಮುಹಿಕ ಕುಂಕುಮಾರ್ಚನೆ ವಿಭಾಗ :
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮತ್ತು ಉತ್ಸವ ಮಹೋತ್ಸವಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ ಸೇವೆಯನ್ನು ಮಾಡಲಾಗುವುದು. ಈ ಸೇವೆಯಲ್ಲ್ಲಿ ಭಕ್ತಾದಿಗಳಿಗೆ ಪೂಜೆ ಮಾಡಲು ಅನುಕುಲ ಮಾಡಿಕೊಡಲಾಗುತ್ತದೆ.

33) ಶ್ರೀ ಕ್ಷೇತ್ರ ಅಬಿವೃಧ್ಧಿ ವಿಭಾಗ :
ಶ್ರೀ ಕ್ಷೇತ್ರ ಸಂಸ್ಥಾನದ ಆದಾಯದಲ್ಲಿ ಸರ್ವತೋಮುಖ ಅಬಿವೃಧ್ಧಿಗೋಸ್ಕರವಾಗಿ ಅವಶ್ಯಕತೆಗೆ ಅನುಸಾರವಾಗಿ ಹಿಂದಿನ ಮೂಲ ಧಾರ್ಮಿಕ ಸ್ಮಾರಕಗಳನ್ನು ಜಿರ್ಣೋದ್ಧಾರಗೊಳೀಸುವುದು ಹಾಗು ವಿವಿಧ ನೂತನ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಮತ್ತು ಯಾವುದೇ ಅಬಿವೃಧ್ಧಿ ಕಾರ್ಯವನ್ನು ನಿರ್ಮಾಣ ಮಾಡುವುದು ಹಾಗು ಉದ್ಯಾನವನಗಳನ್ನು ನಿರ್ಮಾಣ ಮಾಡುವುದು.

34) ಗೋಶಾಲಾ ವಿಭಾಗ :
ಧಾರ್ಮಿಕ ಹಿಂದುಗಳು ಗೋವುಗಳನ್ನು ಪೂಜಿಸುತ್ತ ಬಂದಿದ್ದಾರೆ. ಶ್ರೀ ಚಿದಂಬರ ಮಹಾಸ್ವಾಮಿಗಳು ಗೋವುಗಳಿಗೆ ತುಂಬ ಮಹತ್ವವನ್ನು ಕಟ್ಟಿದ್ದಾರೆ. ಗೋಶಾಲಾ ಗೋವುಗಳನ್ನು ಸಂರಕ್ಷಿಸುವುದು. ಅವುಗಳಿಗೆ ಆಹಾರ ವದಗಿಸುವುದು ಹಾಗು ಅದರಿಂದ ಬಂದ ಕ್ಷೀರವನ್ನು ಶ್ರೀ ಸ್ವಾಮಿಯ ಅಭಿಷೇಕಕ್ಕೆ ಹಾಗು ಅನ್ನಛತ್ರಕ್ಕೆ ಉಪಯೋಗಿಸಲಾಗುವುದು. ಭಕ್ತಾದಿಗಳು ಗೋವುಗಳನ್ನು ದಾನ ಕೊಟ್ಟಲ್ಲಿ ಆ ಗೋವುಗಳನ್ನು ಸಂರಕ್ಷಿಸುವುದು.

35) ಸಾಮುಹಿಕ ಶ್ರೀ ಚಿದಂಬರ ನಾಮ ಜಪ ಮತ್ತು ಜಪಯಜ್ಞ ವಿಭಾಗ :
1) ವಿಶ್ವಕಲ್ಯಾಣ ಹಾಗೂ ಶಾಂತಿಗೋಸ್ಕರವಾಗಿ ಸಾಮುಹಿಕ ನಾಮ ಜಪ ಕೈ ಗೊಂಡು ಜಪಯಜ್ಞ ಹಾಗು ಹೋಮ ಹವನ ಮಾಡುವುದು.
2) ಭಕ್ತರು ಇಚ್ಛಿಸಿದಲ್ಲಿ ವ್ಯಯಕ್ತಿಕ ಹಾಗು ಸಂಘ ಸಂಸ್ಥೆಗಳ ಮೂಲಕ ಜಪಯಜ್ಞ ಮಾಡುವವರಿಗೆ ಅನುವು ಮಾಡಿಕೊಡುವುದು.

36) ಶ್ರೀ ಚಿದಂಬರ ಭಾವ ಚಿತ್ರ ವಿಭಾಗ :
ಶ್ರೀ ಮೂಲಪೀಠ ಕ್ಷೇತ್ರ ಸಂಸ್ಥಾನದಿಂದ ಶ್ರೀ ಚಿದಂಬರ ಮಹಾಸ್ವಾಮಿಗಳ ಭಾವಚಿತ್ರವನ್ನು ಮುದ್ರಿಸಿ ವಿತರಿಸುವುದು. ಸಾರ್ವಜನಿಕರು ತಮಗೆ ತಿಳಿದ ರಿತಿಯಲ್ಲಿ ಬೇರೆ ಬೇರೆ ಭಾವಚಿತ್ರವನ್ನು ಮುದ್ರಿಸಬಾರದು.

37) ವಿವಿಧ ಶ್ರೀ ಚಿದಂಬರ ದಿಂಡಿಗಳ ಪಾದಯಾತ್ರಾ ಸೇವಾ ಹಾಗೂ ಸದ್ಭಕ್ತರು ಸಲ್ಲಿಸಿದ ವಿವಿಧ ಸೇವಾ ದಾಖಲಾತಿ ವಿಭಾಗ :

ಪ್ರತಿ ವರ್ಷ ಶ್ರೀ ಕ್ಷೇತ್ರಕ್ಕೆ ಶ್ರಾವಣ ಮಾಸ ಹಾಗೂ ಶ್ರೀ ಚಿದಂಬರ ಅವತಾರ ಜಯಂತಿ ಶೈವಾಗಮೋಕ್ತ ಮಹೋತ್ಸವದಲ್ಲಿ ವಿವಿಧ ಗ್ರಾಮ, ಪಟ್ಟಣ, ಶಹರಗಳಿಂದ ಶ್ರೀ ಚಿದಂಬರ ಭಕ್ತಾದಿಗಳು ಪಾದಯಾತ್ರೆ ದಿಂಡಿಗಳನ್ನು ಕೈಗೊಂಡು ಬರುತ್ತಾರೆ. ಅವರು ದಿಂಡಿ ಪ್ರಾರಂಭಿಸಿದ ವೇಳೆ ಹಾಗು ಸ್ಥಳ ಮತ್ತು ದಿನಾಂಕಗಳನ್ನು ದಾಖಲಾತಿ ಮಾಡಲಾಗುವುದು. ದಿಂಡಿಗಳಲ್ಲಿ ಪಾಲ್ಗೊಂಡ ಭಕ್ತರ ವರ್ಷಗಳ ಸೇವೆಯ ಬಗ್ಗೆ ವಿವರಣೆ ಪಡೆದು ದಾಖಲಿಸುವುದು.

ಸದ್ಭಕ್ತರು, ದಾನಿಗಳು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿದ, ಸಲ್ಲಿಸುತ್ತಿರುವ ಸೇವೆಗಳಾದ ತನು-ಮನ-ಧನ, ಧಾನ್ಯ, ವಸ್ತು ರೂಪದಲ್ಲಿ ಸಲ್ಲಿಸಿದ ಸೇವೆಯನ್ನು ದಾಖಲಿಸುವುದು.


38) ಶ್ರೀ ಚಿದಂಬರ ಸಾಂಪ್ರದಾಯಿಕ ಭಜನಾ ವಿಭಾಗ :

ಶ್ರೀ ಕ್ಷೇತ್ರ ಚಿದಂಬರ ಮೂಲ ಕ್ಷೇತ್ರದಲ್ಲಿ ಪ್ರತಿನಿತ್ಯ ಹಾಗು ಉತ್ಸವ ಮಹೋತ್ಸವಗಳಲಿ ನಿಗದಿ ಪಡಿಸಿದ ವೇಳೆಯಲ್ಲಿ ಶ್ರೀ ಚಿದಂಬರ ಸಾಂಪ್ರದಾಯಿಕ ಭಜನಾ ಕಾರ್ಯಕ್ರಮವನ್ನು ಭಜನಾ ನಿಯಮದ ಅನುಸಾರ ಮಾಡಬೇಕು, ಈ ವಿಭಾಗಕ್ಕೆ ನೇಮಿಸಿದ ಕಾರ್ಯಕರ್ತರು ಭಜನಾ ಗ್ರಂಥದ ನಿಯಮದ ಅನುಸಾರ ನಡೆಯಬೇಕು. ಹಾಗು ಭಜನಾ ಪದ್ಧತಿ ಗ್ರಂಥವನ್ನು ಪ್ರಕಟಿಸುವುದು, ಅದನ್ನು ಮುಂದಿನ ಭಾಗದಲ್ಲಿ ದಾಖಲಿಸುವುದು.


39)ವಿವಿಧ ಸೇವಾ ಸ್ವೀಕೃತಿ ವಿಭಾಗ :

ದಾನಿಗಳು ಉದ್ದೇಶಪೂರ್ವಕವಾಗಿ ಸಲ್ಲಿಸಿರುವ ಸೇವೆಗಳಾದ ತನು-ಮನ-ಧನ, ಧಾನ್ಯ ವಸ್ತುಗಳ ರೂಪದಲ್ಲಿ ಸಲ್ಲಿಸಿದ ಸೇವಾ ಸ್ವೀಕರಿಸಲಾಗುವುದು. ಹಾಗು ಅವರಿಗೆ ಪ್ರಸಾದ, ಫಲ ಮಂತ್ರಾಕ್ಷತೆ ಕೊಡುವುದು.


40) ಶ್ರೀ ಚಿದಂಬರ ಚರಿತ್ರೆ ಸಾಮುಹಿಕ ಪಾರಯಣ ವಿಭಾಗ :

ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷ ವೈಶಾಖ ಶುಧ್ಧ ಪ್ರತಿಪದೆಯಿಂದ ಸಪ್ತಮಿಯವರೆಗೆ ಸಾಮುಹಿಕ ಚಿದಂಬರ ಚರಿತ್ರೆ ಪಾರಯಣವನ್ನು ನಡೆಸಿಕೊಂಡು ಹೋಗುವುದು. ಅವಶ್ಯಕತೆಗೆ ಅನುಸಾರವಾಗಿ ಗ್ರಾಮ, ಪಟ್ಟಣ, ಶಹರಗಳಲ್ಲಿ ಸಾಮುಹಿಕ ಶ್ರೀ ಚಿದಂಬರ ಚರಿತ್ರೆ ಪಾರಯಣವನ್ನು ಕೈಗೊಳ್ಳುವುದು ಮತ್ತು ಶ್ರೀ ಚಿದಂಬರ ನಾಮ ಭಕ್ತಿ ಸಂಪ್ರದಾಯದ ಜೊತೆಗೆ ಧಾರ್ಮಿಕ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದು. ಸಾಮುಹಿಕ ಚಿದಂಬರ ಚರಿತ್ರೆ ಪಾರಯಣವನ್ನು ನಡೆಸಿಕೊಡಲು ಅನುವು ಮಾಡಿಕೊಡುವುದು. ಉಳಿದ ನಿಯಮಗಳನ್ನು ಮುಂದಿನ ಭಾಗದಲ್ಲಿ ಧಾಖಲಿಸಬೇಕು.


41 ಶ್ರೀ ಚಿದಂಬರ ಸೇವಾದಳ ವಿಭಾಗ :

ಶ್ರೀ ಚಿದಂಬರ ಭಕ್ತಿ ಸಂಪ್ರದಾಯ ಜಾಗೃತಿ ಪ್ರಸಾರ ಆಚರಣೆಗೋಸ್ಕರವಾಗಿ ಎಲ್ಲ ಗ್ರಾಮ, ಪಟ್ಟಣ, ಶಹರದಲ್ಲಿ ಇರುವ ನಮ್ಮ ಶ್ರೀ ಚಿದಂಬರ ಭಕ್ತ ಪರಿವಾರದವರಿಗೆ ಶ್ರೀ ಚಿದಂಬರ ಸೇವಾದಳ ವಿಭಾಗವನ್ನು ಪ್ರಾರಂಭಿಸಿಕೊಡುವುದು. ಎಲ್ಲ ಗ್ರಾಮ, ಪಟ್ಟಣ, ಶಹರದಲ್ಲಿ ಇರುವ ಭಕ್ತರನ್ನು ಆ ಸೇವಾದಳದ ಶಾಖೆಯ ಸೇವಾ ಕಾರ್ಯಕರ್ತರನ್ನಾಗಿ ನೇಮಿಸುವದು.


ಸೇವಾದಳದ ಮುಖ್ಯ ನಿಯಮಾವಳಿಗಳು:
i) ಶ್ರೀ ಚಿದಂಬರ ಭಕ್ತನಾಗಿ ಶ್ರೀ ಚಿದಂಬರ ನಾಮ ದೀಕ್ಷೆ ಪಡೆದಿರಬೇಕು.

ii) ಕುಲದೇವತಾ ಆರಾಧನಾ ಶ್ರೀ ಚಿದಂಬರ ಉಪಾಸನೆ ಹಾಗು ಸಾಮಾಜಿಕ ಚಿಂತನೆ ಮಾಡುತ್ತಿರಬೇಕು.

iii) ಮೂಲ ಕ್ಷೇತ್ರದಲ್ಲಿ ಯಾವುದೆ ಉತ್ಸವ ಮಹೋತ್ಸವಗಳಲಿ ಸೇವಾಕರ್ತನಾಗಿ ಸೇವೆ ಸಲ್ಲಿಸಬೇಕು.

iv) ಸೇವಾದಳದ ಕಾರ್ಯಕರ್ತನಾಗಿ ಅರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಬೇಕು.

v) ಸೇವಾದಳದ ಕಾರ್ಯಕರ್ತರು ಭಕ್ತರ ಮನೆಯಲ್ಲಿ ಕೊಟ್ಟ ಮುಷ್ಠಿ ಅಕ್ಕಿ ಭಿಕ್ಷೆಯನ್ನು ಸಂಗ್ರಹ ಮಾಡಿ ಶ್ರೀ ಕ್ಷೇತ್ರ ಕೆಂಗೇರಿಗೆ ಕಳುಹಿಸಿಕೊಡುವುದು.

vi) ಪ್ರತಿಯೊಬ್ಬ ಕಾರ್ಯಕರ್ತನ ಮನೆಯಲ್ಲಿ ವಾರಕ್ಕೊಮ್ಮೆ ಸಾಂಪ್ರದಾಯಿಕ ಭಜನೆ ಮಾಡಬೇಕು.

vii) ಸಾಮೂಹಿಕ ನಾಮ ಜಪ, ತಪ ಕೈಗೊಂಡು ಶ್ರೀ ಚಿದಂಬರ ಮಹತ್ಮ್ಯೆಯನ್ನು ಪ್ರಚಾರ ಮಾಡುವುದು ಹಾಗೂ ವ್ಯಯಕ್ತಿಕವಾಗಿ ಉಧ್ಧಾರ ಮಾಡಿಕೊಳ್ಳುವುದು.

viii) ಸೇವಾದಳದ ಕಾರ್ಯಕರ್ತರು ಭಕ್ತಾದಿಗಳಿಂದ ಕಾರ್ಯಕರ್ತರಿಂದ ಪ್ರತಿ ತಿಂಗಳು ಯಥಾಶಕ್ತಿ ಸೇವೆಯನ್ನು ಪಡೆದು ಉತ್ಸವ ಸಮಯದಲ್ಲಿ ಶ್ರೀ ಕ್ಷೇತ್ರಕ್ಕೆ ಅವಶ್ಯಕತೆ ಇದ್ದ ವಸ್ತುಗಳನ್ನು ಸಮರ್ಪಿಸುವುದು.

ix) ಸೇವಾದಳಕ್ಕೆ ಸಂಭಂಧಿಸಿದ ದಾಖಲಾತಿಗಳನ್ನು ಇಡುವುದು.

x) ಸೇವಾದಳದ ನಿಯಮಾನುಸಾರವಾಗಿ ಸೇವಾದಳದ ಕಾರ್ಯಕರ್ತನಾಗಲು ಒಪ್ಪಿಗೆ ಪತ್ರ ಪಡೆದು ಅಂತಹವರನ್ನು ಆ ಶಾಖಾ ವಿಭಾಗದಲ್ಲಿ ಸೇವಾದಳದ ಕಾರ್ಯಕರ್ತನನ್ನಾಗಿ ನೇಮಿಸುವುದು. ನಿಯಮ ಉಲ್ಲಂಘನೆ ಮಾಡಿದವರನ್ನು ವಜಾಗೊಳಿಸಲು ಅಧಿಕಾರ ಪೀಠಾಧಿಕಾರಿಗಳ ಕಡೆಗೆ ಇರುತ್ತದೆ.

xi) ಶ್ರೀ ಕ್ಷೇತ್ರದಿಂದ ಪೀಠಾಧಿಕಾರಿಗಳು ಆಯಾ ಸೇವಾದಳದ ಕಾರ್ಯಕ್ಷೇತ್ರಕ್ಕೆ ಬಂದಾಗ ಸಕ್ರೀಯವಾಗಿ ಭಾಗವಹಿಸಬೇಕು.

xii) ಶ್ರೀ ಕ್ಷೇತ್ರದಲ್ಲಿನ ಪೀಠಾಧಿಕಾರಿಗಳೋದಿಗೆ ನಿರಂತರವಾಗಿ ಸಂಪರ್ಕ ಹೊಂದಿರಬೇಕು.

xiii) ಶ್ರೀ ಕ್ಷೇತ್ರದಲಿ ನಡೆಯುವ ಎಲ್ಲಾ ಉತ್ಸವ ಮಹೋತ್ಸವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು.

xiv) ಹಿಂದು ಹಬ್ಬ ಹರಿದಿನ, ಮಹಾತ್ಮರ ಜಯಂತಿ, ಸಮಾಜ ಸೇವೆ ಈ ಕಾರ್ಯಕ್ರಮಗಳನ್ನು ತಮ್ಮ ತಮ್ಮ ಗ್ರಾಮ, ನಗರ, ಶಹರಗಳಲ್ಲಿ ಆಚರಣೆ ಮಾಡುವುದು, ಅದಕ್ಕೆ ಸಹಕರಿಸುವುದು.

xv) ಪೀಠಾಧಿಕಾರಿಗಳ ಆಜ್ಞಾನುಸಾರ ಶ್ರೀ ಚಿದಂಬರ ಮೂಲ ಕ್ಷೇತ್ರದ ಅಭಿವೃಧ್ಧಿ ಕಾರ್ಯದ ಬಗ್ಗೆ ಹಾಗೂ ಉತ್ಸವ ಮಹೋತ್ಸವದ ಸೇವಾ ಸಂಗ್ರಹಣೆಗೆ ಸೇವಾಬದ್ದರಾಗಬೇಕು.

xvi) ಶ್ರೀ ಚಿದಂಬರ ಸೇವಾದಳದ ಅವಶ್ಯಕತೆ ಅನುಸಾರ ಕಾರ್ಮಿಕರನ್ನು ನೇಮಿಸುವುದು ಅಥವಾ ಕೆಲಸದಿಂದ ಕಡಿಮೆ ಮಾಡುವುದು ಅಧಿಕಾರವಿರುತ್ತದೆ.

xvii) ಶ್ರೀ ಚಿದಂಬರ ಸೇವಾ, ಧ್ಯಾನ, ಜಪ, ಪ್ರಾಣಾಯಾಮ ಸಾಧನೆಗಳಿಂದ ಈ ಕೆಳಕಂಡ ಪರಿಣಾಮಗಳು ಲಭಿಸುತ್ತವೆ:

1) ಕುಟುಂಬ ವ್ಯವಸ್ಥೆ ಸುಗಮವಾಗಿ ಸಾಗಲು ಪ್ರೇರೆಪಿಸುತ್ತದೆ.

2) ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ ಹಾಗು ವಿದ್ಯಾಭ್ಯಾಸದಲ್ಲಿ ಏಕಾಗ್ರತೆ, ಪರಿಜ್ಞಾನ ಮತ್ತು ವಿದ್ಯಾಭ್ಯಾಸ ಮುಂದೆವರೆಯುತ್ತದೆ.

3) ಗೃಹಿಣಿಯರಿಗೆ,ಕೌಟುಂಬಿಕ ಮನ:ಶಾಂತಿ, ಮನೆಗೆಲಸಗಳಲ್ಲಿ, ಚ್ಯತನ್ಯ, ಲವಲವಿಕೆ, ಸಮಾಧಾನ, ಶಾಂತಿ ದೊರಕುತ್ತದೆ.

4) ಉದೋಗಸ್ಥರಿಗೆ ಕಾರ್ಯದಲ್ಲಿ ನೈಪುಣ್ಯತೆ, ಉತ್ಸಾಹ, ಸೇವಾಮನೋಭಾವ ಲಭಿಸುತ್ತದೆ.

5) ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಉತ್ತಮ ತಿಳುವಳಿಕೆ ಒಳ್ಳಯ ಬಾಂಧವ್ಯ, ಚುರುಕುತನ, ಕುಶಲತೆ, ಆರ್ಥಿಕ ಸ್ಥಿತಿ ಸುಧಾರಣೆ ದೊರಕುತ್ತದೆ.

6) ವ್ಯದ್ಯರಿಗೆ ವೃತ್ತಿಯಲ್ಲಿ ಉತ್ಸಾಹ, ನೆಮ್ಮದಿ, ನೈಪುಣ್ಯತೆ, ರೋಗಿಗಳ ಖಾಯಿಲೆ, ಇವರ ಕೈಗುಣದಿಂದ ಶೀಘ್ರ ಉಪಶಮನ.

7) ಬುದ್ಧಿಜೀವಿಗಳಿಗೆ ವ್ಯಕ್ತಿತ್ವ ವಿಕಾಸನ, ಕಾರ್ಯದಕ್ಷತೆ ಹಾಗು ಹೊಸ ಕಾರ್ಯದ ಬಗ್ಗೆ ಸಂಶೋಧನೆ, ಚಿಂತನೆ.

8) ಭಕ್ತರಿಗೆ ಲೌಕಿಕ (ಸಂಸಾರ) ಪಾರಮಾರ್ಥಿಕ ಸಾಧನೆಯಿಂದ ಜ್ಞಾನ ಪ್ರಾಪ್ತಿ, ಪರಮಾತ್ಮನ ಧ್ಯಾನದಿಂದ ಚಂಚಲ ಮನಸ್ಸು ನಿಶ್ಚಲವಾಗಿ ಪರಮಾತ್ಮನ ದರ್ಶನ, ಆತ್ಮಜ್ಞಾನ, ಮುಕ್ತಿ ಮೋಕ್ಷ ಕುರಿತು ಸಂಪೂರ್ಣ ತಿಳುವಳಿಕೆ, ಇಲ್ಲಿ ಭಕ್ತ ಅಂತರಂಗ ಆನಂದ ಪಡೆಯಬಹುದು.
a) ಪುನರ್ಜನ್ಮ
b) ಆತ್ಮರೂಪ
c) ಪರಮಾತ್ಮನಲ್ಲಿ ಲೀನ
d)  ದೇವತೆಗಳ ಸಾಲಿನಲ್ಲಿ ಸೇರ್ಪಡೆ, ಇಚ್ಛಾನುಸಾರವಾಗಿ ಮುಕ್ತಿ ಪಡೆಯಬಹುದು.

9) ಕಾರ್ತಿಕ ವದ್ಯ ಷಷ್ಠಿ ಚಿದಂಬರ ಜಯಂತಿ ಕಾರ್ಯಕ್ರಮವನ್ನು ಸೇವಾದಳದ ಶಾಖೆಯ ವತಿಯಿಂದ ಆಚರಿಸಬೇಕು. ಈ ಕಾರ್ಯಕ್ರಮದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.

42) ಸಾಮೂಹಿಕ ಧರ್ಮೋಪನಯನ ವಿಭಾಗ :
i) ಪ್ರತಿ ವರ್ಷ ವೈಶಾಖ ಶುಧ್ಧ ಪ್ರತಿಪದೆಯಿಂದ ಸಪ್ತಮಿಯವರೆಗೆ ನಡೆಯುವ ಶ್ರೀ ಚಿದಂಬರೇಶ್ವರ ಪ್ರತಿಷ್ಠಾನ ಮಹೊತ್ಸವ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸಾಮೂಹಿಕವಾಗಿ ಧರ್ಮೋಪನಯನ ನೆರವೇರಿಸಾಗುವದು.

ii) ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಸುಪುತ್ರರ ಧರ್ಮ ಉಪದೇಶವನ್ನು ಉಪನಯನ ಮಾಡಿಕೊಳ್ಳಬಹುದು.

iii) ಉಪನಯನ ಮಾಡಿಸಿಕೊಳ್ಳುವವರು ಈ ಕೆಳಗಿನ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು:
a )ಉಪನಯನ ಮಾಡಿಸುವವರು ಮುಂಚಿತವಾಗಿ ಹೆಸರನ್ನು ನೊಂದಾಯಿಸಬೇಕು.

b) ಸಾಮೂಹಿಕ ಉಪನಯನ ಮಾಡುವ ಭಕ್ತರು ತಮ್ಮ ಸ್ವಂತಕ್ಕೆ ತಂಬಿಗೆ, ಥಾಲಿ, ತಾಬಾಣ, ತೀರ್ಥ, ಸೌಟು, ಹಲಗಾರ್ಥಿ, ಆರತಿ ತಟ್ಟಿ, ನಿಲಾಂಜನ, ಮನೆ ಉಡುಗುರೆ ಹಾಗು ವಟುವಿಗೆ ಉಟ್ಟುಕೊಳ್ಳುಲು ಮಡಿ-ಶಾಲು ಮುಂತಾದವುಗಳನ್ನು ತಪ್ಪದೇ ತರಬೇಕು.

c) ವಟುಗಳಿಗೆ ಹಾಕುವ ಭಿಕ್ಷಾಸಾಮಾನುಗಳನ್ನು ತಪ್ಪದೇ ತರಬೇಕು.

d) ಮಾತೃ ಭೋಜನ, ಯಾಜ್ಞಿಕ ಹಾಗೂ ಅನ್ನದಾನ ಇತ್ಯಾದಿಗಳನ್ನು ಶ್ರೀ ಕ್ಷೇತ್ರ ಸಂಸ್ಥಾನದಿಂದ ಮಾಡಲಾಗುವುದು.

43) ಜೋತಿಷ್ಯ , ಜನ್ಮಕುಂಡಲಿ, ಮುಹೂರ್ಥ ವಿಭಾಗ :
i) ಜೋತಿಷ್ಯ ಮಾಹಿತಿ ಹಾಗು ಜನ್ಮಕುಂಡಲಿ ಇವುಗಳಿಗೆ ಬಗ್ಗೆ ಆಸಕ್ತರಿಗೆ ಸೂಕ್ತ ಸಲಹೆ ಮಾರ್ಗದರ್ಶನ ಮಾಡುವುದು.

ii) ಜನ್ಮಕುಂಡಲಿ ಬೇಕಾದವರಿಗೆ ಮಗುವಿನ ಜನ್ಮ ವೇಳೆ ಹಾಗೂ ದಿನಾಂಕ ತಿಳಿಸಬೇಕು.

iii) ವೇದದ ಒಂದು ಅಂಗ ಜ್ಯೋತಿಷ್ಯ ಶಾಸ್ತ್ರ, ಈ ಶಾಸ್ತ್ರವು ಪ್ರತ್ಯಕ್ಷ್ಯವು ಅನ್ನಲಿಕ್ಕೆ ಒಂದು ಉದಾಹರಣೆ ಇದೆ “ಪ್ರತ್ಯಕ್ಷಂ ಜ್ಯೋತಿಷಂಶಾಸ್ತ್ರಂ ಚಂದ್ರಾರ್ಕಾ ಯತ್ರ ವಿದ್ಯಂತೆ” ಅನ್ನುವ ಉಕ್ತಿಯಂತೆ.

iv) ನಾವು ಯಾವದೇ ಕಾರ್ಯ ಮಾಡಬೇಕಾದರೆ ಜ್ಯೋತಿಷ್ಯದ ಸಲಹೆ ಬಹುಮುಖ್ಯ. ಆ ಸಲಹೆಯನ್ನು ನಮ್ಮ ಕ್ಷೇತ್ರದಿಂದ ನಾವು ಪ್ರಶ್ನೆ ಜೋತಿಷ್ಯದ ಪ್ರಕಾರ ಹೇಳುತ್ತೇವೆ.

v) ಇನ್ನು ನಾವು ಷೋಡಸ ಸಂಸ್ಕಾರಗಳನ್ನು ಯಾವ ಸಮಯದಲ್ಲಿ ಮಾಡಬೇಕು ಅನ್ನುವದನ್ನು ಮುಹೂರ್ತ ಮಾರ್ತಾಂಡ ಹೇಳಿದ ಪ್ರಕಾರ ಹೇಳುತ್ತೇವೆ.

vi) ಒಬ್ಬ ವಟುವಿಗೆ “ಉಪನಯನ” ಮಾಡುವ ಸಮಯದಲ್ಲಿ ಗುರುಬಲ ಇದೆಯೇ ಇಲ್ಲವೋ ಎಂಬುದನ್ನು ಹೇಳುತ್ತೇವೆ.

vii) ಅವನಿಗೆ/ಅವಳಿಗೆ ಲಗ್ನ ಬಲವು ಕೂಡಿ ಬಂದಿದೆ ಇಲ್ಲವೋ ತಿಳಿಸುತ್ತೇವೆ.

viii) ವರನ ಮತ್ತು ವಧುವಿನ ಗುಣಗಳು ಕೂಡಿ ಬಂದಿದೆ ಇಲ್ಲವೋ ತಿಳಿಸುತ್ತೇವೆ.

ix) ಅವನ/ಅವಳ ಜನ್ಮಕುಂಡಲಿಯನ್ನು ನೋಡಿ ಇವನಿಗೆ/ಇವಳಿಗೆ ಯಾವ ಕೆಲಸ ಮತ್ತು ಇವನು ಏನು ಕಾರ್ಯ ಮಾಡುತ್ತಾನೆ ಅನ್ನುವುದನ್ನು ಹೇಳುತ್ತೇವೆ.

x) ಕಳೆದುಕೊಂಡ ವಸ್ತು ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಜ್ಯೋತಿಷ್ಯದ ಪ್ರಕಾರ ಹೇಳುತ್ತೇವೆ.

xi) ಇನ್ನೂ ಎನಾದರೂ ಜ್ಯೋತಿಷ್ಯದ ಬಗ್ಗೆ ಹೇಳಲು ಈ ಜ್ಯೋತಿಷ್ಯ ಜನ್ಮಕುಂಡಲಿ, ಮುಹೂರ್ತ ವಿಭಾಗವು ಯಾವಾಗಲುಸಿದ್ದವಾಗಿರುತ್ತದೆ.

xii)  ಈ ವಿಭಾಗದಿಂದ ಸಮಯೋಚಿತ ವಾರ್ಷಿಕ ಶ್ರೀ ಚಿದಂಬರ ದಿನದರ್ಶಿಕೆ (ಕ್ಯಾಲೆಂಡರ) ತಯಾರಿಸಿ ಪ್ರಕಟಿಸಿ ವಿತರಿಸುವುದು.

44) ಹೋಮ ಹವನ ವಿಭಾಗ :
i) ನಮ್ಮ ಶ್ರೀ ಕ್ಷೇತ್ರ ಮೂಲಪೀಠ ಕೆಂಗೇರಿಯಲ್ಲಿ ಹೋಮ ಹವನದ ವಿಭಾಗದಿಂದ ಪ್ರತಿ ತಿಂಗಳು ಸಂಕಷ್ಟಿಯ ದಿವಸ ಸಕಲ ವಿಘ್ನಹರ್ತಾ ಮಹಾಗಣಪತಿ ಹೋಮವನ್ನು ಮಾಡಲಾಗುವದು. ಇದನ್ನು ಸಮಸ್ತ ಭಕ್ತ ಜನರು ಸದುಪಯೋಗ ಪಡೆದುಕೊಳ್ಳಬೇಕು.

ii) ಪ್ರತಿಷ್ಠಾ ಜಯಂತಿಯ ಪ್ರತಿವರ್ಷದಲ್ಲಿ ಗಾಯತ್ರಿ ಹೋಮ ಗಣಪತಿ ಹೋಮ ಮೃತ್ಯುಂಜಯ ಹೋಮ ನವಗ್ರಹ ಹೋಮ ಮಾಡಲಾಗುತ್ತದೆ.

iii) ಪ್ರತಿವರ್ಷ ಮಾರ್ಗಶೀರ್ಷ ಮಾಸದಲ್ಲಿ ಶ್ರೀ ಚಿದಂಬರ ಮಹಾಸ್ವಾಮಿಯ ಶೈವಾಗಮೋಕ್ತ ಹೋಮವನ್ನು ಆರು ದಿವಸಗಳ ಪರ್ಯಂತ ಮಾಡಲಾಗುತ್ತದೆ.

iv) ಪ್ರತಿವರ್ಷ ಶ್ರಾವಣ ಮಾಸದಲ್ಲಿ ಕೊನೆಯ ಸೋಮವಾರದಂದು ಸ್ವಾಮಿಗೆ ಅಭಿಷೇಕ ಹಾಗೂ ರುದ್ರಸ್ವಾಹಾಕಾರ ಹವನವನ್ನು ಮಾಡಲಾಗುತ್ತೆದೆ.

ಸಮಸ್ಥ ಭಕ್ತರು ತಮ್ಮ ಕಷ್ಠ ನಿವಾರಣೆಗೆ ಈ ಕೆಳಗೆ ತಿಳಿಸಿದ ಹೋಮ ಮಾಡಲು ಬಯಸುವರು ಪೀಠಧಿಕಾರಿಗಳನ್ನು ಸಮಕ್ಷಮ ಭೇಟಿಯಾಗಲು ವಿಚಾರಿಸಬಹುದು.

1) ಚಂಡಿ ಹೋಮ : ತಮ್ಮ ಕುಲದೇವತೆಯ ಪ್ರೀತಿಯಗೋಸ್ಕರ ಹಾಗೂ ಭೂತಪ್ರೇತ, ಪಿಶಾಚಿಯ ಭಾದೆಯ ನಿವಾರಣೆಗಾಗಿ ಮತು ಮನಸ್ಸಿನ ಕಾಮನೆಗಳನ್ನು ಪೂರ್ಣ ಮಾಡುತ್ತದೆ.

2) ಸಹಸ್ರ ಮೋದಕಗಣಪತಿ ಹೋಮ : ಯಾವುದೇ ಕಾರ್ಯದಲ್ಲಿನ ನಿರ್ವಿಘ್ನತೆಯಿಂದ ದೊಡ್ಡ ಕಾರ್ಯಕ್ರಮವನ್ನು ಸುಲಭವಾಗಿ ಪರಿಪೂರ್ಣತೆ ಗೊಳಿಸುತ್ತದೆ.

3) ನವಗ್ರಹ ಹೋಮ : ನಮ್ಮ ಜನ್ಮ ಕುಂಡಲಿಯಲ್ಲಿ ನವಗ್ರಹ ದೇವತೆಗಳ ಪೀಡಾ ಪರಿಹಾರವಾಗಿ ಅವರಗೆಲ್ಲ ಕೆಲಸವು ಸುಗಮ ನಿರ್ವಹಿಸುವದಕ್ಕಾಗಿ ನವಗ್ರಹ ಹೋಮ.

4) ಧನ್ವಂತರಿ ಹೋಮ : ಎಲ್ಲ ರೋಗಕ್ಕೆ ಅಧಿಪತಿ ಔಷಧ. ಔಷಧಕ್ಕೆ ಅಧಿಪತಿ ವಿಷ್ಣು. ಆ ವಿಷ್ಣು ಸ್ವರೂಪಿಯಾದ ಔಷಧವು ನಮಗೆ ಫಲಕಾರಿಯಾಗುವುದಕ್ಕೆ ಧನ್ವಂತರಿ ಹೋಮ ಮಾಡುವುದು.

5) ಮೃತ್ಯುಂಜಯ ಹೋಮ : ಅನಾರೋಗ್ಯ ನಿವಾರಣೆಯಾಗಿ ಮೃತ್ಯು ಪಾಶಲ್ಲಿರುವವರೆಲ್ಲ ಪುನ: ಅರೋಗ್ಯ ವಾಗಿರುವುದೆ ಮೃತ್ಯುಂಜಯ ಹೋಮ.

6) ಗಾಯತ್ರಿ ಹೋಮ : ನಮಗೆ ಧೀ:ಶಕ್ತಿ ಅಂದರೆ ಬುಧ್ಧಿ ಶಕ್ತಿಯನ್ನು ಕೊಡುವವಳು ಗಾಯತ್ರಿಯು. ಆ ಶಕ್ತಿ ನಮಗೆ ಬರಲಿಯೆಂದು ಗಾಯತ್ರಿ ಹೋಮ.

7) ಶ್ರೀ ಚಿದಂಬರ ಜಪಯಜ್ಞ ನಾಮ ಹೋಮ : ಚಿದಂಬರನು ಪ್ರಸನ್ನತೆಯಾಗಿ ನಮಗೆ ಎಲ್ಲ ಕಾರ್ಯಕ್ಕೂ ಅವನ ಅನುಗ್ರಹ ಇರಲಿಯೆಂದು ಮಾಡುವು ಹೋಮ.

8) ಸುದರ್ಶನ ಹೋಮ : ನಮಗೆ ಮಾಟ, ಮಂತ್ರ ಶಕ್ತಿಯಿಂದ ನಾವು ಪೀಡಿತರಾಗಿದ್ದರೆ ಈ ಹೋಮದಿಂದ ಅದು ನಿವಾರಣೆಯಾಗುತ್ತದೆ.

9) ರುದ್ರ ಸ್ವಾಹಾಕಾರ ಹೋಮ : ಮಂಗಲಕಾರನಾದ ಶಿವನ ಕುರಿತಾದ ಹೋಮ.

10) ಪವಮಾನ ಹೋಮ : ಇದು ಹನುಮಂತನ ಕುರಿತಾದ ಹೋಮ, ಇದನ್ನು ಮಾಡುವದರಿಂದ ಬುದ್ಧಿ, ಬಲ, ಯಶ, ಧರ್ಯ ಲಭಿಸುತ್ತದೆ.

11) ಮೇಧಾಸೂಕ್ತ : ನಾವು ಕಲಿತ್ತಿದ ಪಾಠ ನಮಗೆ ನೆನಪಿನಲ್ಲಿ ಇರುವದಕ್ಕೆ ಮಾಡುವ ಹೋಮ.

12) ಶುಕ್ಲ ಯಜುರ್ವೇದ ಸಂಹಿತಾ ಸ್ವಾಹಾಕಾರ ಹೋಮ:ಈ ಹೋಮವು ಆಶ್ವಮೇಧದ ಫಲವನ್ನು ಕೊಡುತ್ತದೆ. ನಾವು ಯಾವುದೆ ಮನಸ್ಸಿನಲ್ಲಿ ಮಾಡಿಕೊಂಡರೆ ಅದು ನೆರವೇರುತ್ತದೆ.

ಇನ್ನು ಕೂಡಾ ಹಲವಾರು ಹೋಮಗಳು ಶ್ರೀ ಕ್ಷೇತ್ರದಲ್ಲಿ ಮಾಡಿಸಬಹುದು. ಇಚ್ಛಿಸುವವರು ಈ ಮೇಲ್ಕಂಡ ವಿಭಾಗಕ್ಕೆ ಸಮಪರ್ಕಿಸಬಹುದು.
.
45) ಶಾಶ್ವತ ಅಭಿಷೇಕ ನಿಧಿ ಠೇವಣಿ ಯೋಜನೆ ವಿಭಾಗ :

ಭಕ್ತರು ನಿಗದಿತ ಶುಲ್ಕ ನೀಡಿ ತಮ್ಮ ಗೋತ್ರ, ಮಾಸ, ತಿಥಿ, ಪೂರ್ಣ ವಿಳಾಸ ನೀಡಿದ ಭಕ್ತರು ವರ್ಷಕೊಮ್ಮೆ ತಾವು ತಿಳಿಸಿದ ತಿಥೀ, ಮಾಸಗಳಲ್ಲಿ ಅಭಿಷೇಕ ಪೂಜೆ ಮಾಡಿ ಪೋಸ್ಟ ಮೂಲಕ ಪ್ರಸಾದ ಕಳಿಸುವಲಾಗುವುದು. ಅಥವಾ ಸಮಕ್ಷಮ ಬಂದು ಪ್ರಸಾದ ಪಡೆಯಬಹುದು. ಈ ವಿಭಾಗದಲ್ಲಿ ಪಾಲುಗೊಳ್ಳುವವರು ಅರ್ಹತಾ ಪತ್ರ ಪಡೆಯಬಹುದು.


46)ಕುಂಕುಮಾರ್ಚನೆ ನಿಧಿ ಠೇವಣಿ ಯೋಜನೆ ವಿಭಾಗ :

ಭಕ್ತರು ನಿಗದಿತ ಶುಲ್ಕ ನೀಡಿ ತಮ್ಮ ಗೋತ್ರ, ಮಾಸ, ತಿಥಿ, ಪೂರ್ಣ ವಿಳಾಸ ನೀಡಿದ ಭಕ್ತರು ವರ್ಷಕೊಮ್ಮೆ ತಾವು ತಿಳಿಸಿದ ತಿಥೀ, ಮಾಸಗಳಲ್ಲಿ ಕುಂಕುಮಾರ್ಚನೆ ಮಾಡಿ ಪೋಸ್ಟ ಮೂಲಕ ಪ್ರಸಾದ ಕಳಿಸುವಲಾಗುವುದು. ಅಥವಾ ಸಮಕ್ಷಮ ಬಂದು ಪ್ರಸಾದ ಪಡೆಯಬಹುದು. ಈ ವಿಭಾಗದಲ್ಲಿ ಪಾಲುಗೊಳ್ಳುವವರು ಅರ್ಹತಾ ಪತ್ರ ಪಡೆಯಬಹುದು.


47) ಬಿಲ್ವಾರ್ಚನೆ, ತುಳಸಿ ನಿಧಿ ಠೇವಣಿ ಯೋಜನೆ ವಿಭಾಗ :

ಭಕ್ತರು ನಿಗದಿತ ಶುಲ್ಕ ನೀಡಿ ತಮ್ಮ ಗೋತ್ರ, ಮಾಸ, ತಿಥಿ, ಪೂರ್ಣ ವಿಳಾಸ ನೀಡಿದ ಭಕ್ತರು ವರ್ಷಕೊಮ್ಮೆ ತಾವು ತಿಳಿಸಿದ ತಿಥೀ, ಮಾಸಗಳಲ್ಲಿ ಬಿಲ್ವಾರ್ಚನೆ, ತುಳಸಿ ಅರ್ಚನೆ ಮಾಡಿ ಪೋಸ್ಟ ಮೂಲಕ ಪ್ರಸಾದ ಕಳಿಸುವಲಾಗುವುದು. ಅಥವಾ ಸಮಕ್ಷಮ ಬಂದು ಪ್ರಸಾದ ಪಡೆಯಬಹುದು. ಈ ವಿಭಾಗದಲ್ಲಿ ಪಾಲುಗೊಳ್ಳುವವರು ಅರ್ಹತಾ ಪತ್ರ ಪಡೆಯಬಹುದು.


48)ಶ್ರೀ ಸತ್ಯಚಿದಂಬರ ಪೂಜಾ ನಿಧಿ ಠೇವಣಿ ಯೋಜನೆ ವಿಭಾಗ :

ಭಕ್ತರು ನಿಗದಿತ ಶುಲ್ಕ ನೀಡಿ ತಮ್ಮ ಗೋತ್ರ, ಮಾಸ, ತಿಥಿ, ಪೂರ್ಣ ವಿಳಾಸ ನೀಡಿದ ಭಕ್ತರು ವರ್ಷಕೊಮ್ಮೆ ತಾವು ತಿಳಿಸಿದ ತಿಥೀ, ಮಾಸಗಳಲ್ಲಿ ಸತ್ಯಚಿದಂಬರ ಪೂಜಾ ವ ಅರ್ಚನೆ ಮಾಡಿ ಪೋಸ್ಟ ಮೂಲಕ ಪ್ರಸಾದ ಕಳಿಸುವಲಾಗುವುದು. ಅಥವಾ ಸಮಕ್ಷಮ ಬಂದು ಪ್ರಸಾದ ಪಡೆಯಬಹುದು. ಈ ವಿಭಾಗದಲ್ಲಿ ಪಾಲುಗೊಳ್ಳುವವರು ಅರ್ಹತಾ ಪತ್ರ ಪಡೆಯಬಹುದು.


49)ಶ್ರೀ ಸತ್ಯ ನಾರಾಯಣ ಪೂಜಾ ನಿಧಿ ಠೇವಣಿ ಯೋಜನೆ ವಿಭಾಗ :

ಭಕ್ತರು ನಿಗದಿತ ಶುಲ್ಕ ನೀಡಿ ತಮ್ಮ ಗೋತ್ರ, ಮಾಸ, ತಿಥಿ, ಪೂರ್ಣ ವಿಳಾಸ ನೀಡಿದ ಭಕ್ತರು ವರ್ಷಕೊಮ್ಮೆ ತಾವು ತಿಳಿಸಿದ ತಿಥೀ, ಮಾಸಗಳಲ್ಲಿ ಶ್ರೀ ಸತ್ಯ ನಾರಾಯಣ ಪೂಜೆ ಮಾಡಿ ಪೋಸ್ಟ ಮೂಲಕ ಪ್ರಸಾದ ಕಳಿಸುವಲಾಗುವುದು. ಅಥವಾ ಸಮಕ್ಷಮ ಬಂದು ಪ್ರಸಾದ ಪಡೆಯಬಹುದು. ಈ ವಿಭಾಗದಲ್ಲಿ ಪಾಲುಗೊಳ್ಳುವವರು ಅರ್ಹತಾ ಪತ್ರ ಪಡೆಯಬಹುದು.


50)ಬುತ್ತಿ ಪೂಜಾ ನಿಧಿ ಠೇವಣಿ ಯೋಜನೆ ವಿಭಾಗ :

ಭಕ್ತರು ನಿಗದಿತ ಶುಲ್ಕ ನೀಡಿ ತಮ್ಮ ಗೋತ್ರ, ಮಾಸ, ತಿಥಿ, ಪೂರ್ಣ ವಿಳಾಸ ನೀಡಿದ ಭಕ್ತರು ವರ್ಷಕೊಮ್ಮೆ ತಾವು ತಿಳಿಸಿದ ತಿಥೀ, ಮಾಸಗಳಲ್ಲಿ ಬುತ್ತಿ ಪೂಜಾ ಮಾಡಿ ಪೋಸ್ಟ ಮೂಲಕ ಪ್ರಸಾದ ಕಳಿಸುವಲಾಗುವುದು. ಅಥವಾ ಸಮಕ್ಷಮ ಬಂದು ಪ್ರಸಾದ ಪಡೆಯಬಹುದು. ಈ ವಿಭಾಗದಲ್ಲಿ ಪಾಲುಗೊಳ್ಳುವವರು ಅರ್ಹತಾ ಪತ್ರ ಪಡೆಯಬಹುದು.

51)ನೈವೇದ್ಯ (ಅನ್ನ ಸಂತರ್ಪಣೇ) ನಿಧಿ ಠೇವಣಿ ಯೋಜನೆ ವಿಭಾಗ :

ಭಕ್ತರು ನಿಗದಿತ ಶುಲ್ಕ ನೀಡಿ ತಮ್ಮ ಗೋತ್ರ, ಮಾಸ, ತಿಥಿ, ಪೂರ್ಣ ವಿಳಾಸ ನೀಡಿದ ಭಕ್ತರು ವರ್ಷಕೊಮ್ಮೆ ತಾವು ತಿಳಿಸಿದ ತಿಥೀ, ಮಾಸಗಳಲ್ಲಿ ನೈವೇದ್ಯ (ಅನ್ನ ಸಂತರ್ಪಣೇ) ಸೇವಾ ಮಾಡಿ ಪೋಸ್ಟ ಮೂಲಕ ಪ್ರಸಾದ ಕಳಿಸುವಲಾಗುವುದು. ಅಥವಾ ಸಮಕ್ಷಮ ಬಂದು ಪ್ರಸಾದ ಪಡೆಯಬಹುದು. ಈ ವಿಭಾಗದಲ್ಲಿ ಪಾಲುಗೊಳ್ಳುವವರು ಅರ್ಹತಾ ಪತ್ರ ಪಡೆಯಬಹುದು.


52) ಧರ್ಮ ದಂಡ ವಿಭಾಗ :

ಧರ್ಮ ದಂಡವನ್ನು ದೇವಸ್ಥಾನದ ಶ್ರೀ ಚಿದಂಬರೇಶ್ವರರ ಮುಂದೆ ಉತ್ಸವ ಮಹೋತ್ಸವದಲಿ ಉತ್ಸವ ಮೂರ್ತಿಯ ಮುಂದೆ ಗೌರವಪೂರ್ವಕವಾಗಿ ಹಿಡಿಯುವುದು, ನಿಲ್ಲುವುದು ಹಾಗೂ ಸಂಚರಿಸುವುದು. ಅದೇ ರೀತಿ ಪೀಠಾಧಿಕಾರಿಗಳವರ ಮುಂದೆ ಕೂಡ ಹಿಡಿಯುವುದು. ಮತ್ತು ಶಾಂತಿ ಹಾಗೂ ರಕ್ಷಣೆ ಕಾಪಾಡುವುದು.


53) ಪೀಠಾಧಿಕಾರಿಗಳ ವ್ಯಯಕ್ತಿಕ ಭಾಗ 1:
1) ಬೆಳಿಗ್ಗೆ 4:30 ಕ್ಕೆ ಏಳುವುದು, ಭೋಪಾಳಿ ಕಾಕಡಾರತಿಯಲ್ಲಿ ಪಾಲ್ಗೊಳ್ಳುವುದು ಆಮೇಲೆ ಪ್ರಾತರ್ವಿಧಿ.
2) ಬೆಳಿಗ್ಗೆ 5:00 ರಿಂದ 7:00 ಪ್ರಾತ: ಸ್ನಾನ, ಸಂಧ್ಯಾ, ಜಪ, ತಪ ಅನುಷ್ಠಾನ, ಪಾರ್ತೇಶ್ವರ ಪೂಜೆ. ಪ್ರಾರ್ಥನೆ, ಪಾರಾಯಣ, ತೀರ್ಥ ಪ್ರಸಾದ ವಿತರಣೆ.
3) ಬೆಳಿಗ್ಗೆ 9:00 ರಿಂದ 12:00 ಭಕ್ತರಿಗೆ ದರ್ಶನ ಆಶೀರ್ವಾದ. ಶ್ರೀ ಕ್ಷೇತ್ರದ ವಿವಿಧ ವಿಭಾಗಗಳ ಕಾರ್ಯ, ಚಿಂತನೆ ಹಾಗು ಸಾಧನೆ.
4) ಮಧ್ಯಾನ್ಹ 12 ರಿಂದ 2, ಮಧ್ಯಾನ ಸ್ನಾನ, ಸಂಧ್ಯಾವಂದನ, ಜಪ, ಪೂಜೆ, ಅನುಷ್ಠಾನ ಹಾಗು ಮಹಾಪ್ರಸಾದ.
5) ಮಧ್ಯಾನ್ಹ 2 ರಿಂದ 4, ಭಕ್ತರಿಗೆ ಅನುಗ್ರಹ ಆಶೀರ್ವಾದ, ಅಭೀಷೇಕ ಅರ್ಚನಾ ವಿಭಾಗದಿಂದ ಫಲ ಮಂತ್ರಾಕ್ಷತೆ ವಿತರಣೆ.
6) ಸಾಯಂಕಾಲ 4 ರಿಂದ 6, ವ್ಯಯಕ್ತಿಕ ಹಾಗೂ ಸಂಸ್ಥಾನದ ಕಾರ್ಯ ಚಿಂತನೆ.
7) ಸಾಯಂಕಾಲ 6 ರಿಂದ 7, ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆಯಲ್ಲಿ ಪಾಲ್ಗೊಳ್ಳುವುದು.
8) ಸಾಯಂಕಾಲ 7 ರಿಂದ 8:30, ಸಾಯಂಕಾಲ ಸ್ನಾನ, ಸಂಧ್ಯಾ, ಜಪ, ಪೂಜೆ, ಮತ್ತು ಮಹಾಪ್ರಸಾದ.
9) ರಾತ್ರಿ 8:30 ರಿಂದ ವಿಶ್ರಾಂತಿ.
10) ಉತ್ಸವ ಮಹೋತ್ಸವದಲಿ ಹಾಗೂ ಪ್ರವಾಸದಲ್ಲಿದ್ದಾಗ ಮೇಲಿನ ವೇಳೆಯಲ್ಲಿ ಸ್ವಲ್ಪ ಬದಲಾಗಬಹುದು.

54) ಪೀಠಾಧಿಕಾರಿಗಳ ಕುಟುಂಬ ವಿಭಾಗ :

ಶ್ರೀ ಚಿದಂಬರ ಮೂಲಪೀಠ ಮೂಲಮಹಾಕ್ಷೇತ್ರ ಮೂಲ ಸಂಸ್ಥಾನದ ವಿವಿಧ ಧಾರ್ಮಿಕ ಕಾರ್ಯಗಳನ್ನು ಉತ್ಸವ ಮಹೋತ್ಸವಗಳಲ್ಲಿ ಹಾಗು ವಿವಿಧ ಕಾರ್ಯಕ್ರಮಗಳಲ್ಲಿ ಪೀಠಾಧಿಕಾರಿಗಳು ಕುಟುಂಬ ಸಹಿತ ಸಪತ್ನಿಕಾವಾಗಿ ಪುಣ್ಯವಾಚನ ಕಾರ್ಯಕ್ರಮಗಳಲ್ಲಿ ಕಂಕಣಬಧ್ಧರಾಗಿ ಆಚರಿಸಬೇಕು. ಗೃಹಸ್ಥಾಶ್ರಮ ಪೀಠ ವಿರುವುದರಿಂದ ಪೀಠಾಧಿಕಾರಿಗಳು ಒಬ್ಬರೆ ಈ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಬರುವುದಿಲ್ಲ. ಕುಟುಂಬ ಸಹಿತ ಆಚರಿಸಬೇಕು. ಕಾರ್ಯಕ್ರಮಗಳ ಸಂಧರ್ಭದಲ್ಲಿ ಅಕಸ್ಮಾತ ಸೂತಕ, ಅಶೌಚ ಬಂದರೆ ಪೀಠಾಧಿಕಾರಿಗಳು ತಮ್ಮ ಕುಟುಂಬದ ಸದಸ್ಯರುಗಳಿಗೆ ವರ್ಣಿಕೊಟ್ಟು ಆ ಕಾರ್ಯ ನಡೆಸಬಹುದು.


ಹೆಚ್ಚಿನ ನಿಯಮಗಳಿದ್ದರೆ ಮುಂದಿನ ಭಾಗದಲ್ಲಿ ದಾಖಲಿಸಬೇಕು.


55) ಉತ್ಸವ ಸೇವಾ ಸ್ವೀಕೃತಿ ವಿಭಾಗ :

ಶ್ರೀ ಕ್ಷೇತ್ರ ಸಂಸ್ಥಾನದ, ಉತ್ಸವ ಮಹೋತ್ಸವ ಕಾರ್ಯಕ್ಕೆ ಭಕ್ತರು ವ್ಯಯಕ್ತಿಕವಾಗಿ ತನು-ಮನ-ಧನ, ಧಾನ್ಯ ಸಲ್ಲಿಸುವವರು ಉತ್ಸವ ಸೇವಾ ಸ್ವೀಕೃತಿ ವಿಭಾಗದಿಂದ ಸ್ವೀಕರಿಸುವುದು.

ವೈಶಾಖ ಮಾಸ, ಶ್ರಾವಣ ಮಾಸ, ಹಾಗು ಕಾರ್ತಿಕ ವದ್ಯ ಷಷ್ಠಿಯಿಂದ ಮಾರ್ಗಶೀರ್ಷ ಶುಧ್ಧ ಸಪ್ತಮಿಯವರೆಗೆ ಶ್ರೀ ಚಿದಂಬರ ಅವತಾರ ಜಯಂತಿ, ಶೈವಾಗಮೋಕ್ತ ಮಹೋತ್ಸವದ ಉತ್ಸವ ಕಾರ್ಯಕ್ಕೆ ಭಕ್ತರು ಹಾಗು ದಾನಿಗಳು ಸಲ್ಲಿಸುವ ಸೇವೆಯನ್ನು ಸ್ವೀಕರಿಸುವುದು. ಅದನ್ನು ಉತ್ಸವ ಸಮಯದಲ್ಲಿ ಉತ್ಸವದ ಧರ್ಮಿಕ ಕಾರ್ಯಕ್ಕೆ, ಭಕ್ತರ ಸಲುವಾಗಿ ಅನ್ನದಾನಕ್ಕೆ ವಿನಿಯೋಗಿಸುವುದು. ಮುಖ್ಯವಾಗಿ ಉತ್ಸವ ಕಾರ್ಯಕ್ರಮಕ್ಕೆ ಬಂದಂತಹ ಭಕ್ತರಿಗೆ ಅನ್ನ, ನೀರು, ವಸತಿ, ಬೆಳಕು ಯಾವತ್ತೂ ಉತ್ಸವ ಕಾರ್ಯಕ್ಕೆ ವಿನಿಯೋಗಿಸುವುದು.

ಉತ್ಸವ ಸೇವಾ ಸ್ವೀಕೃತಿ ವಿಭಾಗದಿಂದ ಉತ್ಸವ ಸೇವಾ ಸ್ವೀಕರಿಸಲು ಪೀಠಾಧಿಕಾರಿಗಳ ಆಜ್ಞಾಪಣೆ ಅವಶ್ಯಕವಾಗಿರುತ್ತದೆ. ಉತ್ಸವ ಸೇವಾ ಸ್ವೀಕರಿಸುವರು ಪೀಠಾಧಿಕಾರಿಗಳ ಪರವಾಗಿ ಅರ್ಹತಾ ಪತ್ರ ಕೊಟ್ಟು ಸ್ವೀಕರಿಸಬೇಕು. ನಂತರ ಸ್ವೀಕರಿಸಿದ ಸೇವೆಯನ್ನು ಸಂಸ್ಥಾನದ ಅರ್ಥ ವಿಭಾಗಕ್ಕೆ ಸಲ್ಲಿಸುವುದು.


56) ದ್ವಾರಪಾಲಕ ವಿಭಾಗ :
1) ಮುಖ್ಯ ಹಾಗು ಉಪದ್ವಾರಗಳನ್ನು ರಕ್ಷಿಸುವುದು ಹಾಗು ದ್ವಾರಪಾಲಕರನ್ನು ಪೀಠಾಧಿಕಾರಿಗಳ ಅಪ್ಪಣೆ ಪ್ರಕಾರ ನಡೆಯಬೇಕು.
2) ಮುಖ್ಯ ಹಾಗು ಉಪದ್ವಾರಳಿಗೆ ದ್ವಾರಪಾಲಕರನ್ನು ಪೀಠಾಧಿಕಾರಿಗಳು ನೇಮಿಸುತ್ತಾರೆ. ದ್ವಾರಪಾಲಕರು ನಿಯಮದಂತೆ ನಡೆಯಬೇಕು. ಇಲ್ಲದಿದ್ದರೆ ಕೆಲಸದಿಂದ ವಜಾಮಾಡಬಹುದು.

57) ಭವತಿ ಭಕ್ಷಾಂದೇಹಿ - ಮುಷ್ಠಿ ಭಿಕ್ಷಾ ವಿಭಾಗ :

ಪೀಠಾಧಿಕಾರಿಗಳು ಪ್ರತಿಯೊಬ್ಬ ಭಕ್ತನ ಮನೆಗೆ ಹೋಗಿ ಧಾನ್ಯ ಭಿಕ್ಷೆಯನ್ನು ಸ್ವೀಕರಿಸುವುದು. ಒಮ್ಮಮ್ಮೆ ಅನುಕುಲವಾಗಬಹುದು ಅಥವಾ ಅನಾನುಕೂಲವಾಗಬಹುದು. ಆ ಕಾರ್ಯಕ್ಕೆ ತೊಂದರೆಯಾಗಬಾರದೆಂದು ಮತ್ತು ಪ್ರತಿಯೊಬ್ಬ ಭಕ್ತರಿಗೂ ಅನ್ನದಾನದ ಫಲ ದೊರೆಯಲೆಂದು “ಭವತಿ ಭಕ್ಷಾಂದೇಹಿ “, ಮುಷ್ಠಿ ಭಿಕ್ಷೆಯ ವಿಭಾಗದಿಂದ ಪ್ರತಿನಿತ್ಯ ಗೃಹಿಣಿಯರು ಅಡುಗೆ ಮಾಡುವ ಮೊದಲು ಒಂದು ಮುಷ್ಠಿ ಅಕ್ಕಿಯನ್ನು ಈ ವಿಭಾಗದಿಂದ ಕೊಟ್ಟಂತಹ ಡಬ್ಬಿಯಲ್ಲಿ / ಚಿಲದಲ್ಲಿ ಹಾಕುವುದು. ಪ್ರತಿ ತಿಂಗಳಿಗೊಮ್ಮೆ ಈ ವಿಭಾಗದಿಂದ ಅಕ್ಕಿಯನ್ನು ಸ್ವೀಕರಿಸಲಾಗುವುದು. ಸಂಗ್ರಹವಾದ ಧಾನ್ಯವನ್ನು ಶ್ರೀ ಕ್ಷೇತ್ರ ಸಂಸ್ಥಾನದ ಕೊಠಿ ಖೋಲಿ (ಧಾನ್ಯ ಸಂಗ್ರಹ) ವಿಭಾಗಕ್ಕೆ ಸಮರ್ಪಿಸಲಾಗುವುದು.


ಇದರ ಮಹತ್ವ: ಪ್ರತಿದಿವಸ ಅತಿಥಿಗಳಿಗೆ ಅನ್ನದಾನ ಮಾಡಿದ ಮೇಲೆ ಗೃಹಸ್ತರು ಭೋಜನವನ್ನು ಮಾಡುವ ಪದ್ಧತಿ, ಆದರೆ ಒಮ್ಮಮ್ಮೆ ಅತಿಥಿಗಳು ಲಭ್ಯವಿರದ ಕಾರಣ ಈ ತೊಂದರೆ ನಿವಾರಣೆಗಾಗಿ ಒಂದು ಮುಷ್ಠಿ ಅಕ್ಕಿಯನ್ನು ಭಿಕ್ಷೆಯ ರೂಪದಲ್ಲಿ ಸಲ್ಲಿಸಿದರೆ ಅದು ಶ್ರೀ ಕ್ಷೇತ್ರಕ್ಕೆ ಬಂದು ಶ್ರೀ ಚಿದಂಬರ ಮಹಾಸ್ವಾಮಿಗಳಿಗೆ ನೈವೇದ್ಯವಾಗಿ ವ್ಯದಿಕರಿಗೆ, ಪಾಠಶಾಲೆ ವಿದ್ಯಾರ್ಥಿಗಳಿಗೆ ಅನ್ನದಾನದ ಮೂಲಕ ವಿನಿಯೋಗವಾಗುತ್ತದೆ. ಹೀಗೆ ಈ ಕಾರ್ಯದಿಂದ ಮುಷ್ಠಿ ಭಿಕ್ಷಾ ಹಾಕುವ ದಾನಿಗಳಿಗೆ ಅನ್ನದಾನದ ಫಲ ದೊರೆಯುತ್ತದೆ.


58) ಶ್ರೀ ಚಿದಂಬರ ಗುರು ಅರ್ಪಣಾ ಕಾಣಿಕಾ ಹುಂಡಿ ವಿಭಾಗ :

ಭಕ್ತರು ವ್ಯಯಕ್ತಿಕವಾಗಿ ಹಾಗು ಗುಪ್ತರೂಪದಿಂದ ಸಲ್ಲಿಸಿದ ಕಾಣಿಕೆಯನ್ನು ಸಂಗ್ರಹಿಸುವ ವ್ಯವಸ್ಥೆ ಹುಂಡಿಯದು. ಇದರಲ್ಲಿ ಸಂಗ್ರಹಿಸಲಾದ ಕಾಣಿಕೆಯನ್ನು ಸಂಸ್ಥಾನದ ಅರ್ಥ ವಿಭಾಗದಿಂದ ಸ್ವೀಕರಿಸುಬೇಕು. ಸಂಸ್ಥಾನದ ಕಾರ್ಯಗಳಾದ ಅನ್ನದಾನ, ಅಭಿವೃದ್ಧಿ ಕಾರ್ಯಕ್ಕೆ, ಯದ್ದೇಶಿತ ಕಾರ್ಯಕ್ಕೆ ವಿನಿಯೋಗಿಸಬೇಕು. ಉಪ-ಹುಂಡಿಗಳನ್ನು ಮಾಡಿ (ಸಣ್ಣ ಡಬ್ಬಿಯ ರೂಪದಲ್ಲಿ) ಭಕ್ತರು ಅಪೇಕ್ಷಿಸಿದರೆ ಅವರಿಗೆ ವ್ಯಯಕ್ತಿಕವಾಗಿ ಕೊಡಬೇಕು. ಭಕ್ತರು ಅವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಕಾಯಕದಲ್ಲಿ ದೊರತಿರತಕ್ಕಂತಹ ಲಾಭಾಂಶದಲ್ಲಿ ಯಥಾಶಕ್ತಿ ಸೇವೆಯನ್ನು ಸಲ್ಲಿಸಿ ವರ್ಷಕ್ಕೊಮ್ಮೆ ಶ್ರೀ ಕ್ಷೇತ್ರದ ಅರ್ಥ ವಿಭಾಗಕ್ಕೆ ಸಮರ್ಪಿಸಬೇಕು.


59) ವಿವಿಧ ವಿಭಾಗಳಲ್ಲಿ ಆಸ್ತಿ – ವಸ್ತು ದಾಖಲಾತಿ, ರಕ್ಷಣಾ ವಿಭಾಗ :

ನೋಂದಣಿ ಪುಸ್ತಕದಲ್ಲಿ ವಿವಿಧ ವಿಭಾಗಗಳ ಆಸ್ತಿ ಹಾಗೂ ವಸ್ತುಗಳಾದ, ಸ್ಥಿರಾಸ್ಥಿ, ಚರಾಸ್ಥಿ, ಜಂಗಮಾಸ್ಥಿ, ಹಾಗು ವಸ್ತುಗಳನ್ನು ಕ್ರಮ ಸಂಖ್ಯೆ ಅನುಗುಣವಾಗಿ ದಾಖಲಿಸಬೇಕು. ಹಾಗು ಸಂರಕ್ಷಿಸಬೇಕು ಮತ್ತು ಅವುಗಳ ಬಗ್ಗೆ ವಸ್ತು ಸ್ಥಿತಿ ಗತಿ ವರ್ಣನೆ ಇಡಬೇಕು.


60) ಶ್ರೀ ಕ್ಷೇತ್ರದಲ್ಲಿ ವಿವಿಧ ವಿಭಾಗದ ಅಧಿಕಾರಿಗಳ ನೇಮಕಾತಿ ವಿಭಾಗ:

ಶ್ರೀ ಕ್ಷೇತ್ರದಲ್ಲಿ ವಿವಿಧ ವಿಭಾಗದ ಅಧಿಕಾರಿಗಳ ನೇಮಕಾತಿ ಪೀಠಾಧಿಕಾರಿಗಳ ಆಜ್ಞೆಯ ಅನುಸಾರವಾಗಿ ಅಗತಕ್ಕದ್ದು. ಮತ್ತು ಅಧಿಕಾರಿಗಳು ಎಲ್ಲ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವುದರ ಜೊತೆಗೆ ಪೀಠಾಧಿಕಾರಿಗಳ ಆಜ್ಞೆಯನ್ನು ಪಡೆಯುವುದು.