ಆತ್ಮೀಯ ಗುರು ಬಂಧುಗಳೇ ಹಾಗೂ ಸದ್ಭಕ್ತರೇ,

  ಸಾಂಪ್ರತು ಉಭಯ ಕುಶಲೋಪರಿ ಶ್ರೀಕ್ಷೇತ್ರದಲ್ಲಿ ನಿತ್ಯ ತ್ರಿಕಾಲ ಪೂಜೆ, ಅನ್ನದಾನ, ಅತಿಥಿ ಸೇವೆ, ವಿದ್ಯಾದಾನ, ಗೋ ಸೇವೆ ಜೊತೆಗೆ ಸರ್ವ ಧರ್ಮ ಸಮನ್ವಯದ ಜಾಗೃತಿ ಪ್ರಸಾರ ಮತ್ತು ವಿಶ್ವಮಾನವ ಭಾವೈಕ್ಯತೆಯ ಸಂಘಟನೆಯ ಬಗ್ಗೆ ಚಿಂತನೆಯನ್ನು ಮಾಡುತ್ತ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸುತ್ತ ನಾವು ಕ್ಷೇಮವಾಗಿದ್ದೇವೆ. ಪ.ಪೂ.ಮಾರ್ತಾಂಡ ದಿಕ್ಷೀತರು ಮಾಡಿದ ಘೋರ ತಪಶ್ಚರ್ಯಕ್ಕೆ ಮೆಚ್ಚಿ ಶ್ರೀಕ್ಷೇತ್ರ ಕೆಂಗೇರಿ ಅಧಿಪತಿ ಪೂರ್ಣ ಬ್ರಹ್ಮ ಸರ್ವೇಶ್ವರಾವತಾರ ಪ್ರಭು ಶ್ರೀ ಚಿದಂಬರ ಮಹಾಸ್ವಾಮಿಗಳವರು ಲೋಕಕಲ್ಯಾಣ, ಭಕ್ತ ಉದ್ಧಾರಕ್ಕಾಗಿ ಶ್ರೀಮನ್ ಶಾಲಿವಾಹನ ಶಕೆ 1680 ಬಹುಧಾನ್ಯ ನಾಮ ಸಂವತ್ಸರ ಕಾರ್ತಿಕ ವದ್ಯ ಷಷ್ಠಿ ಸೋಮವಾರ ಪ.ಪೂ. ಮಾರ್ತಾಂಡ ದಿಕ್ಷೀತ ಗುರುವರ್ಯ ಮತ್ತು ಶ್ರೀ ಲಕ್ಷ್ಮೀ ಮಾತೆ ಇವರ ಉದರದಲ್ಲಿ ಅವತರಿಸಿದರು. ತಾಯಿಗೆ ಬಾಯಿಯಲ್ಲಿ ಬ್ರಹ್ಮಾಂಡ ತೋರಿಸಿದರು. ಕಲ್ಲು, ಮಣ್ಣು ಸಕ್ಕರೆ ಮಾಡಿದರು. ಮಣ್ಣಿನ ಆನೆಗೆ ಜೀವ ತುಂಬಿ ನಡೆಸಿದರು. ಮೃತ ವೃಷಭವನ್ನು ಸಜೀವಗೊಳಸಿದರು. ಹಿಗೆ ಹಲವಾರು ಬಾಲಲೀಲೆಗಳನ್ನು ತೋರಿಸಿ ತಂದೆ ತಾಯಿಗಳ ಮನಸ್ಸು ತೃಪ್ತಿ ಪಡಿಸಿದರು. ಗ್ರಹಸ್ಥಾಶ್ರಮ ಸಂಪ್ರದಾಯದಲ್ಲಿ ಶ್ರೀ ಚಿದಂಬರ ಮಹಾಸ್ವಾಮಿಗಳ ಅವತಾರವಾದುದಕ್ಕೆ ಜಾವೂಳ, ಧರ್ಮೋಪನಯನ ಸಂಸ್ಕಾರಗಳು ಅವರ ತಂದೆಯವರಿಂದ ದೀಕ್ಷೆ ಪಡೆದುಕೊಂಡರು. ಮುಂದೆ ದ್ವಿತಿಯ ಸುಪುತ್ರ ಪ್ರಭಾಕರ ದೀಕ್ಷಿತರ ಜನನವಾಯಿತು. ಪ್ರಭಾಕರ ದೀಕ್ಷಿತರು ಶೇಷಾಂಶ ಸಂಭೂತರು. ಪ.ಪೂ. ಮಾರ್ತಂಡ ದೀಕ್ಷಿತರು ಶ್ರೀ ಕ್ಷೇತ್ರ ಕೆಂಗೆರಿಯ 25 ಎಕರೆ ಸ್ಥಳವನ್ನು ಅಂದಿನ 90 ನೀಲಕಂಠಿ ರೂ.ದಿಂದ ಖರೀದಿಸಿದರು. ನಂತರ ಇಲ್ಲಿ ವಾಸಸ್ಥಳಕ್ಕೆ ವಾಡೆ ಮತ್ತು ಅನುಷ್ಠಾನ ಸಿಂಹಾಸನ ಪೀಠದ ಜೊತೆಗೆ ಕೆಂಗೇರಿಯ ಕೆರೆಯನ್ನು ಕಟ್ಟಿದರು. ನಂತರ ಮಹಾಸ್ವಾಮಿಗಳ ಉಪನಯನದ ದಿವಸ ಶ್ರಿ ದತ್ತ ಪಾದುಕೆ ಹಾಗೂ ಶ್ರೀ ಸ್ವಯಂ ಪ್ರಕಾಶ ಗುರುಗಳ ಮಂದಿರ ಸ್ಥಾಪಿಸಿದರು. ಪ.ಪೂ. ಮಾರ್ತಂಡ ದೀಕ್ಷಿತರು ನಂತರ ಅನೇಕ ಧಾರ್ಮಿಕ ಗ್ರಂಥಗಳನ್ನು ರಚಿಸಿದರು. ಶ್ರೀ ಚಿದಂಬರ ಮಹಾಸ್ವಾಮಿಗಳಿಂದ ಶ್ರೀಕ್ಷೇತ್ರದಲ್ಲಿ ಶ್ರೀ ಚಿದಂಬರ ಪೀಠ ಆರಂಭವಾಯಿತು. ಮುಂದೆ ಗಂಗೆ ಗೌರಿ ಅವತಾರವಾದಂತಹ ಸಾವಿತ್ರಿ ಮತ್ತು ಸರಸ್ವತಿ ಅವರೊಂದಿಗೆ ಮಹಾಸ್ವಾಮಿಗಳು ವಿವಾಹ ಮಹೋತ್ಸವವಾಗಿ ಗ್ರಹಸ್ಥಾಶ್ರಮವು ಸಂತೋಷಮಯವಾಗಿ ಸಾಗಿಸಿದರು. ಮುಂದೆ ಜೇಷ್ಠ ಪುತ್ರ ದಿವಾಕರ ದೀಕ್ಷಿತರು ಸರಸ್ವತಿ ಮಾತೆಯ ಉದರದಲ್ಲಿ ಜನಿಸಿದರು. ಅಲ್ಲದೇ ಶ್ರೀಕ್ಷೇತ್ರ ಕೆಂಗೇರಿ ಮುರಗೋಡದಿಂದ ಶಾಲಿವಾಹನ ಶಕೆ ಸುಮಾರು 1719-20 ರಿಂದ ಹನ್ನೆರಡು ವರ್ಷ ವಿವಿಧ ಸ್ಥಳಗಳಲ್ಲಿ, ಗ್ರಾಮ, ಊರುಗಳಿಗೆ ಸದ್ಭಾವನಾ ಯಾತ್ರೆ ಕೈಗೊಂಡು ಭಕ್ತರ ಉದ್ದಾರಕ್ಕಾಗಿ ಏಕತಾ ಮನೋಭಾವ ಮತ್ತು ಸರ್ವ ಧರ್ಮ ಸಹಿಷ್ಣುತೆ ಜೊತೆಗೆ ವಿಶ್ವ ಮಾನವ ಭಾವಕ್ಯತೆ ಬರುವ ಉದ್ದೇಶದಿಂದ ಜೊತೆಗೆ ಅನೇಕ ಲೀಲೆಗಳನ್ನು ತೋರಿ ಭಕ್ತರ ಮನೋಕಾಮನೆಗಳನ್ನು ಈಡೇರಿಸಿದರು. ಸದ್ಭಾವನೆಯ ಯಾತ್ರೆಯ ಕೊನೆಯ 3-4 ವರ್ಷ ಗುರ್ಲಹೊಸೂರಿನಲ್ಲಿ ವಾಸ್ತವ್ಯ ಮಾಡಿ ಶಾಲಿವಾಹನ ಶಕೆ 1732 ರಲ್ಲಿ ಗುರ್ಲಹೊಸೂರ ತ್ಯಾಗ ಮಾಡಿ ಪುನಃ ಶ್ರೀಕ್ಷೇತ್ರ ಕೆಂಗೇರಿ ಮುರಗೋಡಕ್ಕೆ ಬಂದರು. ನಂತರ ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಶಿವ ಪಂಚಾಯತನ ಮಾರ್ತಂಡೇಶ್ವರ ದೇವಸ್ಥಾನ ಸ್ಥಾಪಿಸಿ ಗಾಯತ್ರಿ ಪುರಶ್ವರಣ, ಗಾಯತ್ರಿ ಮಹಾಯಾಗ ಜೊತೆಗೆ ಚಿದಂಬರ ಗುರುಪೀಠವನ್ನು ಸ್ಥಾಪಿಸಿದರು.


ಅನೇಕ ಸಂತ ಭಕ್ತರಿಗೆ ಜೀವಾತ್ಮ, ಪರಮಾತ್ಮನ ಬಗ್ಗೆ ಇರುವ ಸಂಬಂಧ, ಆತ್ಮಜ್ಞಾನ ನೀಡಲು ಶ್ರೀ ಚಿದಂಬರ ಮಹಾಸ್ವಾಮಿಗಳು ಸಂತ ಶ್ರೇಷ್ಠ ರಾಜಾರಾಮರಿಗೆ ನಿಜಾತ್ಮಬೋಧವನ್ನು ಬೋಧಿಸಿದರು. ಆಧ್ಯಾತ್ಮಿಕವಾಗಿ ಅನೇಕ ರೀತಿಯ ಗುರುಬೋಧನೆಯನ್ನು ಮಾಡಿದರು. ದೇವನೊಬ್ಬ ನಾಮ ಹಲವು ಎಂದು ಅನೇಕ ಸಂತ ಭಕ್ತರಿಗೆ ಶ್ರೀ ಚಿದಂಬರ ಮಹಾಸ್ವಾಮಿಗಳು ಶಿವ, ವಿಷ್ಣು, ಬ್ರಹ್ಮ, ವೆಂಕಟೇಶ, ಆದಿಶಕ್ತಿ, ದತ್ತ, ವಿಠ್ಠಲ, ರಾಮ, ಕೃಷ್ಣ, ಮುಂತಾದ ರೂಪಗಳಿಂದ ದರ್ಶನ ನೀಡಿ ಎಲ್ಲವೂ ನಾನೇ ಇರುತ್ತೇನೆ. ಹರಿಹರರಲ್ಲಿ ಭೇದವಿಲ್ಲ ಎಂದು ಸಾರಿದರು. ಆದ್ದರಿಂದ ಸಂತ ರಾಜಾರಾಮರು ಶ್ರೀ ಚಿದಂಬರ ಮಹಾಸ್ವಾಮಿಗಳಿಗೆ ಪೂರ್ಣ ಬ್ರಹ್ಮ ಸರ್ವೇಶ್ವರಾವತಾರ ಎಂದು ತಮ್ಮ ಅಭಂಗಗಳಲ್ಲಿ ವರ್ಣಿಸಿದ್ದಾರೆ. ಈ ರೀತಿಯಾಗಿ ಶ್ರೀ ಚಿದಂಬರ ಮಹಾತ್ಮೆಗೆ ಸಂಬಂಧಿಸಿದ ಕೆಲವು ಸಂತ ಭಕ್ತರು ಸಾಹಿತ್ಯರೂಪದಲ್ಲಿ, ಅಭಂಗರೂಪದಲ್ಲಿ, ಗದ್ಯರೂಪದಲ್ಲಿ, ಸ್ತೋತ್ರರೂಪದಲ್ಲಿ, ಪದ್ಯರೂಪದಲ್ಲಿ ಗ್ರಂಥರೂಪದಲ್ಲಿ ರಚಿಸಿದ್ದಾರೆ. ಈ ಗುರುಬೋಧನೆಯ ಸಂದರ್ಭದಲ್ಲಿ ಕೆಲವು ಸಂತ ಭಕ್ತರಾದ ಸಂತ ವಿಠಾಬಾಯಿ, ಭಕ್ತ ಕಹಾರ ಮುಂತಾದವರು ಮಹಾಸ್ವಾಮಿಗಳಿಗೆ “ತಾವು ಸಾಕ್ಷಾತ್ ಪೂರ್ಣ ಬ್ರಹ್ಮ ಪರಮೇಶ್ವರಾವತಾರರು ಇದ್ದು ತಮ್ಮ ಚಿದಂಬರ ನಾಮ ಇಡೀ ಬ್ರಹ್ಮಾಂಡ ತುಂಬ ಬೆಳಗಬೇಕು ಮತ್ತು ಪ್ರತಿ ಮನೆ ಮನೆಯಲ್ಲೂ ಚಿದಂಬರ ನಾಮಸ್ಮರಣೆಯಾಗಬೇಕು ಮತ್ತು ಒಂಭತ್ತು ಲಕ್ಷ ಭಕ್ತರು ನಿಮ್ಮ ದರ್ಶನಕ್ಕೆ ಬರಬೇಕು ಆ ದೃಶ್ಯವನ್ನು ನಾವು ನೋಡಬೇಕು. ಈ ನಮ್ಮ ಮನೋಕಾಮನೆಯನ್ನು ತಾವು ಪೂರ್ಣ ಮಾಡಬೇಕು” ಎಂದು ಮಹಾಸ್ವಾಮಿಗಳಿಗೆ ಭಕ್ತಿಯಿಂದ ನಿವೇದಿಸಿದರು. ಆಗ ಚಿದಂಬರ ಮಹಾಸ್ವಾಮಿಗಳು “ಈಗ ಕಲಿ ಪ್ರಭಾವ ಬಹಳೇ ಇದ್ದುದರಿಂದ ಕೇವಲ ನಿಜ ಭಕ್ತರಿಗೆ ಮಾತ್ರ ನಮ್ಮ ಹಾಗೂ ಕ್ಷೇತ್ರದ ದರ್ಶನ, ಆಶೀರ್ವಾದ ಪ್ರಸಾದ ಸಿಗುತ್ತದೆ. ಈಗ ನಾನು ಶ್ರೀಕ್ಷೇತ್ರ ಕೆಂಗೇರಿಯಲ್ಲಿ ನಿರ್ಗುಣ ನಿರಾಕಾರ ಜ್ಯೋತಿ ರೂಪದಿಂದ ಇದ್ದು, 200 ವರ್ಷಗಳ ನಂತರ ಪುನಃ ನಾನು ಇಲ್ಲಿಯೇ ಸಗುಣಾವತಾರ ತೆಗೆದುಕೊಂಡು ಬಂದು ಪುನಃ ಮುಂದೆ 44 ವರ್ಷ ಸಗುಣರೂಪದಿಂದ ಭಕ್ತರ ಮನೋಕಾಮನೆಗಳನ್ನು ಪೂರೈಸುತ್ತೇನೆ. ಆಗ ಈ ನಿಮ್ಮ ಇಚ್ಛೆ ಪೂರ್ಣಗೊಳ್ಳುವುದು. ಅಲ್ಲಿಯವರೆಗೆ ನಾನು ಅಚಂದ್ರಾರ್ಕವಾಗಿ ಶ್ರೀ ಕ್ಷೇತ್ರ ಕೆಂಗೇರಿಯಲ್ಲಿ ನಿರ್ಗುಣ ನಿರಾಕಾರ ಜ್ಯೋತಿರೂಪದಿಂದ ಲಿಂಗರೂಪದಲ್ಲಿ ಇದ್ದು ಗುಪ್ತ ರೂಪದಿಂದ ಭಕ್ತರ ಉದ್ಧಾರವನ್ನು ಮಾಡುತ್ತಿರುತ್ತೇನೆ.” ಎಂದು ಹೇಳಿದರು. ಆಗ ಸಂತ ವಿಠಾಬಾಯಿ ಅಲ್ಲಿಯೇ ಈ ಕೆಳಗಿನ ಅಭಂಗವನ್ನು ರಚಿಸಿ ಚಿದಂಬರ ಮಹಾಸ್ವಾಮಿಗಳಿಗೆ ಅರ್ಪಿಸಿದರು. “ಕೆಂಗೇರಿ ನಿವಾಸ | ಚಿದಂಬರ || ಮಜ ವಿಸರಲಾಸಿ ಕೈಸಾ | ಹೋತಿ ತ್ರೈಲೋಕ್ಯಾಚಾ ಧನಿ | ತುಝೀ ಅಗಾಧ ಕರಣೀ | ಮುರಗೋಡ ತೇ ಧನ್ಯ”...


ಈ ರೀತಿಯಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳು ಸಂತ, ಭಕ್ತರಿಗೆ ಗುರುಬೋಧನೆಯನ್ನು ಮಾಡುತ್ತ ಎಲ್ಲರೂ ಧರ್ಮ ಮಾರ್ಗದಿಂದ ನಡೆಯಬೇಕು, ಭಕ್ತಿ ಮಾರ್ಗದಿಂದ ನಡೆಯಬೇಕು ಎಂದು ಆದೇಶಿಸುತ್ತ ಜೇಷ್ಠ ಪುತ್ರ ದಿವಾಕರ ದೀಕ್ಷಿತರನ್ನು ದೇವರ ಹಿಪ್ಪರಗಿಗೆ, ಪಂಢರಪುರಕ್ಕೆ ಕಳುಹಿಸಿ, ತಮ್ಮ ಇಬ್ಬರೂ ಧರ್ಮಪತ್ನಿಯರ ಹಾಗೂ ಐದು ಜನ ಪುತ್ರರನ್ನು ಕರೆದು ಅವರ ತಲೆಯ ಮೇಲೆ ತಮ್ಮ ವರದ ಹಸ್ತವನ್ನಿಟ್ಟು ಅವರಲ್ಲಿದ್ದ ದೈವತ್ವವನ್ನು ಮರಳಿ ಪಡೆದು ಶಕೆ 1737ರಲ್ಲಿ ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಔದುಂಬರ ಮತ್ತು ಶ್ರೀರಾಮ ಮಂದಿರದ ಮಧ್ಯದಲ್ಲಿ ತಾವು ಸ್ಥಾಪಿಸಿದ ಚಿದಂಬರಪೀಠ ಸ್ಥಾನದಲ್ಲಿ ತಮ್ಮ ಸಗುಣ ರೂಪವನ್ನು ನಿರ್ಗುಣ ನಿರಾಕಾರ ಜ್ಯೋತಿ ರೂಪದಿಂದ ಲಿಂಗ ರೂಪದಲ್ಲಿ ಲೀನ ಮಾಡಿದರು. ಆಲ್ಲಿ ಜೇಷ್ಠ ಪುತ್ರ ದಿವಾಕರ ದೀಕ್ಷಿತರಿಗೆ ತಮ್ಮ ತಂದೆ ಶ್ರೀ ಚಿದಂಬರ ಮಹಾಸ್ವಾಮಿಗಳು ಸಗುಣ ರೂಪ ತ್ಯಜಿಸಿ ನಿರ್ಗುಣ ರೂಪ ಧಾರಣೆ ಮಾಡಿದ ದೃಷ್ಟಾಂತವಾಯಿತು. ನನಗೆ ತಿಳಿಸದೇ ತಮ್ಮ ತಂದೆಯವರು ನಿರ್ಗುಣ ರೂಪ ಹೇಗೆ ಧಾರಣೆ ಮಾಡಿದರು ಎಂದು ಓಡಿ ಶ್ರೀಕ್ಷೇತ್ರ ಕೆಂಗೇರಿಗೆ ಬಂದು ರೋಧಿಸಹತ್ತಿದರು. ಆಗ ಶ್ರೀ ಚಿದಂಬರ ಮಹಾಸ್ವಾಮಿಗಳು ಮತ್ತೆ ತಾವು ಸಗುಣ ಅವತಾರ ತಾಳಿ ದಿವಾಕರ ದೀಕ್ಷಿತರಿಗೆ “ನನಗೆ ಸಾವು ಇಲ್ಲ. ಲೌಕಿಕಾರ್ಥವಾಗಿ ನಾನು ನಿರ್ಗುಣ ರೂಪ ತಾಳಬೇಕಾಗುತ್ತದೆ. ಆದ್ದರಿಂದ ಸುಬ್ಬಾಪೂರದಲ್ಲಿ ಶ್ರೀ ಸ್ವಯಂಪ್ರಕಾಶ ದಿಕ್ಷೀತರ ಹತ್ತಿರ ಲಿಂಗರೂಪದಲ್ಲಿದ್ದೇನೆ. ಆ ಲಿಂಗವನ್ನು ತಂದು ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಸ್ಥಾಪಿಸು, ನಾನು ಅಚಂದ್ರಾರ್ಕವಾಗಿ ಶ್ರೀಕ್ಷೇತ್ರ ಕೆಂಗೇರಿಯಲ್ಲೇ ನಿರ್ಗುಣ ನಿರಾಕಾರ ಲಿಂಗರೂಪದಿಂದ ಇದ್ದು, ಭಕ್ತರ ಮನದೀಪ್ಸೆಯನ್ನು ಪೂರೈಸುತ್ತಿರುತ್ತೇನೆ ಮತ್ತು ಕೆಂಗೇರಿಯೇ ನನ್ನ ಪ್ರೀತಿಯ ಸ್ಥಾನ.” ಮತ್ತು ಮುಂದೆ ನನ್ನÀ ಸಂಪ್ರದಾಯವನ್ನು ಮುಂದುವರೆಸಬೇಕೆಂದು ಹೇಳಿದರು. ಆಮೇಲೆ ದಿವಾಕರ ದೀಕ್ಷಿತರು ಶಕೆ 1739 ವೈಶಾಖ ಶುದ್ಧ ಷಷ್ಠಿಯಂದು ಸುಬ್ರಹ್ಮಣ್ಯಪುರ (ಸುಬ್ಬಾಪೂರ)ದಲ್ಲಿ ಶ್ರೀ ಚಿದಂಬರ ಲಿಂಗವನ್ನು ತಂದು ಶ್ರಿಕ್ಷೇತ್ರ ಕೆಂಗೇರಿಯಲ್ಲಿ ಪ್ರತಿಷ್ಠ್ಥಾಪಿಸಿ, ಪ್ರಥಮ ದೇವಸ್ಥಾನವನ್ನು ಸ್ಥಾಪಿನೆ ಮಾಡಿ ಅವತ್ತೇ ಶ್ರೀ ಚಿದಂಬರ ಮಹಾಸ್ವಾಮಿಗಳಲ್ಲಿದ್ದ ಅನೇಕ ವಿಚಾgಗÀಗಳನ್ನು ಸಂಸ್ಥಾನದ ವಿವಿಧ ವಿಭಾಗಗಳನ್ನಾಗಿ ಮಾಡಿದರು. ಶ್ರೀ ಚಿದಂಬರ ಮಹಾಸ್ವಾಮಿಗಳ ಇಚ್ಛೆಯಿಂತೆ ಪ.ಪೂ. ಮಾರ್ತಾಂಡ ದೀಕ್ಷಿತರು ಹಾಕಿಕೊಟ್ಟಂತಹ ವೈದಿಕ ಸಂಪ್ರದಾಯದಂತೆ ತ್ರಿಕಾಲ ಪೂಜೆ, ಉತ್ಸವ ಮಹೋತ್ಸವಗಳು, ಹೋಮ ಹವನಗಳು, ನಡೆಯಬೇಕೆಂದು ವೈದಿಕ ಸಂಪ್ರದಾಯವನ್ನು ಜೇಷ್ಠ ಪುತ್ರ ದಿವಾಕರ ದೀಕ್ಷಿತರು ಪ್ರಾರಂಭಿಸಿದರು ಹಾಗೂ ಭೂಪಾಳಿ, ಕಾಕಡಾರತಿ, ಸಾಂಪ್ರದಾಯಿಕ ಭಜನೆ, ಶೇಜಾರತಿ, ಶಿಬಿಕೋತ್ಸವದ ದಿಶಾ ಅಭಂಗಳು ಸಂತ ರಾಜಾರಾಮರು ದಿಂಡಿ ಸಂಪ್ರದಾಯವನ್ನು ಹಾಕಿದರು. ಅದೇ ದಿವಸ ಸಂತ ರಾಜಾರಾಮರು ಶ್ರೀ ಚಿದಂಬರ ಸಹಸ್ರನಾಮಾವಳಿಯನ್ನು ಮಹಾಸ್ವಾಮಿಗಳಿಗೆ ಸಮರ್ಪಣೆ ಮಾಡಿದರು. ಜೇಷ್ಠ ಸುಪುತ್ರ ಶ್ರೀ ದಿವಾಕರ ದೀಕ್ಷಿತರು ಮತ್ತು ಸಂತ ರಾಜಾರಾಮರು ಉತ್ಸವ ಮಹೋತ್ಸವಗಳು ಶ್ರೀಕ್ಷೇತ್ರ ಕೆಂಗೆರಿಯಲ್ಲ್ಗಿ ಆಚರಿಸುವ ಬಗ್ಗೆ ಚಿಂತನೆಯಲ್ಲಿದ್ದಾಗ, ಶಕೆ 1739 ಕಾರ್ತಿಕ ವದ್ಯ ಷಷ್ಟಿಯಂದು ಶ್ರಿ ಚಿದಂಬರೇಶ್ವರ 59ನೇ ಅವತಾರ ಜಯಂತಿಯನ್ನು ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಆಚರಿಸುವ ಜೊತೆಗೆ ಜಯಂತಿ ಅಂಗವಾಗಿ ಪ.ಪೂ. ಮಾರ್ತಾಂಡ ದೀಕ್ಷಿತರು ರಚಿಸಿದ ಶೈವಾಗಮೋಕ್ತ ವಿಧಾನ, ಮಹಾರಥೋತ್ಸವವನ್ನು ಮಾರ್ಗಶೀರ್ಷ ಶುದ್ಧ ಪ್ರತಿಪದೆಯಿಂದ ಸಪ್ತಮಿಯವರೆಗೆ ಮತ್ತು ಚಂಪಾ ಷಷ್ಠಿಯಂದು, ಕುಲಸ್ವಾಮಿ ಮಾರ್ತಾಂಡೇಶ್ವರ ಜಯಂತಿವಿದ್ದುದರಿಂದ ಅದರ ಜೊತೆಗೆ ನಮ್ಮ ಜಯಂತಿ, ಶೈವಾಗಮೋಕ್ತ ಮಹೋತ್ಸವ, ಕಲ್ಯಾಣೋತ್ಸವ, ಮಹಾರಥೋತ್ಸವ, ಇಲ್ಲಿಯೇ ಆಚರಿಸಬೇಕು” ್ರ ಎಂಬ ಶ್ರೀ ಚಿದÀಂಬರ ಮಹಾಸ್ವಾಮಿಗಳ ದೃಷ್ಟಾಂತ ಆದೇಶದ ಅಣತಿಯಂತೆ ದಿವಾಕರ ದಿಕ್ಷೀತರು ಮತ್ತು ಸಂತ ರಾಜಾರಾಮರು ಇವೆರಡನ್ನೂ ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಆಚರಿಸಬೇಕು ಮತ್ತು ಎಲ್ಲ ಸಂತ ಭಕ್ತರೂ, ಎಲ್ಲ ವಾರಕರಿಗಳು, ತಮ್ಮ ತಮ್ಮ ಸ್ಥಳಗಳಲ್ಲಿ ಶ್ರೀ ಚಿದಂಬರ ಜಯಂತಿಯನ್ನು ಆಚರಿಸಿ, ಶೈವಾಗಮೋಕ್ತ, ಕಲ್ಯಾಣೋತ್ಸವ, ಮಹಾರಥೋತ್ಸವದ ಒಂದು ದಿನದ ಮೊದಲು ಸಾಯಂಕಾಲ ಶ್ರೀಕ್ಷೇತ್ರ ಕೆಂಗೇರಿಗೆ ಬಂದು ಈ ಮಹೋತ್ಸವಗಳಲ್ಲಿ ಭಾಗಿಯಾಗಬೇಕೆಂಬ ಸಂಪ್ರದಾಯವನ್ನು ಹಾಕಿದರು. ಮತ್ತು ದಿಂಡಿ ವಿಭಾಗದಿಂದ ಉತ್ಸವ, ಆಮಂತ್ರಣ ಅಭಂಗವನ್ನು ಸಮರ್ಪಿಸಿದರು.

“ಶ್ರೀ ಕ್ಷೇತ್ರ ಕೆಂಗೇರಿ ಯೇಥೆ ಉತ್ಸವ ಯಾತ್ರೇಸಿ | ವಾರಕರಿ ಪ್ರತಿ ವರ್ಷಿ |
ಐಸಾ ಸಾಂಗಾವೇ ಸರ್ವಾಸಿ | ಮಾಝೀ ವಿನಂತಿ ಪಾಯಿಶಿ |
ಲೋಕಜಾತಿ ಪಂಢರಿಸಿ | ಯೇಥಿ ಪಂಢರಿ ಪ್ರಯಾಗ ಕಾಶಿ |
ಐಸೆ ಮ್ಹಣಾಲ ಕಶಾವರೂನ | ಯೇಥೇ ಅವತಾರ ಸಗುಣ |
ಗಂಗಾ ಯಮುನಾ ಜ್ಯಾಚಿ ಚರಣಿ | ತೋಚಿ ಚಿದಂಬರ ಧಣಿ |
ಚಿದಂಬರ ಚರಣಿ ಲಕ್ಷ ಸದಾ | ಚುಕವಿತೊ ಭವಬಾಧಾ |
ಚಿದಂಬರ ಜಯಂತಿ ಉತ್ಸವಾಸಿ | ಕಾರ್ತಿಕ ವದ್ಯ ಷಷ್ಠಿಸಿ |
ಗೋಪಾಳಕಾಲಾ ಉತ್ಸವ ಜಾಣ | ಕಾರ್ತಿಕ ವದ್ಯ ದಶಮಿ ಜಾಣ |
ಕಲ್ಯಾಣೋತ್ಸವ ಸಗುಣಮೂರ್ತಿ ಜವಳ | ಮಾರ್ಗಶೀರ್ಷ ಶುದ್ಧ ಚಂಪಾ ಷಷ್ಠಿ |
ಚಿದಂಬರ ದಾಸ ಮ್ಹಣೆ ಆದಿ | ಪಂಚಮಿ ಜಿ ಯೇಣೆ ಉತ್ಸವಾಸಿ”


ಈ ಪ್ರಕಾರ ಶ್ರೀ ಚಿದಂಬರ, ಪರಂಪರೆಯನ್ನು ಮುಂದುವರೆಸಿದರು

  ಅಂದಿನಿಂದ ಇಲ್ಲಿಯವರೆಗೆ ತ್ರಿಕಾಲ ಪೂಜೆ, ಅನ್ನದಾನ ಅನುಗ್ರಹ ಆಶೀರ್ವಾದ, ಭಕ್ತರಿಗೆ ಅಭಯದಾನ ವಂಶಪಾರಂಪರ್ಯವಾಗಿ ನಡೆಯುತ್ತ ಬಂದಿವೆ. ಇಂತಹ ಪರಿಪೂರ್ಣ ಪರಬ್ರಹ್ಮ ಪರಮೇಶ್ವರಾವತಾರ ಶ್ರೀ ಚಿದಂಬರ ಮಹಾಸ್ವಾಮಿಗಳು ಸಗುಣ ರೂಪದಿಂದ ಲಿಂಗಾವತಾರ ತಾಳಿ ಶಕೆ 1937 ಮನ್ಮಥನಾಮ ಸಂವತ್ಸರ ಪೌಷ್ಯ ಶುದ್ಧ ಚೌಥಿ ಬುಧವಾರ ತಾ. 13.01.2015 ಕ್ಕೆ ಇಲ್ಲಿಗೆ 200 ವರ್ಷಗಳು ಆಗುತ್ತಿವೆ. ಅಂದು ಲಿಂಗಾವತಾರದ ದ್ವೀಶತಮಾನದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಲಿಂಗಾವತಾರದ 200 ವರ್ಷಗಳ ಅಂಗವಾಗಿ ಶಕೆ. 1936 ಜಯನಾಮ ಸಂವತ್ಸರ ಪೌಷ್ಯ ಶುದ್ಧ ಪ್ರತಿಪದೆ (ದ್ವಿತಿಯಾ) ಸೋಮವಾರ ತಾ. 22.12.2014 ರಿಂದ ಶಕೆ. 1947 ವಿಶ್ವಾವಸುನಾಮ ಸಂವತ್ಸರ ಪೌಷ್ಯ ಶುದ್ಧ ಸಪ್ತಮಿ ತಾ. 27.12.2025 ರವರೆಗೆ ಅಖಂಡ 11 ವರ್ಷಗಳ ಕಾಲ ಭಕ್ತಿ ಪ್ರಧಾನ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೇ ಶಕೆ 1948 ಪರಾಭವನಾಮ ಸಂವತ್ಸರ ಪೌಷ್ಯ ಶುದ್ಧ ಪ್ರತಿಪದೆ ಶುಕ್ರವಾರ ತಾ. 08.1.2026 ರಿಂದ 14.1.2026 ರವರೆಗೆ ಈ ಅಖಂಡ 11 ವರ್ಷಗಳ ಭಕ್ತಿ ಪ್ರಧಾನ ಕಾರ್ಯಕ್ರಮಗಳ ಸಾಂಗತಾ ಮಹೋತ್ಸವವನ್ನು 211 ನೇ ಶ್ರೀ ಚಿದಂಬರ ಲಿಂಗಾವತಾರ ವಾರ್ಷಿಕೋತ್ಸವದ ಜೊತೆಗೆ ಶ್ರೀ ಚಿದಂಬರ ಮಹಾಸ್ವಾಮಿಗಳಿಗೆ ಸಮರ್ಪಣೆಯಾಗಲಿದೆ. ಮತ್ತು ಚಿದಂಬರ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾನ ಹಾಗೂ ಸಂಸ್ಥಾನ ಸಂಸ್ಥಾಪನೆ ಶಕೆ 1939 ಹೇಮಲಂಬಿನಾಮ ಸಂವತ್ಸರ ವೈಶಾಖ ಶುದ್ಧ ಷಷ್ಠಿ ಗುರುವಾರ ತಾ. 12.05.2016 ಕ್ಕೆ 200 ವರ್ಷಗಳು ತುಂಬುತ್ತದೆ. ಅದರ ಅಂಗವಾಗಿಯೂ ಕೂಡ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಗ ನಿಮಿತ್ಯ ಶಕೆ 1938 ದುರ್ಮುಖನಾಮ ಸಂವತ್ಸರ ವೈಶಾಖ ಶುದ್ಧ ಪ್ರತಿಪದೆ ಶನಿವಾರ ತಾ. 07.05.2016 ರಿಂದ ಶಕೆ 1949 ಪ್ಲವಂಗನಾಮ ಸಂವತ್ಸರ ವೈಶಾಖ ಶುದ್ಧ ಸಪ್ತಮಿ ಬುಧವಾರ ತಾ. 13.05.2027 ರವರೆಗೆ ಅಖಂಡ 11 ವರ್ಷಗಳ ಕಾಲ ವಿಶೇಷ ಭಕ್ತಿ ಪ್ರಧಾನ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮದ ಸಾಂಗತಾ ಕಾರ್ಯಕ್ರಮವು ಶಕೆ. 1950 ಕೀಲಕನಾಮ ಸಂವತ್ಸರ ವೈಶಾಖ ಶುದ್ಧ ಪ್ರತಿಪದೆ ತಾ. 25.04.2028 ರಿಂದ 01.05.2028 ರವರೆಗೆ 211 ನೇ ಶ್ರೀ ಚಿದಂಬರ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾನ ಸ್ಥಾಪನೆ, ಸಂಸ್ಥಾನ ಸಂಸ್ಥಾಪನೆ ವಾರ್ಷಿಕೋತ್ಸವದ ಜೊತೆಗೆ ಶ್ರೀ ಚಿದಂಬರ ಮಹಾಸ್ವಾಮಿಗಳಿಗೆ ಸಮರ್ಪಣೆಯಾಗಲಿವೆ


ಈ ಮೇಲಿನ ಎಲ್ಲ ಕಾರ್ಯಕ್ರಮಗಳು ಶ್ರೀ ಚಿದಂಬರ ಮಹಾಸ್ವಾಮಿಗಳು ನಿರ್ಗುಣ ನಿರಾಕಾರ ಲಿಂಗರೂಪದಿಂದ ಮತ್ತೆ ಸಗುಣ ಅವತಾರಕ್ಕೆ ಬರಲು ಪೂರಕವಾಗಿ ನಡೆಯಲಿವೆ. ಆ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಭಕ್ತರ ಉದ್ಧಾರಕ್ಕಾಗಿ ಅನೇಕ ಭಕ್ತಿ ಪ್ರಧಾನ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಗಳಲ್ಲಿ ಸರ್ವ ಭಕ್ತರು ಭಾಗಿಗಳಾಗಿ ಸೇವಾಕರ್ತರಾಗಿ ಸೇವೆ ಸಲ್ಲಿಸಿ ಕೃತಾರ್ಥರಾಗಬೇಕೆಂದು ಈ ಮೂಲಕ ಇಚ್ಛಿಸುತ್ತೇವೆ. ದ್ವೀಶತಮಾನೋತ್ಸವ ಹಾಗೂ ಸಾಂಗತಾ ಮಹೋತ್ಸವಕ್ಕೆ ವಿವಿಧ ಪೂಜನೀಯ ಮಠಾಧೀಶರುಗಳು ಹಾಗೂ ಸರ್ವಧರ್ಮ ಗುರುಗಳು ಆಗಮಿಸಿ ತತ್ವೋಪದೇಶ ನೀಡಲಿದ್ಧಾರೆ ಮತ್ತು ಅನೇಕ ವಿದ್ವಾಂಸರು ತತ್ವಜ್ಞಾನವನ್ನು ಉಣಬಡಿಸಲಿದ್ದಾರೆ. ಮಾನ್ಯ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಆಗಮಿಸಿ ಶುಭ ಸಂದೇಶ ನೀಡುವರು. ವಿವಿಧ ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ತೋರಲಿದ್ಧಾರೆ. ಇವರೆಲ್ಲರಿಗೂ ಶ್ರೀಕ್ಷೇತ್ರದ ಪೀಠದಿಂದ ಗೌರವ, ಸತ್ಕಾರ ನೀಡಲಿದ್ದೇವೆ. ಈ ಕಾರ್ಯಕ್ರಮಗಳು ಯಾವುದೇ ಜಾತಿ, ಮತ ಭೇದವಿಲ್ಲದೇ ಸರ್ವ ಹಿಂದೂ ಧರ್ಮದ ಸರ್ವ ಸಮಾಜ ಬಾಂಧವರು ಹಾಗೂ ನಮ್ಮ ಎಲ್ಲ ಸಕಲ ಸಂತ, ಭಕ್ತ ವೃಂದ ಮತ್ತು ತಾವು ಮತ್ತು ತಮ್ಮ ಪರಿವಾರದವರು ಈ ದ್ವೀಶತಮಾನೋತ್ಸವ ಹಾಗೂ ಸಾಂಗತಾ ಮಹೋತ್ಸವಗಳಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಚಿದಂಬರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕೆಂದು ನಾವುಗಳು ಇಚ್ಛಿಸುತ್ತೇವೆ.