|| ಶ್ರೀ ಗುರುಭ್ಯೊಂ ನಮ: ||

|| ಹರಿ: ಓಂ ||

|| ಶ್ರೀ ಚಿದಂಬರ ಪೀಠ ||

Image  ಈ ಪೀಠದ ಮೂಲ ಉದ್ದೇಶ, ಪೀಠ ಪರಂಪರೆಯನ್ನು ಮುಂದೆ ನಡೆಸಿಕೊಂಡು ಹೋಗುವುದು. ಆ ಜನ್ಮ ವಂಶ ಪರಂಪರ, ಗೃಹಸ್ಥಾಶ್ರಮ ದೊಂದಿಗೆ ಸನಾತನ, ವೈದಿಕ, ಧರ್ಮದ ಪರಂಪರಯನ್ನು ಮುಂದೆ ನಡೆಸಿಕೊಂಡು ಹೋಗುವುದಾಗಿದೆ. ಇದರ ಮುಖ್ಯ ಸಿಧ್ಧಾಂತಗಳಾದ, ಧರ್ಮ, ಅರ್ಥ, ಕಾಮ, ಮೋಕ್ಷ, ಮತ್ತು ಸನಾತನ ವೈದಿಕ ಪರಂಪರಯ ಆಧಾರ ಸ್ಥಂಬಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ, ಇವುಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು.

ಕರ್ಮ ಮಾರ್ಗವು ಚಿದಂಬರ ಪೀಠದ ಮೂಲ ಉದ್ದೇಶವನ್ನು ಸಾರುತ್ತದೆ, ಅಲ್ಲದೆ ಕರ್ಮ ಮಾರ್ಗದ ಬಗ್ಗೆ ವಿಶೇಷ ಗಮನವನ್ನು ಹರಿಸುತ್ತದೆ. ತ್ರಿಕಾಲ ಸ್ನಾನ, ಸಂಧ್ಯಾವಂದನೆ, ಕುಲದೇವತಾ ಉಪಾಸನೆ ಮಾಡಿಕೊಂಡು ಹೋಗುವುದು.


|| ಶ್ರೀ ಚಿದಂಬರ ಗುರು ಪೀಠ ||

Image   ಗುರು ಪೀಠದ ಮೂಲ ಉದ್ದೇಶಗಳು, ಗುರು-ಶಿಷ್ಯ ಪರಂಪರಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಇದು ಜ್ಞಾನ ಮಾರ್ಗದ ಒಂದು ಸಂಕೇತವಾಗಿರುತ್ತದೆ. ಜೀವಾತ್ಮ ಮತ್ತು ಪರಮಾತ್ಮರ ನಡುವಿನ ಬಾಂಧವ್ಯ ಮತ್ತು ಆತ್ಮ-ಜ್ಞಾನದ ಬಗೆಗಿನ ವಿಷಯವನ್ನು ಉಲ್ಲೇಖಿಸುತ್ತದೆ. ಜೊತೆಗೆ ಭಗವಂತನ ನಾಮ ದೀಕ್ಷೆಯನ್ನು ಕೊಟ್ಟು ಭಕ್ತಿ ಮಾರ್ಗದಲ್ಲಿ ಮುನ್ನಡೆಯಲು ಪ್ರೆರೇಪಿಸುತ್ತದೆ. ಸಂತ ಭಕ್ತರು, ಶಿಷ್ಯರು ಮತ್ತು ಜನರು ತಮ್ಮ ಅನೇಕ ಸಮಸ್ಯೆಗಳನ್ನು ಹಾಗು ಶ್ರೀ ಶಿವ ಚಿದಂಬರ ಮೂಲ ಸಂಪ್ರದಾಯದ ತತ್ವದ ಬಗ್ಗೆ ತಿಳಿದುಕೊಳ್ಳಬಹುದು. ಗುರುಪೀಠದಲ್ಲಿ ವಂಶಪರಂಪರೆಯಾಗಿ ಪೀಠಾಧಿಕಾರಿಗಳು ಸದಾ ಗುರುಬೋಧನೆ ಮಾಡುತ್ತಾರೆ.

ಗುರೂಪದೇಶ, ತತ್ವ ಸಿಧ್ಧಾಂತ, ಭಕ್ತಿ, ಜ್ಞಾನ, ವೈರಾಗ್ಯ, ಈ ತತ್ವಗಳನ್ನು ಪೀಠಾಧಿಕಾರಿಗಳು ಬೋಧಿಸುತ್ತಾರೆ.

ಧ್ಯಾನ ಮಂತ್ರ

ಶ್ರೀ ಮದ್ಗುರುಂ ಸಕಲಭೂಷಣ ಭೂಷಿತಾಂಗಂ ದಿವ್ಯಾಂಬರ ಸ್ಮಿತವಿಕಾಸ ಮುಖಾರವಿಂದಂ ಚಿನ್ಮುದ್ರಯಾಂಕಿತಕರಂ ಮಹನೀಯಮೂರ್ತಿಂ ಧ್ಯಾಯೇತ್ಸುಧೀ: ಶಿವಚಿದಂಬರಮಾದಿದೇವಂ ||1||

ಚಿರಂತನಶ್ಚಿನ್ಮಯ ದಿವ್ಯ ದೇಹ: ಚರಾಚರಸ್ಥಶ್ಚಿರಪುಣ್ಯದಾಯಿ ಚಕಾರಯಶ್ಚಿತ್ರ ತರಾಣಿ ಬೂಮೌ ಚಿದಂಬರೋ ಮೇ ಶ್ರಿಯಮಾತನೋತು ||2||

ದಮಾದಿಯುಕ್ತೋ ದದತಾಂ ಸುದಾತಾ ದರಸ್ಮಿತೋ ದೈವತೌಸಾರ್ವಭೌಮ: ದಶಾವಿಶೇಷೋ ದಲಿತೌಘಪಾಶ: ಚಿದಂಬರೋ ಮೇ ಶ್ರಿಯಮಾತನೋತು ||3||

ಬಲಾರಿಮುಖೈರ್ಬಹುರೂಪಮಾನೋ ಬಲೇಶವ್ವರೋ ಬಾಧಿತಶತ್ರುಜಾತ: ಬಹೂರೂಪಕಾರೋಬಹಿರಂಗ ರಂಗ: ಚಿದಂಬರೋ ಮೇ ಶ್ರಿಯಮಾತನೋತು ||4||

ರಮಾಭಿರಾಮೋ ರಮಣೀಯರಾಮೋ ರರಾಜ ರಾಜೀವರಸಾತಲೇಯ: ರತೀಶರೂಪೊ ರಜತಾದ್ರಿಭೂಪ: ಚಿದಂಬರೋ ಮೇ ಶ್ರಿಯಮಾತನೋತು ||5||

ಗುರುರ್ಗುರೂಣಾಂ ಗುರು ಕೀರ್ತಿನೀಯೋ ಗುಣಾಗುಣಜ್ಞೋ ಗುಣಿನಾಂ ಗುಣೇಶ: ಗುರುಪ್ರಿಯೋ ಗೌರವ ಗಣ್ಯಕೀರ್ತಿ: ಚಿದಂಬರೋ ಮೇ ಶ್ರಿಯಮಾತನೋತು ||6||

ರುಚಪ್ರಸಾರೀ ಋಣಕಷ್ಟಹಾರೀ ರುಜಾಂಪ್ರಹಾರೀರುರುಪೋತಧಾರೀ ರುಷೋನಿವಾರೀ ರುಜಿರಾತಿಹಾರೀ ಚಿದಂಬರೋ ಮೇ ಶ್ರಿಯಮಾತನೋತು ||7||

ಚಿದಂಬರಾಖ್ಯಸ್ಯ ಗುರೋ ಶಿವಸ್ಯ ಷಡಕ್ಷರಸ್ತೋತ್ರಮತೀವ ಭಕ್ತ್ಯಾ ಕೃತಂಶಿವಾರ್ಯೇಣ ಪಠಂತಿ ತೇಷಾಂ ಚಿದಂಬರೋ ಮೇ ಶ್ರಿಯಮಾತನೋತು ||8||


ಮೂಲ ಮಂತ್ರ :
|| ಓಂ ಶ್ರೀ ಶಿವಚಿದಂಬರಾಯ ನಮ: ||

ಶ್ರೀ ಶಿವ ಚಿದಂಬರ ಗುರುಗಳು ಶಾಲಿವಾಹನ ಶಖೆ 1732 ರಲ್ಲಿ ಶ್ರೀ ಕ್ಷೇತ್ರ ಕೆಂಗೇರಿಯಲ್ಲಿ ಶ್ರೀ ಗುರುಪೀಠ ಸ್ಥಾಪನೆ ಮಾಡಿದ ಸಂತ ರಾಜಾರಾಮರಿಗೆ ನಿಜಾತ್ಮಾಬೋಧ ಮಾಡಿದ್ದಾರೆ.



|| ಶ್ರೀ ಚಿದಂಬರೇಶ್ವರ ಸಂಸ್ಥಾನ ||

Image  ಶ್ರೀ ಚಿದಂಬರ ಸಂಸ್ಥಾನ ಶ್ರೀ ಕ್ಷೇತ್ರ ಕೆಂಗೇರಿಯಲ್ಲಿ ಶ್ರೀ ಚಿದಂಬರ ಮಹಾಸ್ವಾಮಿಗಳಿಂದ ಶ್ರೀ ಚಿದಂಬರ ಸಂಸ್ಥಾನ ಆರಂಭವಾಯಿತು. ಸಕಲ ಭಕ್ತವೃಂದ ರಾಜಾಧಿರಾಜ ಮಹಾರಾಜರು ಶ್ರೀ ಚಿದಂಬರರನ್ನು ಕುರಿತು "ಅಖಿಲಾಂಡ ಕೋಟಿ ಬ್ರಮ್ಹಾಂಡ ನಾಯಕ ರಾಜಾಧಿರಾಜ ಶ್ರೀ ಕ್ಷೇತ್ರ ಕೆಂಗೇರಿ ನಿವಾಸಿ ಭಕ್ತಾಭೀಮಾನಿ ಶ್ರೀ ಶಿವ ಚಿದಂಬರ ಮಹಾರಾಜ ಕೀ ಜೈ" ಯೆಂದು ಘೋಷಯನ್ನು ಮಾಡಿದರು. ಶ್ರೀ ಕ್ಷೇತ್ರವನ್ನು ಶೂನ್ಯ ಸಿಮಹಾಸನ ಎಂದು ಸಂತ ವಿಠಾಬಾಯಿಯವರು ವರ್ಣನೆ ಮಾಡಿದ್ದಾರೆ. ಇದರ ಅರ್ಥ ಯಾವುದೇ ಅಷ್ಟ ವೈಭವಗಳಿಲ್ಲದೆ ಸೋನ್ನೆಯಿಂದ ಮೇಲೆ ಬರುವುದು, ಮತ್ತು ವೈರಾಗ್ಯದಿಂದ ಸಾಧನೆ ಮಾಡುವುದು ಈ ಸಂಸ್ಥಾನದ ಉದ್ದೇಶವಾಗಿದೆ.