ಸರ್ವರ ಅಖಂಡ ಕಲ್ಯಾಣ ಬಯಸುವ ಶ್ರೀ ಶಂಕರ ದೀಕ್ಷಿತರು, ಪೀಠಾಧಿಕಾರಿಗಳು, ಗುರುಮಹಾರಾಜರು.

ನಿರಂತರ ಶ್ರೇಯ ಸಮಿಹಮಾನ ಸವರ್ೇಶ್ವರಾವತಾರ ಪೂರ್ಣಬ್ರಹ್ಮ ಶ್ರೀ ಚಿದಂಬರ ದೀಕ್ಷೀತ ತಸ್ಯಜೇಷ್ಠಪುತ್ರ್ರ ಶ್ರೀ ದಿವಾಕರ ದಿಕ್ಷೀತ ತಸ್ಯಪುತ್ರ ಶ್ರೀ ಚಿದಂಬರ ದಿಕ್ಷೀತ (ಅಣ್ಣಾ ದಿಕ್ಷೀತ) ತಸ್ಯಪ್ರಪೌತ್ರ ದಿವಾಕರ ದಿಕ್ಷೀತ ತಸ್ಯಪುತ್ರ ಶಂಕರ ದಿಕ್ಷೀತ, ಪೀಠಾಧಿಕಾರಿಗಳು ಮಾಡುವ ಶಿವಚಿದಂಬರ ಸ್ಮರಣಪೂರ್ವಕ ಅನಂತ ಶುಭಕಾಮನೆಗಳು.

ಸಾಂಪ್ರತು ಉಭಯ ಕುಶಲೋಪರಿ ಶ್ರೀಕ್ಷೇತ್ರದಲ್ಲಿ ನಿತ್ಯ ತ್ರಿಕಾಲ ಪೂಜೆ, ಅನ್ನದಾನ, ಅತಿಥಿ ಸೇವೆ, ವಿದ್ಯಾದಾನ, ಗೋ ಸೇವೆ ಜೊತೆಗೆ ಸರ್ವ ಧರ್ಮ ಸಮನ್ವಯದ ಜಾಗೃತಿ ಪ್ರಸಾರ ಮತ್ತು ವಿಶ್ವಮಾನವ ಭಾವೈಕ್ಯತೆಯ ಸಂಘಟನೆಯ ಬಗ್ಗೆ ಚಿಂತನೆಯನ್ನು ಮಾಡುತ್ತ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸುತ್ತ ನಾವು ಕ್ಷೇಮವಾಗಿದ್ದೇವೆ. ಶ್ರೀಕ್ಷೇತ್ರ ಕೆಂಗೇರಿ ನಿವಾಸಿ ಭಕ್ತಾಭಿಮಾನಿ ರಾಜಾಧಿರಾಜ ಶ್ರೀ ಚಿದಂಬರ ಮಹಾಸ್ವಾಮಿಗಳು ಸಗುಣಾವತಾರ ಧರಿಸಿ ಲೋಕ ಕಲ್ಯಾಣ, ಭಕ್ತರ ಉದ್ಧಾರಕ್ಕಾಗಿ ಅನೇಕ ಲೀಲೆಗಳನ್ನು ತೋರಿ ಶಕೆ 1737 ರಲ್ಲಿ ಲಿಂಗಾವತಾರ ತಾಳಿದರು ಮತ್ತು ಶಕೆ 1739 ರಲ್ಲಿ ಲಿಂಗ ಪ್ರತಿಷ್ಠಾಪನೆ ಪ್ರಥಮ ದೇವಸ್ಥಾನ ಸ್ಥಾಪನೆಯಾಗಿ 200 ವರ್ಷಗಳು ಸಂಧಿಸುತ್ತಲಿವೆ. ಇದರ ಪ್ರಯುಕ್ತ ವಿಶೇಷ ಭಕ್ತಿ ಪ್ರಧಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಶ್ರೀಕ್ಷೇತ್ರದ ಇತಿಹಾಸ ಭವ್ಯ ಪರಂಪರೆ ಅಧ್ಯಾತ್ಮಿಕ ಧಾಮರ್ಿಕ ಹಾಗೂ ಸಾಮಾಜಿಕ ಚಿಂತನೆಗಳನ್ನು ವ್ಯಕ್ತ ಪಡಿಸುತ್ತ ಈ ಕಾರ್ಯಕ್ರಮಗಳನ್ನು ಆಚರಿಸುವ ಕಲ್ಪನೆಯನ್ನು ಕೊಡುತ್ತಲಿದ್ದೇವೆ. ಪ್ರಕಾಂಡ ಪಂಡಿತರು, ಚತುವರ್ೇದ ಪಾರಂಗತರು, ಆರು ಶಾಸ್ತ್ರ ಹದಿನೆಂಟು ಪುರಾಣಗಳನ್ನು ಮತ್ತು ವೇದ ವೇದಾಂಗಗಳನ್ನು ಅಧ್ಯಯನ ಮಾಡಿದಂತಹ ಮೇಧಾವಿಗಳಿದ್ದರೂ ಕೂಡ ಪ.ಪೂ. ಮಾತರ್ಾಂಡ ದಿಕ್ಷೀತರಿಗೆ ಸಂತತಿ ಇರಲಿಲ್ಲ. ಆದ್ದರಿಂದ ಅವರ ಮನಸ್ಸಿಗೆ ತುಂಬಾ ಖೇದವಾಗಿತ್ತು. ಅದಕ್ಕೋಸ್ಕರವಾಗಿ ಅವರು ಸಾಕಷ್ಟು ವೃತಗಳೂ ಹಾಗೂ ಗಾಯತ್ರೀ ಪುರಶ್ಚರಣ ಮಾತರ್ಾಂಡೇಶ್ವರನ ಸನ್ನಿಧಿಯಲ್ಲಿ ಮಾಡುವಾಗ ಮಾತರ್ಾಂಡೇಶ್ವರನ ಅದೇಶದಂತೆ ಅವರು ಆಕಾಶ ಚಿದಂಬರಮ್ ಕ್ಷೇತ್ರಕ್ಕೆ ಹೋಗಿ ಅಲ್ಲಿ ಹನ್ನೆರಡು ವರ್ಷ ಶಿವಪಂಚಾಕ್ಷರಿ ಮೂಲ ಮಂತ್ರದಿಂದ ಅನುಷ್ಠಾನ ಮಾಡಿದ ನಂತರ ಸಾಕ್ಷಾತ್ ಪರಮೇಶ್ವರನು ದಿಕ್ಷೀತರು ಮಾಡಿದ ಘೋರ ತಪಶ್ಚರ್ಯಕ್ಕೆ ಮೆಚ್ಚಿ "ಮನದಿಚ್ಛೆ ಏನು" ಎಂದು ಕೇಳಿದಾಗ ಅವರು ಎಲ್ಲವನ್ನೂ ಮರೆತು "ನಿನ್ನ ದರ್ಶನವೇ ಸಾಕು. ನಿನ್ನಲ್ಲಿ ಅನನ್ಯ ಭಕ್ತಿಯನ್ನು ಕೊಡು" ಎಂದಾಗ ಪರಶಿವನು "ಪುತ್ರ ಸಂತತಿ ಅಪೇಕ್ಷೆಯಿಂದ ನೀವು ಮಾಡಿದ ತಪಶ್ಚರ್ಯ ಮರೆತಿರೇನು" ಎಂದು ಕೇಳಿದಾಗ ದಿಕ್ಷೀತರು "ಹೌದು ನಿನ್ನಂಥ ಪುತ್ರನನ್ನು ಕರುಣಿಸು" ಎಂದಾಗ ಪರಶಿವನು "ನನ್ನಂಥ ಮಗನನ್ನು ಕರುಣಿಸುವದೇನು? ಲೋಕ ಕಲ್ಯಾಣಾರ್ಥವಾಗಿ ಹಾಗೂ ಭಕ್ತರ ಉದ್ಧಾರಕ್ಕಾಗಿ ನಾನೇ ನಿಮ್ಮ ಉದರದಲ್ಲಿ ಪುತ್ರನಾಗಿ ಅವತರಿಸುವೆನು" ಎಂದು ಹೇಳಿ ಅದೃಶ್ಯನಾದನು. ನಂತರ ಅವರು ತಮ್ಮ ಧರ್ಮ ಪತ್ನಿಗೆ ನಡೆದ ಘಟನೆಯನ್ನು ವಿವರಿಸಿ ತಮ್ಮ ತಪವನ್ನು ಮಂಗಲವನ್ನು ಮಾಡಿ ನಂತರ ದಿಕ್ಷೀತರು ಪತ್ನಿ ಸಮೇತ ಮುರಗೋಡಿಗೆ ಆಗಮಿಸಿದರು. ನಂತರ ಶ್ರೀಕ್ಷೇತ್ರ ಕೆಂಗೇರಿ ಅಧಿಪತಿ ಪೂರ್ಣ ಬ್ರಹ್ಮ ಸವರ್ೇಶ್ವರಾವತಾರ ಪ್ರಭು ಶ್ರೀ ಚಿದಂಬರ ಮಹಾಸ್ವಾಮಿಗಳವರು ಲೋಕಕಲ್ಯಾಣ, ಭಕ್ತ ಉದ್ಧಾರಕ್ಕಾಗಿ ಶ್ರೀಮನ್ ಶಾಲಿವಾಹನ ಶಕೆ 1680 ಬಹುಧಾನ್ಯ ನಾಮ ಸಂವತ್ಸರ ಕಾತರ್ಿಕ ವದ್ಯ ಷಷ್ಠಿ ಸೋಮವಾರ ಪ.ಪೂ. ಮಾತರ್ಾಂಡ ದಿಕ್ಷೀತ ಗುರುವರ್ಯ ಮತ್ತು ಶ್ರೀ ಲಕ್ಷ್ಮೀ ಮಾತೆ ಇವರ ಉದರದಲ್ಲಿ ಅವತರಿಸಿದರು. ತಾಯಿಗೆ ಬಾಯಿಯಲ್ಲಿ ಬ್ರಹ್ಮಾಂಡ ತೋರಿಸಿದರು. ಕಲ್ಲು, ಮಣ್ಣು ಸಕ್ಕರೆ ಮಾಡಿದರು. ಮಣ್ಣಿನ ಆನೆಗೆ ಜೀವ ತುಂಬಿ ನಡೆಸಿದರು. ಮೃತ ವೃಷಭವನ್ನು ಸಜೀವಗೊಳಸಿದರು. ಹಿಗೆ ಹಲವಾರು ಬಾಲಲೀಲೆಗಳನ್ನು ತೋರಿಸಿ ತಂದೆ ತಾಯಿಗಳ ಮನಸ್ಸು ತೃಪ್ತಿ ಪಡಿಸಿದರು. ಗ್ರಹಸ್ಥಾಶ್ರಮ ಸಂಪ್ರದಾಯದಲ್ಲಿ ಶ್ರೀ ಚಿದಂಬರ ಮಹಾಸ್ವಾಮಿಗಳ ಅವತಾರವಾದುದಕ್ಕೆ ಜಾವೂಳ, ಧಮರ್ೋಪನಯನ ಸಂಸ್ಕಾರಗಳು ಅವರ ತಂದೆಯವರಿಂದ ದೀಕ್ಷೆ ಪಡೆದುಕೊಂಡರು. ಮುಂದೆ ದ್ವಿತಿಯ ಸುಪುತ್ರ ಪ್ರಭಾಕರ ದೀಕ್ಷಿತರ ಜನನವಾಯಿತು. ಪ್ರಭಾಕರ ದೀಕ್ಷಿತರು ಶೇಷಾಂಶ ಸಂಭೂತರು. ಪ.ಪೂ. ಮಾರ್ತಂಡ ದೀಕ್ಷಿತರು ಶ್ರೀ ಕ್ಷೇತ್ರ ಕೆಂಗೆರಿಯ 25 ಎಕರೆ ಸ್ಥಳವನ್ನು ಅಂದಿನ 90 ನೀಲಕಂಠಿ ರೂ.ದಿಂದ ಖರೀದಿಸಿದರು. ನಂತರ ಇಲ್ಲಿ ವಾಸಸ್ಥಳಕ್ಕೆ ವಾಡೆ ಮತ್ತು ಅನುಷ್ಠಾನ ಸಿಂಹಾಸನ ಪೀಠದ ಜೊತೆಗೆ ಕೆಂಗೇರಿಯ ಕೆರೆಯನ್ನು ಕಟ್ಟಿದರು. ನಂತರ ಮಹಾಸ್ವಾಮಿಗಳ ಉಪನಯನದ ದಿವಸ ಶ್ರಿ ದತ್ತ ಪಾದುಕೆ ಹಾಗೂ ಶ್ರೀ ಸ್ವಯಂ ಪ್ರಕಾಶ ಗುರುಗಳ ಮಂದಿರ ಹಾಗೂ ಶ್ರೀಕ್ಷೇತ್ರ ಕೆಂಗೇರಿ ಮಠವನ್ನು ಸ್ಥಾಪಿಸಿದರು. ಪ.ಪೂ. ಮಾರ್ತಂಡ ದೀಕ್ಷಿತರು ನಂತರ ಅನೇಕ ಧಾಮರ್ಿಕ ಗ್ರಂಥಗಳನ್ನು ರಚಿಸಿದರು. ಮುಂದೆ ಗಂಗೆ ಗೌರಿ ಅವತಾರವಾದಂತಹ ಸಾವಿತ್ರಿ ಮತ್ತು ಸರಸ್ವತಿ ಅವರೊಂದಿಗೆ ಮಹಾಸ್ವಾಮಿಗಳು ವಿವಾಹ ಮಹೋತ್ಸವವಾಗಿ ಗ್ರಹಸ್ಥಾಶ್ರಮವು ಸಂತೋಷಮಯವಾಗಿ ಸಾಗಿಸಿದರು. ಮುಂದೆ ಸರಸ್ವತಿ ಮಾತೆಯ ಉದರದಲ್ಲಿ ಜೇಷ್ಠ ಪುತ್ರ ದಿವಾಕರ ದಿಕ್ಷೀತರು, ಶಂಕರ, ಮೃತ್ಯುಂಜಯ, ಬಾಪು ದಿಕ್ಷೀತರು ಜನಿಸಿದರು. ಸಾವಿತ್ರಿ ಮಾತೆಯ ಉದರದಿಂದ ಭಾಸ್ಕರ ಹಾಗೂ ಕಾಶಿನಾಥ ದಿಕ್ಷೀತರು ಜನಿಸಿದರು. ಚತುವರ್ೇದ ವೈದಿಕ ಸಂಪ್ರದಾಯ ಸಂಸ್ಕಾರವನ್ನು ಒಂದೊಂದು ವೇದದ ಸಂಸ್ಕಾರವನ್ನು ಒಬ್ಬೊಬ್ಬ ಪುತ್ರರಿಗೆ ನೀಡಿದರು. ಜೇಷ್ಠ ಪುತ್ರ ದಿವಾಕರ ದಿಕ್ಷೀತರಿಗೆ ಶುಕ್ಲ ಯಜುವರ್ೇದ, ದ್ವಿತೀಯ ಪುತ್ರ ಶಂಕರ ದಿಕ್ಷೀತರಿಗೆ ಋಗ್ವೇದ ಸಂಸ್ಕಾರ ತೃತೀಯ ಪುತ್ರ ಮೃತ್ಯುಂಜಯ ದಿಕ್ಷೀತರಿಗೆ ಸಾಮವೇದ ಸಂಸ್ಕಾರ, ಚತುರ್ಥ ಪುತ್ರ ಬಾಪು ದಿಕ್ಷೀತರಿಗೆ ಅಥರ್ವಣವೇದ ಸಂಸ್ಕಾರ, ಭಾಸ್ಕರ ಮತ್ತು ಕಾಶಿನಾಥ ದಿಕ್ಷೀತರಿಗೆ ಕೃಷ್ಣ ಯಜುವರ್ೇದದ ಸಂಸ್ಕಾರ ನೀಡಿದರು. ಅಂದರೆ ವೈದಿಕ ಸಂಪ್ರದಾಯದಲ್ಲಿ ಯಾರೂ ಭೇದವನ್ನು ಮಾಡಬಾರದೆಂದು ಶ್ರೀ ಚಿದಂಬರ ಮಹಾಸ್ವಾಮಿಗಳು ತೋರಿಸಿಕೊಟ್ಟರು. ಅಂದರೆ ಶಿವ ಮತ್ತು ಶಕ್ತಿ ಬ್ರಹ್ಮಾಂಡದ ಅಧಿಪತಿಗಳು. ಶಕ್ತಿಯೇ ಗಾಯತ್ರಿ. ಶಿವನು ಪಂಚಮುಖಿ ಇದ್ದು ಗಾಯತ್ರಿಯೂ ಸಹ ಪಂಚಮುಖಿ ಇರುವಳು. ಆ ಪಂಚಮುಖಿ ಶಿವನಿಂದಲೇ ಪ್ರಾಣ, ಆಪಾನ, ವ್ಯಾನ, ಉದಾನ, ಸಮಾನ ಈ ರೀತಿ ಐದು ಪಂಚ ಪ್ರಾಣಗಳು ಶಿವನಿಂದ ಹೊರಹೊಮ್ಮಿದವು. ಇವೆಲ್ಲವೂ ಎಂಭತ್ನಾಲ್ಕು ಲಕ್ಷ ಜೀವಿಗಳಲ್ಲಿ ಆವರಿಸಿವೆ. ಪಂಚಮುಖಿ ಶಿವ ಗಾಯತ್ರಿ ಜಗತ್ತಿಗೆ ಜನ್ಮ ಕೊಟ್ಟವಳು. ಹಾಗೂ ವೇದಗಳಿಗೂ ಸಹ ಜನ್ಮಕೊಟ್ಟವಳು ಆದ್ದರಿಂದಲೇ ಅವಳಿಗೆ ವೇದಮಾತೆ ಗಾಯತ್ರಿ ಎಂದು ಹೆಸರು. ವೇದಗಳು ಗಾಯತ್ರಿ ಮುಖದಿಂದ ಹೊರಹೊಮ್ಮಿದಾಗ ಅವುಗಳನ್ನು ವೇದವ್ಯಾಸರು ಸಂಗ್ರಹ ಮಾಡಿ ಮತ್ತು ಅವುಗಳನ್ನು ವಿಂಗಡಣೆ ಮಾಡಿ ಜ್ಞಾನಕಾಂಡಕ್ಕೆ ಸಂಬಂಧಿಸಿದ ಮಂತ್ರಗಳಿಗೆ ಋಗ್ವೇದ ಎಂದರು. ಕರ್ಮಕಾಂಡಕ್ಕೆ ಸಂಬಂಧಿಸಿದ ಮಂತ್ರಗಳಿಗೆ ಶುಕ್ಲ ಹಾಗೂ ಕೃಷ್ಣ ಯಜುವರ್ೇದ ಎಂದರು. ಉಪಾಸನಾ ಕಾಂಡಕ್ಕೆ ಸಂಬಂಧಿಸಿದ ಮಂತ್ರಗಳಿಗೆ ಸಾಮವೇದ ಎಂದು ಹೆಸರಿಸಿದರು. ಯಂತ್ರ, ತಂತ್ರ, ಮಂತ್ರ ವಿಜ್ಞಾನಕ್ಕೆ ಸಂಬಂಧಿಸಿದ ಮಂತ್ರಗಳಿಗೆ ಅಥರ್ವಣ ಎಂದು ಹೆಸರಿಸಿದರು. ಈ ರೀತಿ ಮಾಡಿ ಪರಬ್ರಹ್ಮ ಪರಮೇಶ್ವರನ ಒಂದೊಂದು ಅಂಗದಿಂದ ಒಂದೊಂದು ಹಿಂದೂ ಸಮಾಜ ನಿಮರ್ಾಣವಾದವು. ಹಿಂದೂ ಧರ್ಮದ ಧರ್ಮಕಾರ್ಯಗಳನ್ನು ನಿರ್ವಹಿಸಲು ಒಂದೊಂದು ಸಮಾಜ ಒಂದೊಂದು ಜವಾಬ್ದಾರಿ ಪಡೆದುಕೊಂಡರು. ಅದಕ್ಕೆ ಹಿಂದೂ ಧರ್ಮವು ಯಾವುದೇ ಒಬ್ಬ ವ್ಯಕ್ತಿಯಿಂದ ನಿಮರ್ಾಣವಾದುದಲ್ಲ. ಪರಬ್ರಹ್ಮ ಪರಮೇಶ್ವರನಿಂದಲೇ ನಿಮರ್ಾಣವಾದುದು. ಅದಕ್ಕೆ ಇದಕ್ಕೆ ಸನಾತನ ಧರ್ಮವೆಂದು ಹೆಸರು. ಆದುದರಿಂದ ಇದಕ್ಕೆ ಚ್ಯುತಿಯಿಲ್ಲ. ಧರ್ಮಕ್ಕೆ ಚ್ಯುತಿ ಬಂದಾಗ ಪ್ರತಿಯೊಂದು ಯುಗದಲ್ಲಿಯೂ ಕೂಡ ಬೇರೆ ಬೇರೆ ನಾಮದಿಂದ ಬೇರೆ ಬೇರೆ ರೂಪದಿಂದ ಅವತಾರಿಸಿ ಧರ್ಮ ಸಂಸ್ಥಾಪನೆ ಮಾಡುವುದು ಭಗವಂತನ ಆದ್ಯ ಕರ್ತವ್ಯವಾಗಿದೆ. ಭಗವಂತನ ಮಸ್ತಕದಿಂದ ಸಪ್ತಷರ್ಿಗಳು ಜನ್ಮಿಸಿದರು. ಹೀಗಿದ್ದಾಗ ಎಲ್ಲ ಬ್ರಾಹ್ಮಣ ಸಮಾಜ ಭೇದಭಾವ ಮಾಡಬಾರದೆಂದು ಶ್ರೀ ಚಿದಂಬರ ಮಹಾಸ್ವಾಮಿಗಳು ತೋರಿಸಿಕೊಟ್ಟಿದ್ದಾರೆ. ಅವರಿಗೆ ಈ ವೇದಗಳನ್ನು ನೀಡಿ ಅವರಿಗೆ ಒಂದೊಂದು ಸಂಸ್ಕಾರ ನೀಡಿ ಅಧ್ಯಯನ ಮಾಡುವದಕ್ಕೆ ಒಂದೊಂದು ಶಾಖೆ ಎಂದು ಹೆಸರಿಸಿದರು. ಇದೇ ರೀತಿ ಪರಬ್ರಹ್ಮ ಪರಮೇಶ್ವರನ ಒಂದೊಂದು ಅಂಗದಿಂದ ಒಂದೊಂದು ಹಿಂದೂ ಸಮಾಜ ನಿರ್ವಹಿಸಲು ಒಂದೊಂದು ಸಮಾಜಕ್ಕೆ ಒಂದೊಂದು ಜವಾಬ್ದಾರಿ ಪಡೆದುಕೊಂಡಿದ್ದಾರೆ. ವ್ಯಕ್ತಿಯಿಂದ ಕುಟುಂಬ, ಕುಟುಂಬದಿಂದ ಸಮಾಜ, ಸಮಾಜದಿಂದ ಗ್ರಾಮ,ಪಟ್ಟಣ, ರಾಜ್ಯ, ದೇಶ, ದೇಶದಿಂದ ವಿಶ್ವ ಈ ರೀತಿ ವ್ಯವಸ್ಥೆ ನಿಮರ್ಾಣವಾಗಿದೆ. ಅದಕ್ಕೆ ನಮ್ಮ ಹಿಂದೂ ಧರ್ಮದಲ್ಲಿ ಸರ್ವ ಸಮಾಜದ ಒಟ್ಟಾರೆ ಉದ್ದೇಶವೇನೆಂದರೆ ಜ್ಞಾನ, ಕರ್ಮ, ಉಪಾಸನೆ, ವೈರಾಗ್ಯ ಮತ್ತ್ತು ತ್ಯಾಗ ಹಾಗೂ ಅಭಿವೃದ್ಧಿ ಇವು ನಮ್ಮ ಹಿಂದೂ ಧರ್ಮದ ಸಿದ್ಧಾಂತವಾಗಿದೆ. ಇವುಗಳನ್ನು ತಿಳಿದುಕೊಂಡು ನಡೆಯುವುದೇ ನಮ್ಮ ಕರ್ತವ್ಯವಾಗಿದೆ ಮತ್ತು ನಾನು ಯಾರು ಮತ್ತು ನನ್ನ ಕರ್ತವ್ಯಗಳೇನು ಅದನ್ನು ತಿಳಿಯುವದೇ ಜ್ಞಾನ. ಈ ರೀತಿ ಮುಕ್ತಿ ಮೋಕ್ಷ ಪಡೆಯುವದೇ ಮನುಷ್ಯ ಜನ್ಮದ ಸಾರ್ಥಕತೆವಾಗಿದೆ. ಯಾವುದೇ ಸರ್ವಧರ್ಮದ ವ್ಯವಸ್ಥೆ ಮನುಷ್ಯನ ಉನ್ನತಿಗಾಗಿ ಇರುತ್ತದೆ. ಯಾವ ವ್ಯಕ್ತಿ ಯಾವ ಧರ್ಮದಲ್ಲಿ ಹುಟ್ಟಿರುವನೋ ಅವನು ಆ ಧರ್ಮದ ರೀತಿ ನಿಯಮಗಳನ್ನು ಆಚರಣೆ ಮಾಡುವುದೇ ಧರ್ಮ. ಯಾವುದೇ ಕಾರಣಕ್ಕೂ ಅಲ್ಲಿ ಭೇದಭಾವ ಸಲ್ಲದು. ಅದೇ ಚಿದಂಬರ ಸಂಸ್ಥಾನದ ಮೂಲ ಉದ್ದೇಶವೂ ಹೌದು. ಈ ರೀತಿ ಶ್ರೀ ಚಿದಂಬರ ಮಹಾಸ್ವಾಮಿಗಳಿಂದ ಶ್ರೀಕ್ಷೇತ್ರದಲ್ಲಿ ಶ್ರೀ ಚಿದಂಬರ ಪೀಠ ಆರಂಭವಾಯಿತು. ಆನುವಂಶಿಕದಿಂದ ಬಂದಂತಹ ಐತಿಹಾಸಿಕ ಪರಂಪರೆಯನ್ನು ಮುಂದುವರೆಸಲು ಶ್ರೀ ಚಿದಂಬರ ಮಹಾಸ್ವಾಮಿಗಳವರು ಚಿದಂಬರ ಪೀಠ ಆರಂಭಿಸಿದರು. ಗುರುಶಿಷ್ಯ ಪರಂಪರೆಯನ್ನು ಮುಂದುವರೆಸಲು ಚಿದಂಬರ ಗುರುಪೀಠವನ್ನು ಆರಂಭಿಸಿದರು. ಚಿದಂಬರ ಸಂಪ್ರದಾಯ ತತ್ವ ಸಿದ್ಧಾಂತಗಳನ್ನು ಮುನ್ನಡೆಸಲು ಶ್ರೀ ಚಿದಂಬರೇಶ್ವರ ಸಂಸ್ಥಾನವನ್ನು ಸ್ಥಾಪಿಸಿದರು.

ಚಿದಂಬರ ಪೀಠದ ಮುಖ್ಯ ಉದ್ದೇಶಗಳು - ಚಿದಂಬರ ಪೀಠದ ಪೀಠಾಧಿಪತಿಗಳು ಶ್ರೀ ಚಿದಂಬರ ಮಹಾಸ್ವಾಮಿಗಳೇ ಆಗಿದ್ದರು. ಸನಾತನ ಹಿಂದೂ ವೈದಿಕ ಧರ್ಮದ ಹಾಗೂ ಧಾಮರ್ಿಕತೆಯನ್ನು ಆಚರಿಸುವುದು ಹಾಗೂ ಅದನ್ನು ಮುಂದುವರೆಸಿಕೊಂಡು ಹೋಗುವುದು. ಹಿಂದೂ ಧರ್ಮದ ಆಧಾರ ಸ್ತಂಭಗಳಾದಂತಹ ಋಗ್ವೇದ, ಯಜುವರ್ೇದ, ಸಾಮವೇದ, ಅಥರ್ವಣ ವೇದಗಳನ್ನು, ಅವುಗಳ ತತ್ವವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು. ಅವುಗಳ ತತ್ವಾರ್ಥವಾದಂತಹ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಆಯಂ ಆತ್ಮಾ ಬ್ರಹ್ಮ, ಇವುಗಳ ಜೊತೆಗೆ ಧರ್ಮ ಅರ್ಥ ಕಾಮ ಮೋಕ್ಷ ಈ ಮೂಲಕ ಆತ್ಮೋದ್ಧಾರ ಹೊಂದುವದಕ್ಕೆ ಪ್ರೇರೇಪಿಸುವುದು.
ಚಿದಂಬರ ಗುರುಪೀಠದ ಉದ್ದೇಶಗಳು :- ಚಿದಂಬರ ಗುರುಪೀಠದ ಗುರುಮಹಾರಾಜರು ಶ್ರೀ ಚಿದಂಬರ ಮಹಾಸ್ವಾಮಿಗಳೇ ಆಗಿದ್ದರು. ಗುರುಶಿಷ್ಯ ಪರಂಪರೆಯ ಮಹತ್ವವನ್ನು ತಿಳಿಸುವದಕ್ಕೆ ದಾಸ ರಾಜಾರಾಮರಿಗೆ ಹಾಗೂ ಸಂತ ಭಕ್ತರು ಹಾಗೂ ಶಿಷ್ಯರಿಗೆ ನಿಜಾತ್ಮಬೋಧವನ್ನು ಬೋಧಿಸಿದರು ಆಗ ರಾಜಾರಾಮರು ತಮ್ಮ ದೇಹಭಾವವನ್ನು ಮರೆತು ಅವರು ಆಂತರಿಕ ಭಕ್ತಿಯಿಂದ ಈ ಕೆಳಗ ಹೇಳಿದ ಅಭಂವನ್ನು ರಚಿಸಿದು.

ದೇಹ ಹೇ ಕೆಂಗೇರಿ | ಆತ್ಮ ಚಿದಂಬರ ||
ನಿರ್ಮಳ ವಿಚಾರ ಸದೋದಿತ || ಪ ||
ಶಾಂತಿ ಹೇ ಸಾವಿತ್ರಿ | ಕ್ಷಮಾ ಸರಸ್ವತಿ |
ಸಾತ್ವಿಕ ಮೂರುತಿ ಚಿದಂಬರ || 1 ||
ವಿವೇಕ ವೈರಾಗ್ಯ ಪೂರ್ಣ ಶಾಂತಮನ |
ಚಿದಂಬರ ಧ್ಯಾನ ಸರ್ವಕಾಳ || 2 ||
ಸದಾ ಯೋಗಾಭ್ಯಾಸ ಸಂತ ಸಹವಾಸ |
ಚಿದಂಬರ ದಾಸ ಪೂರ್ಣಬ್ರಹ್ಮ || 3 ||

ಅಲ್ಲದೇ ಗುರೂಪದೇಶ, ಭಕ್ತಿ, ಜ್ಞಾನ, ವೈರಾಗ್ಯ ಹಾಗೂ ದೇಹದಂಡನೆ ಇದರ ಮೂಲಕ ಆತ್ಮೋದ್ಧಾರ ಹೊಂದುವುದು ಮತ್ತು ಆತ್ಮಜ್ಞಾನಕ್ಕಾಗಿ ಪ್ರೇರೇಪಿಸುವುದು. ಸಂತ ಭಕ್ತರಿಗೆ, ಶಿಷ್ಯರಿಗೆ ಏನೇ ಸಮಸ್ಯೆ ಬಂದರೂ ಗುರುಗಳಿಗೆ ನಿವೇದಿಸಿ ಪರಿಹರಿಸಿಕೊಳ್ಳುವುದು.

ಶ್ರೀ ಚಿದಂಬರೇಶ್ವರ ಸಂಸ್ಥಾನದ ಉದ್ದೇಶಗಳು :- ಈ ಸಂಸ್ಥಾನದ ಅಧಿಪತಿಗಳು ಶ್ರೀ ಚಿದಂಬರ ಮಹಾಸ್ವಾಮಿಗಳೇ ಆಗಿದ್ದರು. ಇದು ಚಿದಂಬರ ಸಂಪ್ರದಾಯಕ್ಕೆ ಸಂಬಂಧಿಸಿದ ಸಾಮ್ರಾಜ್ಯ. ಶಕೆ 1737ರಲ್ಲಿ ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಆರಂಭವಾಯಿತು. ಎಲ್ಲ ಸಂತ ಭಕ್ತರು, ರಾಜಮಹಾರಾಜರು ಎಲ್ಲರೂ ಸೇರಿ ಚಿದಂಬರೇಶ್ವರರ ಜಯ ಜಯಕಾರ ಮಾಡುತ್ತ "ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಶ್ರೀಕ್ಷೇತ್ರ ಕೆಂಗೇರಿ ನಿವಾಸಿ ಭಕ್ತಾಭಿಮಾನಿ ರಾಜಾಧಿರಾಜ ಶ್ರೀ ಶಿವಚಿದಂಬರೇಶ್ವರ ಸದ್ಗುರು ಮಹಾರಾಜ ಕೀ ಜೈ" ಎಂದು ಜಯಘೋಷ ಮಾಡಿದರು. ಸಂತ ವಿಠಾಬಾಯಿ ಹೇಳುವ ಹಾಗೆ ಶ್ರೀ ಚಿದಂಬರೇಶ್ವರ ಸಂಸ್ಥಾನದ ಸಿಂಹಾಸನವು ಶೂನ್ಯ ಸಿಂಹಾಸನವಿದೆ. ಶ್ರೀ ಚಿದಂಬರ ಮಹಾಸ್ವಾಮಿಗಳು ಸ್ವತಃ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಿದ್ದರೂ ಸಹ ವೈರಾಗ್ಯಪೂರ್ಣತೆಯಿಂದ ತಮ್ಮ ಜೀವನವನ್ನು ಸಾಗಿಸಿ, ವೈದಿಕ ಧಮರ್ಾಚರಣೆಯಿಂದ ಜಗತ್ತಿಗೇ ಹಿಂದೂ ಸನಾತನ ವೈದಿಕ ಧರ್ಮದ ಮಹತ್ವವನ್ನು ತೋರಿಸಿದರು. ಚಿದಂಬರ ಸಂಸ್ಥಾನದ ಶ್ರೀ ಚಿದಂಬರ ಸಂಪ್ರದಾಯದ ತತ್ವ ಸಿದ್ಧಾಂತಗಳು ಮುಖ್ಯವಾಗಿ ಪರಂಪರಾಗತದಿಂದ ಬಂದಂತಹ ಧಮರ್ಾಚರಣೆ, ಅತಿಥಿ ಸೇವೆ, ಅನ್ನದಾನ, ವಿದ್ಯಾದಾನ, ಗೋರಕ್ಷಣೆ, ಅಭಿವೃದ್ಧಿ, ತ್ಯಾಗ. ಜ್ಞಾನ, ಭಕ್ತಿ, ಕರ್ಮ ಇವುಗಳ ತತ್ವ ಸಿದ್ಧಾಂತಗಳ ಮೂಲಕವಾಗಿ ಮುಂದುವರೆಸಿಕೊಂಡು ಹೋಗುವುದು ಹಾಗೂ ಪರೋಪಕಾರಕ್ಕೆ ದಾನ ಮಾಡುವುದು ಹಾಗೂ ಸಜ್ಜನರಿಂದ ದಾನ ಪಡೆಯುವುದು. ಅದನ್ನು ಸಂಸ್ಥಾನದ ವಿವಿಧ ಕಾರ್ಯಗಳಿಗೆ ವಿನಿಯೋಗಿಸುವುದು. ಶಕೆ 1737 ರಲ್ಲಿ ಶ್ರೀ ಚಿದಂಬರ ಮಹಾಸ್ವಾಮಿಗಳು ಲಿಂಗಾವತಾರ ತಾಳಿ ನಂತರ ಶಕೆ 1739 ರಲ್ಲಿ ಪ್ರಥಮ ದೇವಸ್ಥಾನ ಸ್ಥಾಪನೆಯಾದ ನಂತರ ಜೇಷ್ಠ ಪುತ್ರ ದಿವಾಕರ ದಿಕ್ಷೀತರು ಶ್ರೀ ಚಿದಂಬರ ಮಹಾಸ್ವಾಮಿಗಳಲ್ಲಿರತಕ್ಕಂತಹ ಅನೇಕ ವಿಚಾರಗಳನ್ನು ಒಟ್ಟಗೂಡಿಸಿ ಸಂಸ್ಥಾನದ ವಿವಿಧ ವಿಭಾಗಗಳನ್ನಾಗಿ ಮಾಡಿದರು ಹಾಗೂ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಸ್ಥಾನದ ಒಂದು ಪ್ರತ್ಯೇಕ ಸೈನ್ಯವನ್ನು ಕಟ್ಟಿಕೊಂಡು ಸಿಂದಗಿ ಹಾಗೂ ತಾಳಿಕೋಟಿ ಪ್ರಾಂತ್ಯದಲ್ಲಿ ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಅವರನ್ನು ಕಿತ್ತು ಓಡಿಸುವದರಲ್ಲಿ ಯಶಸ್ವಿಯಾದರು. ಈ ವಾತರ್ೆಯನ್ನು ಕೇಳಿ ಬ್ರಿಟೀಷ ಸರಕಾರವು ಇವರ ಬಂಧನ ವಾರಂಟ ನೀಡಿದರು. ಮುಂದೆ ದಿವಾಕರ ದಿಕ್ಷೀತರು ನ್ಯಾಯಾಲಯದಲ್ಲಿ ಹಾಜರಾದಾಗ ಇವರ ದೇಶಭಕ್ತಿ ಹಾಗೂ ನಿಷ್ಠೆ, ಕರ್ತವ್ಯ, ಸ್ವಾತಂತ್ರ್ಯವು ಪ್ರತಿಯೊಬ್ಬ ಭಾರತೀಯನ ಜನ್ಮಸಿದ್ಧ ಹಕ್ಕು ಎಂದು ಹೋರಾಟ ಮಾಡಿದುದನ್ನು ಕಂಡು ಇವರು ನಿರಪರಾಧಿ ಎಂದು ಘೋಷಿಸಿ ಬಿಡುಗಡೆಯಾಗಿ ಬಂದರು. ಇದು ಭಾರತದ ಇತಿಹಾಸದ ಪುಟಗಳಲ್ಲಿ ನೋಂದಾಯಿಸಲಾಗಿದೆ. ನಂತರ ಶ್ರೀ ದಿವಾಕರ ದಿಕ್ಷೀತರ ಜೇಷ್ಠ ಪುತ್ರರಾದ ಶ್ರೀಚಿದಂಬರ ದಿಕ್ಷೀತ ಉರ್ಫ ಅಣ್ಣಾ ದಿಕ್ಷೀತ ಇವರಿಗೆ ಬ್ರಿಟೀಷ ಸರಕಾರವು ಸುಮಾರು 200-300 ಜಮೀನನ್ನು ವೈಯಕ್ತಿಕ ಇನಾಮವನ್ನು ನೀಡಿ ಗೌರವಿಸಿದರು. ನಂತರವಷ್ಟೇ ನಮ್ಮ ಮನೆತನಕ್ಕೆ ಇನಾಮದಾರ ಎಂದು ಉಪನಾಮವು ಬಂದಿತು. ನಂತರ ಇಸ್ವಿ ಸನ್ 2003 ರಲ್ಲಿ ಈ ಸಂಸ್ಥಾನವನ್ನು ಪುನರ್ ಸ್ಥಾಪಿಸಿ ಕೆಲವೊಂದು ಹೆಚ್ಚಿನ ವಿಭಾಗಗಳನ್ನು ಮಾಡಿ, ಹೆಚ್ಚಿನ ನಿಯಮಾವಳಿಗಳನ್ನು ಮಾಡಿ ಶ್ರೀಶಿವ ಚಿದಂಬರೇಶ್ವರ ಮೂಲಪೀಠ ಮೂಲ ಮಹಾಕ್ಷೇತ್ರ ಸಂಸ್ಕಾನ ಎಂದು ಪುನರ್ ಸ್ಥಾಪಿಸಲಾಯಿತು. ಶ್ರೀ ಚಿದಂಬರ ಮೂಲ ಕ್ಷೇತ್ರದ ಹಾಗೂ ಚಿದಂಬರ ಸಂಪ್ರದಾಯದ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಯುಳ್ಳ ಪರಿಚಯ ಪತ್ರಿಕೆಯನ್ನು ಮಾಡುತ್ತಲಿದ್ದೇವೆ ಕಾರಣ ಸದ್ಭಕ್ತರು ಅದರ ಬಗ್ಗೆ ನಂತರ ಅವಲೋಕನ ಮಾಡಬಹುದು. ಅಲ್ಲದೇ ಶ್ರೀಕ್ಷೇತ್ರ ಕೆಂಗೇರಿ ಮುರಗೋಡದಿಂದ ಶಾಲಿವಾಹನ ಶಕೆ ಸುಮಾರು 1719-20 ರಿಂದ ಹನ್ನೆರಡು ವರ್ಷ ವಿವಿಧ ಸ್ಥಳಗಳಲ್ಲಿ, ಗ್ರಾಮ, ಊರುಗಳಿಗೆ ಸದ್ಭಾವನಾ ಯಾತ್ರೆ ಕೈಗೊಂಡು ಭಕ್ತರ ಉದ್ದಾರಕ್ಕಾಗಿ ಏಕತಾ ಮನೋಭಾವ ಮತ್ತು ಸರ್ವ ಧರ್ಮ ಸಹಿಷ್ಣುತೆ ಜೊತೆಗೆ ವಿಶ್ವ ಮಾನವ ಭಾವಕ್ಯತೆ ಬರುವ ಉದ್ದೇಶದಿಂದ ಜೊತೆಗೆ ಅನೇಕ ಲೀಲೆಗಳನ್ನು ತೋರಿ ಭಕ್ತರ ಮನೋಕಾಮನೆಗಳನ್ನು ಈಡೇರಿಸಿದರು. ಸದ್ಭಾವನೆಯ ಯಾತ್ರೆಯ ಕೊನೆಯ 3-4 ವರ್ಷ ಗುರ್ಲಹೊಸೂರಿನಲ್ಲಿ ವಾಸ್ತವ್ಯ ಮಾಡಿ ಶಾಲಿವಾಹನ ಶಕೆ 1732 ರಲ್ಲಿ ಗುರ್ಲಹೊಸೂರ ತ್ಯಾಗ ಮಾಡಿ ಪುನಃ ಶ್ರೀಕ್ಷೇತ್ರ ಕೆಂಗೇರಿ ಮುರಗೋಡಕ್ಕೆ ಬಂದರು. ನಂತರ ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಶಿವ ಪಂಚಾಯತನ ಮಾರ್ತಂಡೇಶ್ವರ ದೇವಸ್ಥಾನ ಸ್ಥಾಪಿಸಿ ಗಾಯತ್ರಿ ಪುರಶ್ವರಣ, ಗಾಯತ್ರಿ ಮಹಾಯಾಗ ಜೊತೆಗೆ ಚಿದಂಬರ ಗುರುಪೀಠವನ್ನು ಸ್ಥಾಪಿಸಿದರು.

ಅನೇಕ ಸಂತ ಭಕ್ತರಿಗೆ ಜೀವಾತ್ಮ, ಪರಮಾತ್ಮನ ಬಗ್ಗೆ ಇರುವ ಸಂಬಂಧ, ಆತ್ಮಜ್ಞಾನ ನೀಡಲು ಶ್ರೀ ಚಿದಂಬರ ಮಹಾಸ್ವಾಮಿಗಳು ಸಂತ ಶ್ರೇಷ್ಠ ರಾಜಾರಾಮರಿಗೆ ನಿಜಾತ್ಮಬೋಧವನ್ನು ಬೋಧಿಸಿದರು. ಆಧ್ಯಾತ್ಮಿಕವಾಗಿ ಅನೇಕ ರೀತಿಯ ಗುರುಬೋಧನೆಯನ್ನು ಮಾಡಿದರು. ದೇವನೊಬ್ಬ ನಾಮ ಹಲವು ಎಂದು ಅನೇಕ ಸಂತ ಭಕ್ತರಿಗೆ ಶ್ರೀ ಚಿದಂಬರ ಮಹಾಸ್ವಾಮಿಗಳು ಶಿವ, ವಿಷ್ಣು, ಬ್ರಹ್ಮ, ವೆಂಕಟೇಶ, ಆದಿಶಕ್ತಿ, ದತ್ತ, ವಿಠ್ಠಲ, ರಾಮ, ಕೃಷ್ಣ, ಮುಂತಾದ ರೂಪಗಳಿಂದ ದರ್ಶನ ನೀಡಿ ಎಲ್ಲವೂ ನಾನೇ ಇರುತ್ತೇನೆ. ಹರಿಹರರಲ್ಲಿ ಭೇದವಿಲ್ಲ ಎಂದು ಸಾರಿದರು. ಆದ್ದರಿಂದ ಸಂತ ರಾಜಾರಾಮರು ಶ್ರೀ ಚಿದಂಬರ ಮಹಾಸ್ವಾಮಿಗಳಿಗೆ ಪೂರ್ಣ ಬ್ರಹ್ಮ ಸವರ್ೇಶ್ವರಾವತಾರ ಎಂದು ತಮ್ಮ ಅಭಂಗಗಳಲ್ಲಿ ವಣರ್ಿಸಿದ್ದಾರೆ. ಈ ರೀತಿಯಾಗಿ ಶ್ರೀ ಚಿದಂಬರ ಮಹಾತ್ಮೆಗೆ ಸಂಬಂಧಿಸಿದ ಕೆಲವು ಸಂತ ಭಕ್ತರು ಸಾಹಿತ್ಯರೂಪದಲ್ಲಿ, ಅಭಂಗರೂಪದಲ್ಲಿ, ಗದ್ಯರೂಪದಲ್ಲಿ, ಸ್ತೋತ್ರರೂಪದಲ್ಲಿ, ಪದ್ಯರೂಪದಲ್ಲಿ ಗ್ರಂಥರೂಪದಲ್ಲಿ ರಚಿಸಿದ್ದಾರೆ. ಸಂತ ವಿಠಾಬಾಯಿ ರಾಜಾರಾಮರು ಅಭಂಗ ರೂಪಲ್ಲಿ ಚಿದಂಬರ ಮಹಿಮೆ ಸಾಹಿತ್ಯವನ್ನು ರಚಿಸಿದ್ದಾರೆ. ಸಖಾರಾಮ ಗದರ್ೆಯವರು ಶ್ರೀಮಚ್ಚರಿತ್ರೆವೆಂಬ ಗ್ರಂಥವನ್ನು ರಚಿಸಿದ್ದಾರೆ. ರಾಮಚಂದ್ರ ಭೋಜೋ ದೇಶಪಾಂಡೆಯವರು ಚಿದಂಬರ ಮಹಾತ್ಮ ಎಂಬ ಗ್ರಂಥವನ್ನು ಸಂಸೃತದಲ್ಲಿ ರಚಿಸಿದ್ದಾರೆ. ಪಂ. ಶಿವಶಾಸ್ತ್ರಿಯವರು ಭಕ್ತಾನಂದವೆಂಬ ಸೋತ್ರವನ್ನು ರಚಿಸಿದ್ದಾರೆ. ಸಾಂಬ ದಿಕ್ಷೀತರು ಚಿದಂಬರ ಮಹಾಗುರು ಚರಿತ್ರೆ ಎಂಬ ಗ್ರಂಥವನ್ನು ರಚಿಸಿದ್ದಾರೆ. ಈ ಗುರುಬೋಧನೆಯ ಸಂದರ್ಭದಲ್ಲಿ ಕೆಲವು ಸಂತ ಭಕ್ತರಾದ ಸಂತ ವಿಠಾಬಾಯಿ, ಭಕ್ತ ಕಹಾರ ಮುಂತಾದವರು ಮಹಾಸ್ವಾಮಿಗಳಿಗೆ "ತಾವು ಸಾಕ್ಷಾತ್ ಪೂರ್ಣ ಬ್ರಹ್ಮ ಪರಮೇಶ್ವರಾವತಾರರು ಇದ್ದು ತಮ್ಮ ಚಿದಂಬರ ನಾಮ ಇಡೀ ಬ್ರಹ್ಮಾಂಡ ತುಂಬ ಬೆಳಗಬೇಕು ಮತ್ತು ಪ್ರತಿ ಮನೆ ಮನೆಯಲ್ಲೂ ಚಿದಂಬರ ನಾಮಸ್ಮರಣೆಯಾಗಬೇಕು ಮತ್ತು ಒಂಭತ್ತು ಲಕ್ಷ ಭಕ್ತರು ನಿಮ್ಮ ದರ್ಶನಕ್ಕೆ ಬರಬೇಕು ಆ ದೃಶ್ಯವನ್ನು ನಾವು ನೋಡಬೇಕು. ಈ ನಮ್ಮ ಮನೋಕಾಮನೆಯನ್ನು ತಾವು ಪೂರ್ಣ ಮಾಡಬೇಕು" ಎಂದು ಮಹಾಸ್ವಾಮಿಗಳಿಗೆ ಭಕ್ತಿಯಿಂದ ನಿವೇದಿಸಿದರು. ಆಗ ಚಿದಂಬರ ಮಹಾಸ್ವಾಮಿಗಳು "ಈಗ ಕಲಿ ಪ್ರಭಾವ ಬಹಳೇ ಇದ್ದುದರಿಂದ ಕೇವಲ ನಿಜ ಭಕ್ತಿ ಯಾರಲ್ಲಿದೆ ಅವರಿಗೆ (ನಿಜ ಭಕ್ತರಿಗೆ) ಮಾತ್ರ ನಮ್ಮ ಹಾಗೂ ಕ್ಷೇತ್ರದ ದರ್ಶನ, ಆಶೀವರ್ಾದ ಪ್ರಸಾದ ಸಿಗುತ್ತದೆ. ಈಗ ನಾನು ಶ್ರೀಕ್ಷೇತ್ರ ಕೆಂಗೇರಿಯಲ್ಲಿ ನಿಗರ್ುಣ ನಿರಾಕಾರ ಜ್ಯೋತಿ ರೂಪದಿಂದ ಇದ್ದು, 200 ವರ್ಷಗಳ ನಂತರ ಪುನಃ ನಾನು ಇಲ್ಲಿಯೇ ಸಗುಣಾವತಾರ ತೆಗೆದುಕೊಂಡು ಬಂದು ಪುನಃ ಮುಂದೆ 44 ವರ್ಷ ಸಗುಣರೂಪದಿಂದ ಭಕ್ತರ ಮನೋಕಾಮನೆಗಳನ್ನು ಪೂರೈಸುತ್ತೇನೆ. ಆಗ ಈ ನಿಮ್ಮ ಇಚ್ಛೆ ಪೂರ್ಣಗೊಳ್ಳುವುದು. ಅಲ್ಲಿಯವರೆಗೆ ನಾನು ಅಚಂದ್ರಾರ್ಕವಾಗಿ ಶ್ರೀ ಕ್ಷೇತ್ರ ಕೆಂಗೇರಿಯಲ್ಲಿ ನಿಗರ್ುಣ ನಿರಾಕಾರ ಜ್ಯೋತಿರೂಪದಿಂದ ಲಿಂಗರೂಪದಲ್ಲಿ ಇದ್ದು ಗುಪ್ತ ರೂಪದಿಂದ ಭಕ್ತರ ಉದ್ಧಾರವನ್ನು ಮಾಡುತ್ತಿರುತ್ತೇನೆ." ಎಂದು ಹೇಳಿದರು. ಆಗ ಸಂತ ವಿಠಾಬಾಯಿ ಅಲ್ಲಿಯೇ ಈ ಕೆಳಗಿನ ಅಭಂಗವನ್ನು ರಚಿಸಿ ಚಿದಂಬರ ಮಹಾಸ್ವಾಮಿಗಳಿಗೆ ಅಪರ್ಿಸಿದರು.

"ಕೆಂಗೇರಿ ನಿವಾಸ | ಚಿದಂಬರ ||
ಮಜ ವಿಸರಲಾಸಿ ಕೈಸಾ | ಹೋಸಿ ತ್ರೈಲೋಕ್ಯಾಚಾ ಧನಿ |
ತುಝೀ ಅಗಾಧ ಕರಣೀ || ಪ ||
ಮುರಗೋಡ ತೇ ಧನ್ಯ | ಕೆಂಗೇರಿ ತೇ ಧನ್ಯ ||
ನವಲಕ್ಷ ಪತಾಕಾ | ಭೂವರಿ ಮ್ಹಣೋನಿ ||
ಕೃಷ್ಣಾಚೆ ಗೋಪಿಕಾ | ಸ್ವಗರ್ಾಚಿ ಪತಾಕಾ ||
ಭಯಂಕರ ಗುಂಫಾ | ಕೆಂಗೇರಿ ತೇ ಜಾಣ || 1 ||
ವಾಟ ಪಹಾತೇ ಉಭೆ | ತೀನ್ಹೀ ದೇವ ತೇಥೇ ||
ಡೋಳ್ಯಾ ಲಾವೋನಿ ಪಹಾತೇ ಅಂತರಾಳೀ ||
ಚಿದಂಬರ ಭಕ್ತಾಂಚೆ ಆಗಮನ | ಹೋತಾ ಮ್ಹಣೋನಿ ||
ನಾದ ಬ್ರಹ್ಮ ಕರೀತೀ ತೇಥೇ ಸರ್ವ ||
ವಿಠಾಬಾಯಿ ಮ್ಹಣೆ ಕೆಂಗೇರಿ ಮುರಗೋಡ |
ತೀನ್ಹೀ ಲೋಕಾಪೇಕ್ಷೇ ಪವಿತ್ರ ತೋ ಜಾಣ ||

ಈ ರೀತಿಯಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳು ಸಂತ, ಭಕ್ತರಿಗೆ ಗುರುಬೋಧನೆಯನ್ನು ಮಾಡುತ್ತ ಎಲ್ಲರೂ ಧರ್ಮ ಮಾರ್ಗದಿಂದ ನಡೆಯಬೇಕು, ಭಕ್ತಿ ಮಾರ್ಗದಿಂದ ನಡೆಯಬೇಕು ಎಂದು ಆದೇಶಿಸುತ್ತ ಜೇಷ್ಠ ಪುತ್ರ ದಿವಾಕರ ದೀಕ್ಷಿತರನ್ನು ದೇವರ ಹಿಪ್ಪರಗಿಗೆ, ಪಂಢರಪುರಕ್ಕೆ ಕಳುಹಿಸಿ, ತಮ್ಮ ಇಬ್ಬರೂ ಧರ್ಮಪತ್ನಿಯರ ಹಾಗೂ ಐದು ಜನ ಪುತ್ರರನ್ನು ಕರೆದು ಅವರ ತಲೆಯ ಮೇಲೆ ತಮ್ಮ ವರದ ಹಸ್ತವನ್ನಿಟ್ಟು ಅವರಲ್ಲಿದ್ದ ದೈವತ್ವವನ್ನು ಮರಳಿ ಪಡೆದು ಶಕೆ 1737ರಲ್ಲಿ ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಔದುಂಬರ ಮತ್ತು ಶ್ರೀರಾಮ ಮಂದಿರದ ಮಧ್ಯದಲ್ಲಿ ತಾವು ಸ್ಥಾಪಿಸಿದ ಸ್ಥಾನದಲ್ಲಿ ತಮ್ಮ ಸಗುಣ ರೂಪವನ್ನು ನಿಗರ್ುಣ ನಿರಾಕಾರ ಜ್ಯೋತಿ ರೂಪದಿಂದ ಲಿಂಗ ರೂಪದಲ್ಲಿ ಲೀನ ಮಾಡಿದರು. ಆಲ್ಲಿ ಜೇಷ್ಠ ಪುತ್ರ ದಿವಾಕರ ದೀಕ್ಷಿತರಿಗೆ ತಮ್ಮ ತಂದೆ ಶ್ರೀ ಚಿದಂಬರ ಮಹಾಸ್ವಾಮಿಗಳು ಸಗುಣ ರೂಪ ತ್ಯಜಿಸಿ ನಿಗರ್ುಣ ರೂಪ ಧಾರಣೆ ಮಾಡಿದ ದೃಷ್ಟಾಂತವಾಯಿತು. ನನಗೆ ತಿಳಿಸದೇ ತಮ್ಮ ತಂದೆಯವರು ನಿಗರ್ುಣ ರೂಪ ಹೇಗೆ ಧಾರಣೆ ಮಾಡಿದರು ಎಂದು ಓಡಿ ಶ್ರೀಕ್ಷೇತ್ರ ಕೆಂಗೇರಿಗೆ ಬಂದು ರೋಧಿಸಹತ್ತಿದರು. ಆಗ ಶ್ರೀ ಚಿದಂಬರ ಮಹಾಸ್ವಾಮಿಗಳು ಮತ್ತೆ ತಾವು ಸಗುಣ ಅವತಾರ ತಾಳಿ ದಿವಾಕರ ದೀಕ್ಷಿತರಿಗೆ "ನನಗೆ ಸಾವು ಇಲ್ಲ. ಲೌಕಿಕಾರ್ಥವಾಗಿ ನಾನು ನಿಗರ್ುಣ ರೂಪ ತಾಳಬೇಕಾಗುತ್ತದೆ. ಆದ್ದರಿಂದ ಸುಬ್ಬಾಪೂರದಲ್ಲಿ ಶ್ರೀ ಸ್ವಯಂಪ್ರಕಾಶ ದಿಕ್ಷೀತರ ಹತ್ತಿರ ಲಿಂಗರೂಪದಲ್ಲಿದ್ದೇನೆ. ಆ ಲಿಂಗವನ್ನು ತಂದು ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಸ್ಥಾಪಿಸು, ನಾನು ಅಚಂದ್ರಾರ್ಕವಾಗಿ ಶ್ರೀಕ್ಷೇತ್ರ ಕೆಂಗೇರಿಯಲ್ಲೇ ನಿಗರ್ುಣ ನಿರಾಕಾರ ಲಿಂಗರೂಪದಿಂದ ಇದ್ದು, ಭಕ್ತರ ಮನದೀಪ್ಸೆಯನ್ನು ಪೂರೈಸುತ್ತಿರುತ್ತೇನೆ ಮತ್ತು ಕೆಂಗೇರಿಯೇ ನನ್ನ ಪ್ರೀತಿಯ ಸ್ಥಾನ." ಮತ್ತು ಮುಂದೆ ನನ್ನ ಸಂಪ್ರದಾಯವನ್ನು ಮುಂದುವರೆಸಬೇಕೆಂದು ಹೇಳಿದರು. ಆಮೇಲೆ ದಿವಾಕರ ದೀಕ್ಷಿತರು ಶಕೆ 1739 ವೈಶಾಖ ಶುದ್ಧ ಷಷ್ಠಿಯಂದು ಸುಬ್ರಹ್ಮಣ್ಯಪುರ (ಸುಬ್ಬಾಪೂರ)ದಲ್ಲಿ ಶ್ರೀ ಚಿದಂಬರ ಲಿಂಗವನ್ನು ತಂದು ಶ್ರಿಕ್ಷೇತ್ರ ಕೆಂಗೇರಿಯಲ್ಲಿ ಪ್ರತಿಷ್ಠ್ಥಾಪಿಸಿ, ಪ್ರಥಮ ದೇವಸ್ಥಾನವನ್ನು ಸ್ಥಾಪಿನೆ ಮಾಡಿ ಅವತ್ತೇ ಶ್ರೀ ಚಿದಂಬರ ಮಹಾಸ್ವಾಮಿಗಳಲ್ಲಿದ್ದ ಅನೇಕ ವಿಚಾರಗಗಳನ್ನು ಸಂಸ್ಥಾನದ ವಿವಿಧ ವಿಭಾಗಗಳನ್ನಾಗಿ ಮಾಡಿದರು. ಶ್ರೀ ಚಿದಂಬರ ಮಹಾಸ್ವಾಮಿಗಳ ಇಚ್ಛೆಯಿಂತೆ ಪ.ಪೂ. ಮಾತರ್ಾಂಡ ದೀಕ್ಷಿತರು ಹಾಕಿಕೊಟ್ಟಂತಹ ವೈದಿಕ ಸಂಪ್ರದಾಯದಂತೆ ತ್ರಿಕಾಲ ಪೂಜೆ, ಉತ್ಸವ ಮಹೋತ್ಸವಗಳು, ಹೋಮ ಹವನಗಳು, ನಡೆಯಬೇಕೆಂದು ವೈದಿಕ ಸಂಪ್ರದಾಯವನ್ನು ಜೇಷ್ಠ ಪುತ್ರ ದಿವಾಕರ ದೀಕ್ಷಿತರು ಪ್ರಾರಂಭಿಸಿದರು ಹಾಗೂ ಭೂಪಾಳಿ, ಕಾಕಡಾರತಿ, ಸಾಂಪ್ರದಾಯಿಕ ಭಜನೆ, ಶೇಜಾರತಿ, ಶಿಬಿಕೋತ್ಸವದ ದಿಶಾ ಅಭಂಗಳು ಸಂತ ರಾಜಾರಾಮರು ದಿಂಡಿ ಸಂಪ್ರದಾಯವನ್ನು ಹಾಕಿದರು. ಅದೇ ದಿವಸ ಸಂತ ರಾಜಾರಾಮರು ಶ್ರೀ ಚಿದಂಬರ ಸಹಸ್ರನಾಮಾವಳಿಯನ್ನು ಮಹಾಸ್ವಾಮಿಗಳಿಗೆ ಸಮರ್ಪಣೆ ಮಾಡಿದರು. ಜೇಷ್ಠ ಸುಪುತ್ರ ಶ್ರೀ ದಿವಾಕರ ದೀಕ್ಷಿತರು ಮತ್ತು ಸಂತ ರಾಜಾರಾಮರು ಉತ್ಸವ ಮಹೋತ್ಸವಗಳು ಶ್ರೀಕ್ಷೇತ್ರ ಕೆಂಗೆರಿಯಲ್ಲ್ಗಿ ಆಚರಿಸುವ ಬಗ್ಗೆ ಚಿಂತನೆಯಲ್ಲಿದ್ದಾಗ, ಶಕೆ 1739 ಕಾತರ್ಿಕ ವದ್ಯ ಷಷ್ಟಿಯಂದು ಶ್ರಿ ಚಿದಂಬರೇಶ್ವರ 59ನೇ ಅವತಾರ ಜಯಂತಿಯನ್ನು ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಆಚರಿಸುವ ಜೊತೆಗೆ ಜಯಂತಿ ಅಂಗವಾಗಿ ಪ.ಪೂ. ಮಾತರ್ಾಂಡ ದೀಕ್ಷಿತರು ರಚಿಸಿದ ಶೈವಾಗಮೋಕ್ತ ವಿಧಾನ, ಮಹಾರಥೋತ್ಸವವನ್ನು ಮಾರ್ಗಶೀರ್ಷ ಶುದ್ಧ ಪ್ರತಿಪದೆಯಿಂದ ಸಪ್ತಮಿಯವರೆಗೆ ಮತ್ತು ಚಂಪಾ ಷಷ್ಠಿಯಂದು, ಕುಲಸ್ವಾಮಿ ಮಾತರ್ಾಂಡೇಶ್ವರ ಜಯಂತಿವಿದ್ದುದರಿಂದ ಅದರ ಜೊತೆಗೆ ನಮ್ಮ ಜಯಂತಿ, ಶೈವಾಗಮೋಕ್ತ ಮಹೋತ್ಸವ, ಕಲ್ಯಾಣೋತ್ಸವ, ಮಹಾರಥೋತ್ಸವ, ಇಲ್ಲಿಯೇ ಆಚರಿಸಬೇಕು" ್ರ ಎಂಬ ಶ್ರೀ ಚಿದಂಬರ ಮಹಾಸ್ವಾಮಿಗಳ ದೃಷ್ಟಾಂತ ಆದೇಶದ ಅಣತಿಯಂತೆ ದಿವಾಕರ ದಿಕ್ಷೀತರು ಮತ್ತು ಸಂತ ರಾಜಾರಾಮರು ಇವೆರಡನ್ನೂ ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಆಚರಿಸಬೇಕು ಮತ್ತು ಎಲ್ಲ ಸಂತ ಭಕ್ತರೂ, ಎಲ್ಲ ವಾರಕರಿಗಳು, ತಮ್ಮ ತಮ್ಮ ಸ್ಥಳಗಳಲ್ಲಿ ಶ್ರೀ ಚಿದಂಬರ ಜಯಂತಿಯನ್ನು ಆಚರಿಸಿ, ಶೈವಾಗಮೋಕ್ತ, ಕಲ್ಯಾಣೋತ್ಸವ, ಮಹಾರಥೋತ್ಸವದ ಒಂದು ದಿನದ ಮೊದಲು ಸಾಯಂಕಾಲ ಶ್ರೀಕ್ಷೇತ್ರ ಕೆಂಗೇರಿಗೆ ಬಂದು ಈ ಮಹೋತ್ಸವಗಳಲ್ಲಿ ಭಾಗಿಯಾಗಬೇಕೆಂಬ ಸಂಪ್ರದಾಯವನ್ನು ಹಾಕಿದರು. ಮತ್ತು ದಿಂಡಿ ವಿಭಾಗದಿಂದ ಉತ್ಸವ, ಆಮಂತ್ರಣ ಅಭಂಗವನ್ನು ಸಮಪರ್ಿಸಿದರು.

"ಶ್ರೀ ಕ್ಷೇತ್ರ ಕೆಂಗೇರಿ ಯೇಥೆ ಉತ್ಸವ ಯಾತ್ರೇಸಿ | ವಾರಕರಿ ಪ್ರತಿ ವಷರ್ಿ |
ಐಸಾ ಸಾಂಗಾವೇ ಸವರ್ಾಸಿ | ಮಾಝೀ ವಿನಂತಿ ಪಾಯಿಶಿ |
ಲೋಕಜಾತಿ ಪಂಢರಿಸಿ | ಯೇಥೆ ಪಂಢರಿ ಪ್ರಯಾಗ ಕಾಶಿ |
ಐಸೆ ಮ್ಹಣಾಲ ಕಶಾವರೂನ | ಯೇಥೇ ಅವತಾರ ಸಗುಣ |
ಗಂಗಾ ಯಮುನಾ ಜ್ಯಾಚಿ ಚರಣಿ | ತೋಚಿ ಚಿದಂಬರ ಧಣಿ |
ಚಿದಂಬರ ಚರಣಿ ಲಕ್ಷ ಸದಾ | ಚುಕವಿತೊ ಭವಬಾಧಾ |
ಚಿದಂಬರ ಜಯಂತಿ ಉತ್ಸವಾಸಿ | ಕಾತರ್ಿಕ ವದ್ಯ ಷಷ್ಠಿಸಿ |
ಗೋಪಾಳಕಾಲಾ ಉತ್ಸವ ಜಾಣ | ಕಾತರ್ಿಕ ವದ್ಯ ದಶಮಿ ಜಾಣ |
ಕಲ್ಯಾಣೋತ್ಸವ ಸಗುಣಮೂತರ್ಿ ಜವಳ | ಮಾರ್ಗಶೀರ್ಷ ಶುದ್ಧ ಚಂಪಾ ಷಷ್ಠಿ |
ಚಿದಂಬರ ದಾಸ ಮ್ಹಣೆ ಆದಿ | ಪಂಚಮಿ ಜಿ ಯೇಣೆ ಉತ್ಸವಾಸಿ"
ಈ ಪ್ರಕಾರ ಸಂತಶ್ರೇಷ್ಠ ರಾಜಾರಾಮರು ಸಕಲ ಸಂತ ಭಕ್ತಜನರಿಗೆ ಈ ಮೂಲಕ ಸಂದೇಶ ನೀಡಿದರು.

ಶ್ರೀ ಚಿದಂಬರ ಮಹಾಸ್ವಾಮಿಗಳು ಲಿಂಗಾವತಾರ ತಾಳಿದ ನಂತರ ತಮ್ಮ ಆರು ಜನ ಸುಪುತ್ರರನ್ನು ಕರೆದು ನೀವೆಲ್ಲರೂ ಇಲ್ಲಿಯೇ ಅಂದರೆ ಶ್ರೀಕ್ಷೇತ್ರ ಕೆಂಗೇರಿಯಲ್ಲಿಯೇ ಇದ್ದುಕೊಂಡು ಚಿದಂಬರ ಸಂಪ್ರದಾಯವನ್ನು ಬೆಳೆಸಿರಿ ಎಂದು ಹೇಳಿದ್ದರು. ಅದರಂತೆ ಜೇಷ್ಠ ಸುಪುತ್ರ ದಿವಾಕರ ದಿಕ್ಷೀತರು ಶ್ರೀಕ್ಷೇತ್ರ ಕೆಂಗೇರಿಯಲ್ಲಿಯೇ ಇದ್ದುಕೊಂಡು ಚಿದಂಬರ ಸಂಪ್ರದಾಯ ಮುಂದುವರೆಸಿದರು. ದ್ವಿತೀಯ ಸುಪುತ್ರ ಶಂಕರ ದಿಕ್ಷೀತರು ತಮ್ಮ ವೈಯಕ್ತಿಕ ಕಾರಣಗಳಿಂದ ಬಡ್ಲಿಯಲ್ಲಿ ನೆಲೆಸಿದರು. ಅಲ್ಲಿ ಅವರು ಚಿದಂಬರ ದೇವಸ್ಥಾನವನ್ನು ಕಟ್ಟಿದರು. ಮುಂದೆ ಅದು ಮಲಪ್ರಭೆಯಲ್ಲಿ ಮುಳುಗಡೆಯಾಯಿತು. ತೃತೀಯ ಪುತ್ರ ಮೃತ್ಯುಂಜಯ ದಿಕ್ಷೀತರು ಕಕರ್ಿಹಳ್ಳಿಯಲ್ಲಿ ಹೋಗಿ ನೆಲೆಸಿ ಅಲ್ಲಿಯೂ ಕೂಡ ಅವರು ಶ್ರೀಚಿದಂಬರ ದೇವಸ್ಥಾನವನ್ನು ಕಟ್ಟಿದರು. ಅದೂ ಕೂಡ ತುಂಗಭದ್ರೆಯಲ್ಲಿ ಮುಳುಗಡೆಯಾಯಿತು. ಚತುರ್ಥ ಪುತ್ರ ಬಾಪು ದಿಕ್ಷೀತರು ಗುರ್ಲಹೊಸೂರಿಗೆ ಹೋಗಿ ನೆಲೆಸಿ ಅವರೂ ಸಹ ಅಲ್ಲಿ ಶ್ರೀ ಚಿದಂಬರ ಮಂದಿರವನ್ನು ಕಟ್ಟಿದರು. ಅದೂ ಕೂಡ ಮಲಪ್ರಭಾ ಆಣೆಕಟ್ಟಿನಲ್ಲಿ ಮುಳುಗಡೆಯಾಯಿತು. ಇದರಿಂದ, ಶ್ರೀ ಚಿದಂಬರ ಮಹಾಸ್ವಾಮಿಗಳು ಹೇಳಿದ ಮಾತು "ಕೆಂಗೇಯೇ ಚಿದಂಬರ ಭಕ್ತರಿಗೆ ಮುಕ್ತಿ ಮತ್ತು ಮೋಕ್ಷ ಸ್ಥಾನ ಮತ್ತು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಸ್ಥಾನ ಪಂ. ಶಿವಶಾಸ್ತ್ರಿ ಹೇಳಿದ ಹಾಗೆ ಯದ್ದರ್ಶನಂ ಸಕಲ ಕಷ್ಟ ಮುಕ್ತೀ ಬೀಜಂ ಎಂದು, ಅಂದರೆ ಶ್ರೀಕ್ಷೇತ್ರ ಕೆಂಗೇರಿಗೆ ಬಂದು ದರ್ಶನ ಮಾತ್ರದಿಂದಲೇ ಮಾನವನ ಎಲ್ಲ ಕಷ್ಟಗಳೂ ದೂರವಾಗುತ್ತವೆ. ಆದ್ದರಿಂದ ಕೆಂಗೇರಿಯಲ್ಲಿಯೇ ನಾನು ಶಾಶ್ವತವಾಗಿ ಇರುವೆನು. ಕೆಂಗೇರಿಯೇ ನನ್ನ ಪ್ರೀತಿಯ ಸ್ಥಾನ" ಎಂದು. ಕಾಮಧೇನು ಕಲ್ಪವೃಕ್ಷವು ನಾವು ಬೇಡಿದ್ದನ್ನು ಕೊಡುತ್ತವೆ ಆದರೆ ಕೆಂಗೇರಿಯಲ್ಲಿ ಮಾತ್ರ ನಾವು ಏನೂ ಕೇಳದೆಯೂ ಶ್ರೀ ಚಿದಂಬರ ಮಹಾಸ್ವಾಮಿಗಳು ನಮಗೆ ಎಲ್ಲವೂ ದಯಪಾಲಿಸುತ್ತಾರೆ. ಅದಕ್ಕೆ ಶ್ರೀಕ್ಷೇತ್ರ ಕೆಂಗೇರಿಯು ಯಾವಾಗಲೂ ಶ್ರೇಷ್ಠ. ಗುರ್ಲಹೊಸೂರಿನಲ್ಲಿ ಮಂದಿರ ಸ್ಥಾಪನೆಯಾಗುವಾಗ ಬಾಪು ದಿಕ್ಷೀತರು ಲಿಂಗ ಸ್ಥಾಪನೆ ಮಾಡಬೇಕು ಎಂದು, ಹಾಗೂ ಸಂತ ರಾಜಾರಾಮರು ಶೆಲ್ಲಿಕೇರಿಯಿಂದ ಕಲ್ಲುಗಳನ್ನು ತಂದು ನದಿ ತಟದಲ್ಲಿ ಮಾಡಿಸಿದ ಶಿಲಾಮೂತರ್ಿ ಸ್ಥಾಪನೆ ಮಾಡಬೇಕು ಎಂದು ಪಟ್ಟು ಹಿಡಿದಾಗ ಗುರುಪುತ್ರರಾದ ಮೃತ್ಯುಂಜಯ ದಿಕ್ಷೀತರು ಮತ್ತು ಬಾಪು ದಿಕ್ಷೀತರು ರಾಜಾರಾಮರನ್ನು ನಿಂದಿಸಿ, ಅವಮಾನಿಸಿ ಗುರ್ಲಹೊಸೂರಿನಿಂದ ಹೊರಗೆ ಹಾಕಿದಾಗ ಆಗ ರಾಜಾರಾಮರು ಅತ್ಯಂತ ದುಃಖದಿಂದ ನಿಂದಾಕರಿ ಅಭಂಗಗಳನ್ನು ರಚಿಸಿದರು. ತಾವು ಮಾಡಿಸಿದ ಮೂತರ್ಿಗಳನ್ನು ಹಾಗೂ ತಮ್ಮ ಅಭಂಗ ಗಾಥಾವನ್ನು ತೆಗೆದುಕೊಂಡು ಬಾಭುಳಗಾವಂಕ್ಕೆ ಹೋಗಿ ಅಲ್ಲಿ ತಮ್ಮ ಮನೆಯಲ್ಲಿ ಇಟ್ಟರು. ಆಗ ಅಲ್ಲಿ ಅವರು ಅತ್ಯಂತ ಮನೋವೇದನೆಯಿಂದ ಧಾವಾಪರ ಅಭಂಗಗಳನ್ನು ಬರೆದರು. ಆಗ ಶ್ರೀ ಚಿದಂಬರ ಮಹಾಸ್ವಾಮಿಗಳು ದೃಷ್ಟಾಂತ ಕೊಟ್ಟು ಶ್ರೀಕ್ಷೇತ್ರ ಕೆಂಗೇರಿಗೆ ಬರಲು ಹೇಳಿದರು. ಆಗ ರಾಜಾರಾಮರು ಶ್ರೀಚಿದಂಬರ ಕ್ಷೇತ್ರ ಕೆಂಗೇರಿಗೆ ಬಂದು ಎಷ್ಟೋ ದಿನಗಳವರೆಗೆ ಅವರು ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಸೇವೆ ಮಾಡುತ್ತಲಿದ್ದರು. ಮುಂದೆ ಅವರು ಬೆಳಗಾವಿ ಶಹಾಪೂರಕ್ಕೆ ಹೋಗಿ ಅವರು ಸ್ವಲ್ಪ ದಿವಸ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದರು. ಮುಂದೆ ತುಸು ದಿನಗಳಲ್ಲಿಯೇ ಅವರು ತಮ್ಮ ದೇಹ ತ್ಯಾಗ ಮಾಡಿದರು. ಆಗ ಅಲ್ಲಿಯ ಅವರ ಸಂಬಂಧಿಕರು ತಮ್ಮ ಧರ್ಮದ ಪ್ರಕಾರ ಸಂಸ್ಕಾರ ಮಾಡಬೇಕೆಂದೂ ಹಾಗೂ ಚಿದಂಬರ ಭಕ್ತರು ರಾಜಾರಾಮರ ದೇಹಕ್ಕೆ ಅಗ್ನಿ ಸಂಸ್ಕಾರ ಮಾಡಬೇಕೆಂದೂ ವಾದಿಸಹತ್ತಿದರು. ಆಗ ರಾಜಾರಾಮರು ಪುನಃ ದೇಹದಲ್ಲಿ ಬಂದು ಎದ್ದು ಕುಳಿತು ಶ್ರೀ ಚಿದಂಬರ ಮಹಾಸ್ವಾಮಿಗಳಿಗೆ ನನಗೆ ಮುಕ್ತಿ ಕೊಡು ಎಂದು ವಿನಂತಿಸಿ "ಜಯದೇವ ಜಯದೇವ ಜಯ ಚಿದಂಬರಾ | ಕಾಪೂರಾರತಿ ಓವಾಳಿತೋ ಈಶ್ವರಾ || ದೇವ ಭಕ್ತಿ ಪಣ ಐಕ್ಯ ನಿಜ ಜ್ಯೋತಿ |ಚಿದಂಬರೀ ಲೀನ ದಾಸಾ ನಿಜ ಶಾಂತಿ" ಎಂದು ಪ್ರಾಥರ್ಿಸಿದಾಗ ಅವರ ಆತ್ಮವು ಶ್ರೀಕ್ಷೇತ್ರ ಕೆಂಗೇರಿಗೆ ಬಂದು ಶ್ರೀ ಚಿದಂಬರೇಶ್ವರ ಲಿಂಗದಲ್ಲಿ ಐಕ್ಯವಾಗುತ್ತದೆ. ಆಕ್ಷಣ ಅಲ್ಲಿ ಅವರ ದೇಹಕ್ಕೆ ತನ್ನಿಂತಾನೇ ಅಗ್ನಿಸ್ಪರ್ಶವಾಗುತ್ತದೆ. ಯಾರೂ ಅಗ್ನಿಸ್ಪರ್ಶ ಮಾಡುವ ಅವಶ್ಯಕತೆಯೇ ಬರಲಿಲ್ಲ. ಕಟ್ಟಿಗೆ ಸುಟ್ಟರೂ ಬೂದಿ ಉಳಿಯುತ್ತದೆ ಆದರೆ ಕಪರ್ೂರ ಸುಟ್ಟರೂ ಏನೂ ಉಳಿಯುವದಿಲ್ಲ. ಹಾಗೆ ಅವರ ದೇಹ ಸ್ಥಿತಿಯಾಯಿತು. ಅಂದಿನಿಂದ ಇಲ್ಲಿಯವರೆಗೆ ತ್ರಿಕಾಲ ಪೂಜೆ, ಅನ್ನದಾನ ಅನುಗ್ರಹ ಆಶೀವರ್ಾದ, ಭಕ್ತರಿಗೆ ಅಭಯದಾನ ವಂಶಪಾರಂಪರ್ಯವಾಗಿ ನಡೆಯುತ್ತ ಬಂದಿವೆ. ಈಗಾಗಲೇ ಕೆಲವು ಭಕ್ತರು ಗ್ರಾಮ/ಪಟ್ಟಣಗಳಲ್ಲಿ ಶ್ರೀ ಚಿದಂಬರ ಮೂಲಪೀಠ ಮೂಲ ಮಹಾಕ್ಷೇತ್ರ ಸಂಸ್ಥಾನದ ಮಾನ್ಯತೆ/ಅಭಿಪ್ರಾಯ ಪಡೆಯದೇ ಶ್ರೀ ಚಿದಂಬರ ದೇವಸ್ಥಾನಗಳನ್ನು ನಿಮರ್ಿಸಿದ್ದಾರೆ. ಅವುಗಳು ಮೂಲ ಕ್ಷೇತ್ರದ ಶಾಖೆಗಳಾಗುವದಿಲ್ಲ. ಈಗ ನಾವು ಮೂಲಕ್ಷೇತ್ರದ ಶ್ರೀ ಚಿದಂಬರೇಶ್ವರ ಸಂಸ್ಥಾನದ ಪೀಠದಿಂದ ಶ್ರೀ ಚಿದಂಬರೇಶ್ವರ 200ನೇ ವರ್ಷದ ಲಿಂಗಪ್ರತಿಷ್ಠಾಪನೆ, ಪ್ರಥಮ ದೇವಸ್ಥಾನ ಸ್ಥಾಪನೆಯ ವಾಷರ್ಿಕೋತ್ಸವದ ಅಂಗವಾಗಿ ವಿವಿಧ ಸ್ಥಳಗಳಲ್ಲಿ 108 ಶ್ರೀ ಚಿದಂಬರ ದೇವಸ್ಥಾನ ಶಾಖೆಗಳಾಗಿ ನಿಮರ್ಿಸಲಿದ್ದೇವೆ. ಈಗಾಗಲೇ ಕೆಲವು ಭಕ್ತರು ತಮ್ಮ ತಮ್ಮ ಗ್ರಾಮ/ಪಟ್ಟಣಗಳಲ್ಲಿ ನಿಮರ್ಿಸಿದಂತಹ ದೇವಸ್ಥಾನಗಳನ್ನು ಮೂಲಕ್ಷೇತ್ರದ ಸುಪುದರ್ಿಗೆ ಒಪ್ಪಿಸಿದರೆ ಅವುಗಳನ್ನು ಮೂಲಕ್ಷೇತ್ರದ ಶಾಖೆಗಳನ್ನಾಗಿ ಪರಿವರ್ತನೆ ಮಾಡಿ ಅಲ್ಲಿ ಮೂಲಕ್ಷೇತ್ರದ ಸಂಪ್ರದಾಯದಂತೆ ಪೂಜೆ, ಅರ್ಚನೆ ಇತ್ಯಾದಿಗಳನ್ನು ನಡೆಸಲಾಗುವುದು ಹಾಗೂ ಆ ಶಾಖೆಯ ದೇವಸ್ಥಾನದ ಸುವ್ಯವಸ್ಥೆಗಾಗಿ ಅಲ್ಲಿಯ ಸ್ಥಾನಿಕ ಭಕ್ತರನ್ನು ಗುರುತಿಸಿ ಅಡಳಿತ ಮಂಡಳಿಗಳನ್ನು ನೇಮಿಸಲಾಗುವುದು. ಇಂತಹ ಪರಿಪೂರ್ಣ ಪರಬ್ರಹ್ಮ ಪರಮೇಶ್ವರಾವತಾರ ಶ್ರೀ ಚಿದಂಬರ ಮಹಾಸ್ವಾಮಿಗಳು ಸಗುಣ ರೂಪದಿಂದ ಲಿಂಗಾವತಾರ ತಾಳಿ ಶಕೆ 1937 ಮನ್ಮಥನಾಮ ಸಂವತ್ಸರ ಪೌಷ್ಯ ಶುದ್ಧ ಚೌಥಿ ಬುಧವಾರ ತಾ. 13.01.2015 ಕ್ಕೆ ಇಲ್ಲಿಗೆ 200 ವರ್ಷಗಳು ಆಗುತ್ತಿವೆ. ಅಂದು ಲಿಂಗಾವತಾರದ ದ್ವೀಶತಮಾನದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಲಿಂಗಾವತಾರದ 200 ವರ್ಷಗಳ ಅಂಗವಾಗಿ ಶಕೆ. 1936 ಜಯನಾಮ ಸಂವತ್ಸರ ಪೌಷ್ಯ ಶುದ್ಧ ಪ್ರತಿಪದೆ (ದ್ವಿತಿಯಾ) ಸೋಮವಾರ ತಾ. 22.12.2014 ರಿಂದ ಶಕೆ. 1947 ವಿಶ್ವಾವಸುನಾಮ ಸಂವತ್ಸರ ಪೌಷ್ಯ ಶುದ್ಧ ಸಪ್ತಮಿ ತಾ. 27.12.2025 ರವರೆಗೆ ಅಖಂಡ 11 ವರ್ಷಗಳ ಕಾಲ ಭಕ್ತಿ ಪ್ರಧಾನ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೇ ಶಕೆ 1948 ಪರಾಭವನಾಮ ಸಂವತ್ಸರ ಪೌಷ್ಯ ಶುದ್ಧ ಪ್ರತಿಪದೆ ಶುಕ್ರವಾರ ತಾ. 08.1.2026 ರಿಂದ 14.1.2026 ರವರೆಗೆ ಈ ಅಖಂಡ 11 ವರ್ಷಗಳ ಭಕ್ತಿ ಪ್ರಧಾನ ಕಾರ್ಯಕ್ರಮಗಳ ಸಾಂಗತಾ ಮಹೋತ್ಸವವನ್ನು 211 ನೇ ಶ್ರೀ ಚಿದಂಬರ ಲಿಂಗಾವತಾರ ವಾಷರ್ಿಕೋತ್ಸವದ ಜೊತೆಗೆ ಶ್ರೀ ಚಿದಂಬರ ಮಹಾಸ್ವಾಮಿಗಳಿಗೆ ಸಮರ್ಪಣೆಯಾಗಲಿದೆ. ಮತ್ತು ಚಿದಂಬರ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾನ ಹಾಗೂ ಸಂಸ್ಥಾನ ಸಂಸ್ಥಾಪನೆ ಶಕೆ 1939 ಹೇಮಲಂಬಿನಾಮ ಸಂವತ್ಸರ ವೈಶಾಖ ಶುದ್ಧ ಷಷ್ಠಿ ಗುರುವಾರ ತಾ. 12.05.2016 ಕ್ಕೆ 200 ವರ್ಷಗಳು ತುಂಬುತ್ತದೆ. ಅದರ ಅಂಗವಾಗಿಯೂ ಕೂಡ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಗಳ ನಿಮಿತ್ಯ ಶಕೆ 1938 ದುಮರ್ುಖನಾಮ ಸಂವತ್ಸರ ವೈಶಾಖ ಶುದ್ಧ ಪ್ರತಿಪದೆ ಶನಿವಾರ ತಾ. 07.05.2016 ರಿಂದ ಶಕೆ 1949 ಪ್ಲವಂಗನಾಮ ಸಂವತ್ಸರ ವೈಶಾಖ ಶುದ್ಧ ಸಪ್ತಮಿ ಬುಧವಾರ ತಾ. 13.05.2027 ರವರೆಗೆ ಅಖಂಡ 11 ವರ್ಷಗಳ ಕಾಲ ವಿಶೇಷ ಭಕ್ತಿ ಪ್ರಧಾನ ಕಾರ್ಯಕ್ರಮಗಳು ವಿವಿಧ ಹಂತಗಳಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮದ ಸಾಂಗತಾ ಕಾರ್ಯಕ್ರಮವು ಶಕೆ. 1950 ಕೀಲಕನಾಮ ಸಂವತ್ಸರ ವೈಶಾಖ ಶುದ್ಧ ಪ್ರತಿಪದೆ ತಾ. 25.04.2028 ರಿಂದ 01.05.2028 ರವರೆಗೆ 211 ನೇ ಶ್ರೀ ಚಿದಂಬರ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾನ ಸ್ಥಾಪನೆ ವಾಷರ್ಿಕೋತ್ಸವದ ಜೊತೆಗೆ ಶ್ರೀ ಚಿದಂಬರ ಮಹಾಸ್ವಾಮಿಗಳಿಗೆ ಸಮರ್ಪಣೆಯಾಗಲಿವೆ.

ಈ ಮೇಲಿನ ಎಲ್ಲ ಕಾರ್ಯಕ್ರಮಗಳು ಶ್ರೀ ಚಿದಂಬರ ಮಹಾಸ್ವಾಮಿಗಳು ನಿಗರ್ುಣ ನಿರಾಕಾರ ಲಿಂಗರೂಪದಿಂದ ಮತ್ತೆ ಸಗುಣ ಅವತಾರಕ್ಕೆ ಬರಲು ಪೂರಕವಾಗಿ ನಡೆಯಲಿವೆ. ಆ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಭಕ್ತರ ಉದ್ಧಾರಕ್ಕಾಗಿ ಅನೇಕ ಭಕ್ತಿ ಪ್ರಧಾನ, ಧಾಮರ್ಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಗಳಲ್ಲಿ ಸರ್ವ ಭಕ್ತರು ಭಾಗಿಗಳಾಗಿ ಸೇವಾಕರ್ತರಾಗಿ ಸೇವೆ ಸಲ್ಲಿಸಿ ಕೃತಾರ್ಥರಾಗಬೇಕೆಂದು ಈ ಮೂಲಕ ಇಚ್ಛಿಸುತ್ತೇವೆ. ದ್ವೀಶತಮಾನೋತ್ಸವ ಹಾಗೂ ಸಾಂಗತಾ ಮಹೋತ್ಸವಕ್ಕೆ ಮತ್ತು 108 ವಿವಿಧ ಸ್ಥಳಗಳಲ್ಲಿ ನೆರವೇರಲ್ಪಡುವ ಸಾಮೋಹಿಕ ಶ್ರೀ ಚಿದಂಬರ ಚರಿತ್ರೆ ಪಾರಾಯಣೆ ಮತ್ತು ಲಿಂಗಾರ್ಚನೆ, ನಾಮಜಪ ಮತ್ತು ಸತ್ಸಂಗ ವಿವಿಧ ಪೂಜನೀಯ ಮಠಾಧೀಶರುಗಳು ಹಾಗೂ ಸರ್ವಧರ್ಮ ಗುರುಗಳು ಆಗಮಿಸಿ ತತ್ವೋಪದೇಶ ನೀಡಲಿದ್ದಾರೆ.ಮತ್ತು ಅನೇಕ ವಿದ್ವಾಂಸರು ತತ್ವಜ್ಞಾನವನ್ನು ಉಣಬಡಿಸಲಿದ್ದಾರೆ. ಮಾನ್ಯ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಆಗಮಿಸಿ ಶುಭ ಸಂದೇಶ ನೀಡುವರು. ವಿವಿಧ ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ತೋರಲಿದ್ದಾರೆ. ಇವರೆಲ್ಲರಿಗೂ ಶ್ರೀಕ್ಷೇತ್ರದ ಪೀಠದಿಂದ ಗೌರವ, ಸತ್ಕಾರ ನೀಡಲಿದ್ದೇವೆ. ಈ ಕಾರ್ಯಕ್ರಮಗಳು ಯಾವುದೇ ಜಾತಿ, ಮತ ಭೇದವಿಲ್ಲದೇ ಸರ್ವ ಹಿಂದೂ ಧರ್ಮದ ಸರ್ವ ಸಮಾಜ ಬಾಂಧವರು ಹಾಗೂ ನಮ್ಮ ಎಲ್ಲ ಸಕಲ ಸಂತ, ಭಕ್ತ ವೃಂದ ಮತ್ತು ತಾವು ಮತ್ತು ತಮ್ಮ ಪರಿವಾರದವರು ಈ ದ್ವೀಶತಮಾನೋತ್ಸವ ಹಾಗೂ ಸಾಂಗತಾ ಮಹೋತ್ಸವಗಳಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಮತ್ತು ಶ್ರೀ ಚಿದಂಬರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕೆಂದು ನಾವುಗಳು ಇಚ್ಛಿಸುತ್ತೇವೆ.

ಶ್ರೀಮನೃಪ ಶಾಲಿವಾಹನ ಶಕೆ 1936 ಜಯನಾಮ ಸಂವತ್ಸರ ವೈಶಾಖ ಶುದ್ಧ ಷಷ್ಠಿ ಸೋಮವಾರ
ತಾ : 05.05.2014
ಸರ್ವರ ಅಖಂಡ ಕಲ್ಯಾಣ ಬಯಸುವ
ಧಮರ್ಾಶ್ರಿತ ಶ್ರೀ ಶಂಕರ ದೀಕ್ಷಿತರು,
ಪೀಠಾಧಿಕಾರಿಗಳು, ಗುರುಮಹಾರಾಜರು

ಶ್ರೀಮನೃಪ ಶಾಲಿವಾಹನ ಶಕೆ 1936 ಜಯನಾಮ ಸಂವತ್ಸರ ಪೌಷ್ಯ ಶುದ್ಧ ಚೌಥಿ ತಾ. 23.12.2014 ರಿಂದ ಶ್ರೀಮನೃಪ ಶಲಿವಾಹನ ಶಕೆ 1947 ವಿಶ್ವಾವಸು ನಾಮ ಸಂವತ್ಸರ ಪೌಷ್ಯ ಶುದ್ಧ ಸಪ್ತಮಿ ತಾ. 27.11.2025 ರವರೆಗೆ ಜರುಗುವ 200ನೇ ಶ್ರೀ ಚಿದಂಬರ ಮಹಾಸ್ವಾಮಿಗಳ ಲಿಂಗಾವತಾರದ ದ್ವೀಶತಮಾನೋತ್ಸವ ಅಂಗವಾಗಿ ಪೂರ್ವ, ಮಧ್ಯ ಮತ್ತು ನಂತರ ಅಖಂಡ 11 ವರ್ಷಗಳ ಕಾಲ ಅಖಂಡ ಭಕ್ತಿ ಪ್ರಧಾನ ಆಚರಿಸುವ ವಿಶೇಷ ಕಾರ್ಯಕ್ರಮಗಳು

208 ಲಕ್ಷ ಸಾಮೂಹಿಕ ಲಿಂಗಾರ್ಚನೆ

ಈ ಶಾವಾಸ್ಯಮಿದಂ ಸರ್ವಂ - ಈ ಜಗತ್ತು ಶಿವಮಯ, ಲಿಂಗಮಯವಿದ್ದು, ನಾನು ನಿರ್ಗುಣ ನಿರಾಕಾರ ಲಿಂಗರೂಪದಲ್ಲಿದ್ದು, ಭಕ್ತರನ್ನು ಉದ್ಧರಿಸುತ್ತೇನೆಂದು ಹೇಳಿ ಶ್ರೀ ಚಿದಂಬರ ಮಹಾಸ್ವಾಮಿಗಳು ಶಕೆ 1737 ಪುಷ್ಯ ಶುದ್ಧ ಚೌಥಿ (ಷಷ್ಠಿ)ಯಂದು ತಮ್ಮ ಸಗುಣ ರೂಪ ಮರೆ ಮಾಡಿ ಲಿಂಗಾವತಾರ ತಾಳಿದರು. ಉಪಾಸನೆಯಲ್ಲಿ ಸಗುಣ ಮತ್ತು ನಿರ್ಗುಣ ಆಚರಣೆ ಬಹಳ ಮಹತ್ವದ್ದಿದೆ. ಆ ಪ್ರಯುಕ್ತವಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳು ಲಿಂಗಾವತಾರ ತಾಳಿ 200 ವರ್ಷಗಳು ಆಗುತ್ತಲಿವೆ. ಆ ನಿಮಿತ್ಯವಾಗಿ ನಾವು 208 ಅಥವಾ ಸ್ಥಳಗಳಲ್ಲಿ 208 ಲಕ್ಷ ಸಾಮೂಹಿ ಲಿಂಗಾರ್ಚನೆ ಮಾಡಬೇಕೆಂದಿದ್ದೇವೆ. ಈ ಸಂಖ್ಯೆ ಪರಿಪೂರ್ಣವಾಗಿಸುವ ಸಲುವಾಗಿ ಅಖಂಡ 11 ವರ್ಷಗಳಲ್ಲಿ ಸಾಮೂಹಿಕವಾಗಿ ನಮ್ಮ ಹಿಂದೂ ಸರ್ವ ಸಮಾಜ ಬಾಂಧವ ಭಕ್ತರ ಮನೆ ಮನೆಯಲ್ಲಿ 1,5,11,16,21,108,121,1331,14641, 1 ಲಕ್ಷ. ಈ ಸಂಖ್ಯೆಗಳಲ್ಲಿ ಭಕ್ತರು ತಮ್ಮ ತಮ್ಮ ಮನೆಯಲ್ಲಿ ಲಿಂಗಾರ್ಚನೆಗಳನ್ನು ಮಾಡಿ ಶ್ರೀಕ್ಷೇತ್ರಕ್ಕೆ ಕಳಿಸಿಕೊಡಬೇಕು.

108 ಕೋಟಿ ಸಾಮೂಹಿಕ “ಓಂ ಶ್ರೀ ಶಿವಚಿದಂಬರಾಯ ನಮಃ” ನಾಮಜಪ

“ನಾಮ ಮ್ಹಣೆ ತ್ಯಾಸಿ ಉದ್ಧರೀತೋ” ಶ್ರೀ ಚಿದಂಬರ ಉವಾಚದಂತೆ ಯಾರು ನಾಮಸ್ಮರಣೆಯನ್ನು ಮಾಡುತ್ತಾರೊ ಅವರನ್ನು ನಾನು ಉದ್ಧಾರ ಮಾಡುತ್ತೇನೆ ಎಂದು ಹೇಳಿ ತ್ರಿಲೋಕದಲ್ಲಿಯೂ ನನ್ನ ಭಯ ಇದ್ದು, ವ್ಯಾಘ್ರ, ಸಿಂಹ, ಸರ್ಪ,ಜಲ,ಅಗ್ನಿ,ವಾಯು,ಆಕಾಶ, ದೇವ, ದಾನವರಿಗೂ ಕೂಡ ನನ್ನ ಭಯವಿದೆ. ಆದ್ದರಿಂದ ಈ ಕಲಿಯುಗದಲ್ಲಿ ನಾಮಸ್ಮರಣೆಯೊಂದೇ ಭವತಾರಕವು. ‘ಸಪ್ತ ಕೋಟಿ ಮಂತ್ರ ಪ್ರಣವ ಪಾಸೋನಿ’ - ಏಳು ಕೋಟಿ ಮಂತ್ರಗಳಲ್ಲಿ “ಚಿದಂಬರ” ನಾಮ ಅತ್ಯಂತ ಶ್ರೇಷ್ಠವಾದ ನಾಮ, ಮಂತ್ರವೂ ಹೌದು. ದ್ವಿಶತಮಾನೋತ್ಸವದ ಅಂಗವಾಗಿ ಅಖಂಡ 11 ವರ್ಷಗಳ ಕಾಲ ಅಖಂಡವಾಗಿ 108 ಕೋಟಿ ಸಾಮೂಹಿಕ ನಾಮಜಪ ಸಂಕಲ್ಪಿಸಿದ್ದೇವೆ. ಈ ಸಂಖ್ಯೆ ಪರಿಪೂರ್ಣವಾಗಿಸುವ ಸಲುವಾಗಿ ಅಖಂಡ 11 ವರ್ಷಗಳಲ್ಲಿ ಸಾಮೂಹಿಕವಾಗಿ ಹಾಗೂ ವೈಯಕ್ತಿಕವಾಗಿ ನಮ್ಮ ಹಿಂದೂ ಸರ್ವ ಸಮಾಜ ಬಾಂಧª ಭಕ್ತರ ಮನೆ ಮನೆಯಲ್ಲಿ 11ಸಾವಿರ,,25ಸಾವಿರ,50ಸಾವಿರ,1 ಲಕ್ಷ, 1 ಕೋಟಿ, 4 ಕೋಟಿ, 6 ಕೋಟಿ,. 9 ಕೋಟಿ, 11 ಕೋಟಿ, 13 ಕೋಟಿ ನಾಮಜಪ ಮಾಡಿ ಜಪಸಂಖ್ಯೆ ತಮ್ಮ ಸಂಪೂರ್ಣ ಹೆಸರು ಮತ್ತ ವಿಳಾಸದೊಂದಿಗೆ ಶ್ರೀಕ್ಷೇತ್ರಕ್ಕೆ ಕಳಿಸಿಕೊಡಬೇಕು

108 ವಿವಿಧ ಸ್ಥಳಗಳಲ್ಲಿ 108 ಭಕ್ತರಿಂದ ಸಾಮೂಹಿಕ ಚಿದಂಬರ ಚರಿತ್ರೆ ಪಾರಾಯಣ ಮಹಾ ಅನುಷ್ಠಾನ

ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಅತ್ಯಂತ ಮಹತ್ವದ ವಿಶೇಷ ಕಾರ್ಯಕ್ರಮ ಇದಾಗಿದೆ. ಸ್ಥಳ ಶುದ್ಧಿ, ಗ್ರಾಮ/ಪಟ್ಟಣ ಶುದ್ಧಿ, ಮನಃಶುದ್ಧಿ, ಚಿತ್ತಶುದ್ಧಿ, ಶೀಘ್ರ ಮನೋಕಾಮನೆ ಸಾಕಾರಗೊಳ್ಳಲು ದ್ವಿಶತಮಾನೋತ್ಸವದ ಅಂಗವಾಗಿ ಭಕ್ತರ ಉದ್ಧಾರಕ್ಕಾಗಿ ಎಲ್ಲರಿಗೂ ಸೇವಾವಕಾಶ ಸಿಗಬೇಕೆಂಬ ಉದ್ದೇಶದಿಂದ ಅಖಂಡ 11 ವರ್ಷಗಳಲ್ಲಿ 108 ವಿವಿಧ ಸ್ಥಳಗಳಲ್ಲಿ 108 ಭಕ್ತರಿಂದ ಸಾಮೂಹಿಕ ಶ್ರೀ ಚಿದಂಬರ ಚರಿತ್ರೆ ಪಾರಾಯಣ ಅನುಷ್ಠಾನ ಮಾಡಬೇಕೆಂದಿದ್ದೇವೆ. ಇದರಲ್ಲಿ ಸ್ತ್ರೀ ಪುರುಷ ಭೇದವಿಲ್ಲದೇ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದೇವೆ. ಪಾರಾಯಣ ನಡೆಯುವ ಸಮಯ ಮತ್ತು ಕೆಲವು ನಿಯಮಗಳನ್ನು ಪಾಲಿಸಬೇಕು. ಸಮಯ ಹಾಗೂ ದಿನಾಂಕವನ್ನು ಮುಂಚಿತವಾಗಿ ತಿಳಿಸಲಾಗುವುದು.

108 ವಿವಿಧ ಸ್ಥಳಗಳಲ್ಲಿ ಲಘು ರುದ್ರಾಭಿಷೇಕ

ಅಭಿಷೇಕ ಪ್ರಿಯ ರುದ್ರ - ಭಕ್ತರಿಗೆ ಇದೂ ಕೂಡ ಶೀಘ್ರ ಫಲದಾಯಿ. ದ್ವಿಶತಮಾನೋತ್ಸವದ ಅಂಗವಾಗಿ ಅಖಂಡ 11 ವರ್ಷಗ¼ ಭಕ್ತಿ ಪ್ರಧಾನ ಕಾರ್ಯಕ್ರಮಗಳಲ್ಲಿ ರುದ್ರಾಭಿಷೇಕ ಕಾರ್ಯಕ್ರಮ 108 ಸಾಮೂಹಿಕ ಚಿದಂಬರ ಚರಿತ್ರೆ ಪಾರಾಯಣದ ಮಧ್ಯದ ಒಂದು ದಿನ 108 ವಿವಿಧ ಸ್ಥಳಗಳಲ್ಲಿ 11 ಜನ ವಿಪ್ರರಿಂದ ಲಘು ರುದ್ರಾಭಿಷೇಕ ಸಮರ್ಪಿಸಲಾಗುವುದು. ಇದರಲ್ಲಿ ಒಂದು ಆವರ್ತನೆ ಮತ್ತು ಅಖಂಡ ಲಘು ರುದ್ರಾಭಿಷೇಕದ ಸೇವೆ ಸಲ್ಲಿಸಬಹುದು

ನಗರ ಸಂಕೀರ್ತನೆ

108 ವಿವಿಧ ಸ್ಥಳಗಳಲ್ಲಿ ಜರುಗುವ 108 ಸಾಮೂಹಿಕ ಚಿದಂಬರ ಚರಿತ್ರೆ ಪಾರಾಯಣ ಅನುಷ್ಠಾನ ಕಾರ್ಯಕ್ರಮದ ಜೊತೆಯಲ್ಲಿ ಬೆಳಿಗ್ಗೆ 4.30 ರಿಂದ 7.00 ಗಂಟೆಯವರೆಗೆ ಭೂಪಾಳಿ, ಕಾಕಡಾರತಿ, ಶ್ರೀ ಚಿದಂಬರ ದಿಂಡಿಯ ಸಂತ ಭಕ್ತರಿಂದ ಅಖಂಡ ನಾಮಸ್ಮರಣೆಯೊಂದಿಗೆ ನಗರ ಸಂಕೀರ್ತನೆ ನಡೆಯುವುದು

ಸತ್ಸಂಗ ಸಭೆ

108 ವಿವಿಧ ಸ್ಥಳಗಳಲ್ಲಿ ಜರುಗುವ 108 ಸಾಮೂಹಿಕ ಚಿದಂಬರ ಚರಿತ್ರೆ ಪಾರಾಯಣ ಅನುಷ್ಠಾನ ಕಾರ್ಯಕ್ರಮದ ಸಾಯಂಕಾಲದಲ್ಲಿ ಸತ್ಸಂಗ ಸಭೆ ಏರ್ಪಡಿಸಲಾಗುವುದು. ಇದರಲ್ಲಿ ಮುಖ್ಯವಾಗಿ ಅನುಷ್ಠಾನಕರಿಂದ ವಾಂಙ್ಮಯ ಸೇವೆ, ವಿದ್ವತ್ ಜನರಿಂದ ಉಪನ್ಯಾಸ, ವಿವಿಧ ಗೋಷ್ಠಿಗಳು, ಕೀರ್ತನೆ, ಸಂಗೀತ ಸೇವೆ ಮತ್ತು ಸೇವೆ ಸಲ್ಲಿಸಿದ ದಾನಿಗಳಿಗೆ, ಅತಿಥಿಗಳಿಗೆ ಸತ್ಕಾರ ಸಮಾರಂಭ ಮತ್ತು ಸಾಂಪ್ರದಾಯಿಕ ಭಜನೆ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ.

ಸದ್ಭಾವನಾ ಶೋಭಾ ಯಾತ್ರೆ

ಈ ದ್ವೀಶತಮಾನೋತ್ಸವದ ಹಾಗೂ ಅಖಂಡ ಹನ್ನೊಂದು ವರ್ಷಗಳ ಭಕ್ತಿ ಪ್ರಧಾನ ಕಾರ್ಯಕ್ರಮದ ಪ್ರಚಾರಾರ್ಥವಾಗಿ ವಿವಿಧ ಗ್ರಾಮ/ಪಟ್ಟಣಗಳಲ್ಲಿ ಪಾಲಕಿಯಲ್ಲಿ ಶ್ರೀ ಚಿದಂಬರ ಭಾವಚಿತ್ರ, ಮೂಲಪಾದುಕೆ, ಅಕ್ಷಯ ಕಲಶ, ತಾಳ, ವೀಣಾ, ಮೃದಂಗ ದಿಂಡಿಯೊಂದಿಗೆ ಭವ್ಯ ಶೋಭಾಯಾತ್ರೆ,, ಪ್ರಚಾರ, ಹಾಗೂ ಪೂರ್ವ ತಯಾರಿ ಸಭೆ ನಡೆಸಲಾಗುವುದು ಮತ್ತು ಈ ಎಲ್ಲ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡುವುದು.

ಶ್ರೀಮನೃಪ ಶಾಲಿವಾಹನ ಶಕೆ 1939 ,ನಾಮ ಸಂವತ್ಸರ ಶ್ರೀ ಚಿದಂಬರ ಮಹಾಸ್ವಾಮಿಗಳ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾಪನೆ ಮತ್ತು ಸಂಸ್ಥಾನ ಸ್ಥಾಪನೆಯ ದ್ವೀಶತಮಾನೋತ್ಸವ ಅಂಗವಾಗಿ ಪೂರ್ವ, ಮಧ್ಯ ಮತ್ತು ನಂತರ ಅಖಂಡ 11 ವರ್ಷಗಳ ಕಾಲ ಅಖಂಡ ಭಕ್ತಿ ಪ್ರಧಾನ ಆಚರಿಸುವ ವಿಶೇಷ ಕಾರ್ಯಕ್ರಮಗಳು

1) 1 ಲಕ್ಷ ಸಾಮೂಹಿಕ ಲಿಂಗಾರ್ಚನೆ ಹಾಗೂ 11 ಕೋಟಿ ನಾಮಜಪ
2) 51 ವಿವಿಧ ಸ್ಥಳಗಳಲ್ಲಿ ಸಾಮೂಹಿಕ ಶ್ರೀ ಚಿದಂಬರ ಚರಿತ್ರೆ ಪಾರಾಯಣ (ಮೂರು ದಿವಸÀ)
3) ನಗರ ಸಂಕೀರ್ತನೆ ಮತ್ತು ಸತ್ಸಂಗ ಸಭೆ
4) 24 ವಿವಿಧ ಸ್ಥಳಗಳಲ್ಲಿ ಗಾಯತ್ರಿ ಪುರಶ್ಚರಣ

ಮಾನವೀ ಜೀವನದ ಆತ್ಮಾಭಿವೃದ್ಧಿಗೋಸ್ಕರ ಮತ್ತು ವೈದಿಕ ಸಂಪ್ರದಾಯ ಜಾಗ್ರತಿಗೋಸ್ಕರ ಮತ್ತು ವೈಯಕ್ತಿಕವಾಗಿ ಆತ್ಮಾಭಿವೃದ್ಧಿ ಹೊಂದಿ ಎಲ್ಲರಿಗೂ ಸುಖ ಶಾಂತಿ ಲಭಿಸುವಂತಾಗಲು ಹಾಗೂ ಲೋಕಕಲ್ಯಾಣಾರ್ಥವಾಗಿ, ಎಲ್ಲರಿಗೂ ಸುಖ ಶಾಂತಿ ಲಭಿಸಲು 24 ವಿವಿಧ ಸ್ಥಳಗಳಲ್ಲಿ ಗಾಯತ್ರಿ ಪುರಶ್ಚರಣ ನೆರವೇರಿಸಲಾಗುವುದು. ನಂತರ ಸಾಂಗತಾ ಸಮಾರಂಭನ್ನು 24 ಕುಂಡಗಳಲ್ಲಿ ಗಾಯತ್ರಿ ವಿಶೇಷ ಮಹಾಯಾಗ ಏರ್ಪಡಿಸಲಾಗುವುದು.

5)  ಮಹಾರುದ್ರ ಹಾಗೂ ಅತಿರುದ್ರ

“ದ್ರಾ ಇತಿ ರುದ್ರಃ” - ದಾರಿದ್ರವನ್ನು ಹೊಡೆದು ಓಡಿಸುವವನೇ ರುದ್ರ. ಆದ್ದರಿಂದ ರುದ್ರ ಪಠನದಿಂದ, ರುದ್ರಾಭಿಷೇಕದಿಂದ ಸಕಲ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದಕ್ಕೆ ಅನೇಕ ಸಾಕ್ಷಿಗಳು ನಮ್ಮ ಮುಂದೆ ಇವೆ. ಅದ್ದರಿಂದ ಸಕಲರಿಗೂ ಅಖಂಡ ಕಲ್ಯಾಣವಾಗಲಿ ಎಂಬ ಉದ್ಧೇಶದಿಂದ ಶ್ರೀ ಚಿದಂಬರ ಮಹಾಸ್ವಾಮಿಗಳ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾಪನೆ ಮತ್ತು ಸಂಸ್ಥಾನ ಸ್ಥಾಪನೆಯ ದ್ವೀಶತಮಾನೋತ್ಸವ ಅಂಗವಾಗಿ ಅಖಂಡ ಹನ್ನೊಂದು ವರ್ಷಗಳ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ 51 ವಿವಿಧ ಸ್ಥಳಗಳಲ್ಲಿ ಹಮ್ಮಿಕೊಂಡಂತಹ ಸಾಮೂಹಿಕ ಶ್ರೀ ಚಿದಂಬರ ಚರಿತ್ರೆ ಪಾರಾಯಣ ಕಾರ್ಯಕ್ರಮದ ಜೊತೆಯಲ್ಲಿ 30 ಮಹಾರುದ್ರಾಭಿಷೇಕ 21 ಅತಿರುದ್ರಾಭಿಷೇಕ ಸಮರ್ಪಿಸಲಾಗುವುದು. ಈ ಪ್ರಕಾರ ಲಘುರುದ್ರ ಅತಿರುದ್ರ ಸಂಖ್ಯೆ ಪರಿಪೂರ್ಣವಾಗುವದಕ್ಕೋಸ್ಕರ ಇಚ್ಛುಕರು ಈ ಸೇವೆಗಳನ್ನು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಸಲ್ಲಿಸಿ ಆ ಸಂಕಲ್ಪದ ನೇತೃತ್ವವನ್ನು ತೆಗೆದುಕೊಳ್ಳಬಹುದು. ಇವುಗಳಲ್ಲಿ ಮೊದಲನೇಯ ಹಾಗೂ ಕೊನೆಯದು ಶ್ರೀಕ್ಷೇತ್ರ ಕೆಂಗೇರಿಯಲ್ಲಿ ಮಹಾಸ್ವಾಮಿಗಳಿಗೆ ಸಮರ್ಪಿಸಲಾಗುವುದು.

6)  ಶ್ರೀ ಚಿದಂಬರ ಮಹಾತ್ಮೆ ನಾಟಕ

ಶ್ರೀ ಚಿದಂಬರ ಮಹಾಸ್ವಾಮಿಗಳ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾಪನೆ ಮತ್ತು ಸಂಸ್ಥಾನ ಸ್ಥಾಪನೆಯ ದ್ವೀಶತಮಾನೋತ್ಸವ ಅಂಗವಾಗಿ ಅಖಂಡ ಹನ್ನೊಂದು ವರ್ಷಗಳ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ 11 ವಿವಿಧ ಸ್ಥಳಗಳಲ್ಲಿ “ಶ್ರೀ ಚಿದಂಬರ ಮಹಾತ್ಮೆ” ನಾಟಕವನ್ನು ಪ್ರದರ್ಶಿಸಲಾಗುವುದು.

7)  ಅನ್ನದಾನ
8)  ಸ್ಮರಣ ಸಂಚಿಕೆ ಹಾಗೂ ವಿವಿಧ ಗ್ರಂಥಗಳ ಬಿಡುಗಡೆ.

ಈ ಸ್ಮರಣ ಸಂಚಿಕೆಯಲ್ಲಿ ಶ್ರೀ ಚಿದಂಬರ ಮಹಾತ್ಮೆ, ಶ್ರೀ ಕ್ಷೇತ್ರ ಮಹಾತ್ಮೆ ಜೊತೆಗೆ ವಿದ್ವತ್ ಜನರಿಂದ , ಸಾಹಿತಿ, ಲೇಕಕರಿಂದ ಲೇಖನಗಳಿಗೆ ಅವಕಾಶವಿರುತ್ತದೆ. ಮತ್ತು ಈ ಕಾರ್ಯಕ್ರಮಕ್ಕೆ ಅನುಪಮ ಸೇವೆ ಸಲ್ಲಿಸಿದ ಭಕ್ತರ ಹೆಸರು ಹಾಗೂ ಭಾವಚಿತ್ರಗಳನ್ನು ಪ್ರಕಟಿಸಲಾಗುವುದು.

9)  ಈ ದ್ವೀಶತಮಾನೋತ್ಸವದ ಅಂಗವಾಗಿ 1008 ವಿವಿಧ ಸ್ಥಳಗಳಲ್ಲಿ ಒಂದು ದಿನದ ಭಕ್ತಿ ಪ್ರಧಾನ ಕಾರ್ಯಕ್ರಮಗಳಾಗಿ ಸಾಮೂಹಿಕ ಲಿಂಗಾರ್ಚನೆ, ಜಪ, ಸಾಂಯಕಾಲ ಸತ್ಸಂಗ, ಸಾಂಪ್ರದಾಯಿಕ ಭಜನೆ, ಸಂಗೀತ ಸೇವೆ, ಆಶೀರ್ವಚನ ಮುಂತಾದ ಕಾರ್ಯಕ್ರಮಗಳು.

ಶ್ರೀಮನೃಪ ಶಾಲಿವಾಹನ ಶಕೆ 1937 ಮನ್ಮಥನಾಮ ಸಂವತ್ಸರ ಪೌಷ್ಯ ಶುದ್ಧ ಪ್ರತಿಪದೆಯಿಂದ ಸಪ್ತಮಿಯವರೆಗೆ ಬುಧವಾರ ತಾ.13.01.2015 .ರಿಂದ.. ತಾ. 19.01.2015 .ವರೆಗೆ ಆಚರಿಸುವ 200ನೇ ವರ್ಷದ ಶ್ರೀ ಚಿದಂಬರ ಲಿಂಗಾವತಾರದ ದ್ವೀಶತಮಾನೋತ್ಸವದ ಅಂಗವಾಗಿ ಜರುಗುವ ಕಾರ್ಯಕ್ರಮಗಳು

1) 200 ಲಕ್ಷ ಸಾಮೂಹಿಕ ಚಿದಂಬರ ನಾಮಜಪ ಹಾಗೂ ಜಪಯಜ್ಞ.
2) 200 ಅನುಷ್ಠಾನಕರಿಂದ ಸಾಮೂಹಿಕ ಶ್ರೀ ಚಿದಂಬರ ಚರಿತ್ರೆ ಪಾರಾಯಣ. ಪ್ರತಿದಿನ ಸಾಯಂಕಾಲ ಸತ್ಸಂಗ ಸಭೆ.
3) 200 ಲಿಂಗಾರ್ಚನೆ.
4) 200 ಸತ್ಯಚಿದಂಬರ ಪೂಜೆ.
5) 200 ಸತ್ಯನಾರಾಯಣ ಪೂಜೆ
6) 200 ಕುಂಕುಮಾರ್ಚನೆ.
7) ಮಹಾಮೃತ್ಯುಂಜಯ ಯಾಗ ಮತ್ತು ವಿವಿಧ ಹೋಮ, ಹವನಗಳು.
8) ಶ್ರೀ ಚಿದಂಬರ ದಿಂಡಿಯಿಂದ ಅಖಂಡ ವೀಣಾ ಸ್ಥಾಪನೆ ಹಾಗೂ ಅಖಂಡ ನಾಮಸ್ಮರಣೆ
9) ವಿವಿಧ ದಿಂಡಿಗಳಿಂದ ಭಜನೆ, ಕೀರ್ತನೆ, ಉಪನ್ಯಾಸ, ವಿದ್ವತ್ ಜನರಿಂದ ಉಪನ್ಯಾಸ, ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕøತಿಕ (Sanskrutik) ಮನೋರಂಜನೆ ಕಾರ್ಯಕ್ರಮಗಳು.

ಶ್ರೀಮನೃಪ ಶಾಲಿವಾಹನ ಶಕೆ 1948 ಪರಾಭವ ಪೌಷ್ಯ ಶುದ್ಧ ಪ್ರತಿಪದೆಯಿಂದ ಸಪ್ತಮಿಯವರೆಗೆ ತಾ.08.01.2026..ರಿಂದ.14.01.2026.ವರೆಗೆ ಶ್ರೀ ಚಿದಂಬರ ಲಿಂಗಾವತಾರದ ಅಂಗವಾಗಿ ಅಖಂಡ ಹನ್ನೊಂದು ವರ್ಷಗಳ ಕಾಲ ಆಚರಿಸಿದ ಕಾರ್ಯಕ್ರಮಗಳು ಸಾಂಗತಾ ಸಮಾರಂಭದ ಕಾರ್ಯಕ್ರಮಗಳು.

1) 108 ಕೋಟಿ ಸಾಮೂಹಿಕ ನಾಮ ಜಪಯಜ್ಞ ಹನ್ನೊಂದು ಕುಂಡಗಳಲ್ಲಿ ಪೂರ್ಣಾಹುತಿ.
2) 208 ಲಕ್ಷ ಸಾಮೂಹಿಕ ಲಿಂಗಾರ್ಚನೆ ಮಹಾ ಸಾಂಗತಾ ಹೋಮ ನಿತ್ಯ ಲಕ್ಷ ಬಿಲ್ವಾರ್ಚನೆ.
3) 21 ವಿವಿಧ ಭಕ್ತರ ಇಷ್ಟಾರ್ಥ ಹೋಮಗಳು ಭಕ್ತರ ಯಜಮಾತ್ವದಿಂದ.
4) 1008 ಸಾಮೂಹಿಕ ಶ್ರೀ ಚಿದಂಬರ ಚರಿತ್ರೆ ಪಾರಾಯಣ 1008 ಭಕ್ತರಿಂದ.
5) 1008 ಸಾಮೂಹಿಕ ಲಿಂಗಾರ್ಚನೆ.
6) 1008 ಸಾಮೂಹಿಕ ಸತ್ಯ ಚಿದಂಬರ ಪೂಜೆ.
7) 1008 ಸಾಮೂಹಿಕ ಸತ್ಯ ನಾರಾಯಣ ಪೂಜೆ.
8) 1008 ಸಾಮೂಹಿಕ ಕುಂಕುಮಾರ್ಚನೆ.
9) ಶ್ರೀ ಚಿದಂಬರ ದಿಂಡಿಯಿಂದ ಅಖಂಡ ಒಂದು ವಾರ ವೀಣಾ ಸ್ಥಾಪನೆ, ನಾಮಸ್ಮರಣೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಶ್ರೀ ಚಿದಂಬರ ಮಹಾತ್ಮೆ ನಾಟಕ.
10) ಸಂತ ಭಕ್ತರ ದಾನಿಗಳ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಗಣ್ಯಮಾನ್ಯರಿಗೆ ಆಶೀರ್ವಾದ ಪೂರ್ವಕ ಸತ್ಕಾರ ಸಮಾರಂಭ.
11) 200 ದಿನಗಳ ಕಾಲ ಲಿಂಗಪುರಾಣ. (18 ಪುರಾಣಗಳಲ್ಲೊಂದಾದ)

200ನೇ ಶ್ರೀ ಚಿದಂಬರ ಲಿಂಗಾವತಾರ, ಶ್ರೀ ಚಿದಂಬರ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾನ ಹಾಗೂ ಸಂಸ್ಥಾನ ಸಂಸ್ಥಾಪನೆಯ ದ್ವೀಶತಮಾನೋತ್ಸವದ ಮತ್ತು ಅಖಂಡ ಹನ್ನೊಂದು ವರ್ಷಗಳ ಭಕ್ತಿ ಪ್ರಧಾನ ಕಾರ್ಯಕ್ರಮಗಳ ಅಂಗವಾಗಿ ಮಹಾಸಂಕಲ್ಪ.

1) ಶ್ರೀ ಚಿದಂಬರ ಮೂಲ ಕ್ಷೇತ್ರದ ದೇವಸ್ಥಾನದ 108 ವಿವಿಧ ಸ್ಥಳಗಳಲ್ಲಿ 108 ಶ್ರೀ ಚಿದಂಬರ ಉಪಾಸನಾ ದೇವಸ್ಥಾನಗಳನ್ನು ಶಾಖೆಗಳಾಗಿ ಸ್ಥಾಪಿಸುವುದು.
2) ಶ್ರೀ ಚಿದಂಬರ ಮೂಲಪೀಠ ಮೂಲಮಹಾಕ್ಷೆತ್ರ ಸಂಸ್ಥಾನದ ಅಂಗ ಸಂಸ್ಥೆ ಶ್ರೀ ಚಿದಂಬರ ಸೇವಾದಳದ 208 ವಿವಿಧ ಸ್ಥಳಗಳಲ್ಲಿ 208 ಸಾಖೆಗಳಾಗಿ ಸ್ಥಾಪಿಸುವುದು.
3) ಶ್ರೀ ಚಿದಂಬರ ಮೂಲಪೀಠ ಮೂಲಮಹಾಕ್ಷೆತ್ರ ಸಂಸ್ಥಾನÀ, ಕೆಂಗೇರಿಯ ಅಭಿವೃದ್ಧಿ ವಿಭಾಗದಿಂದ ಈ ಕೆಳಕಂಡ ಅಭಿವೃದ್ಧಿ ಯೋಜನೆಗಳ ನಿರ್ಮಾಣ ಮಾಡಿ ಶ್ರೀ ಚಿದಂಬರೇಶ್ವರರಿಗೆ ಸಮರ್ಪಿಸಿ ಭಕ್ತ ವೃಂದಕ್ಕೆ ಉಪಯೋಗಿಸಲು ಅನುಕೂಲ ಮಾಡಿ ಕೊಡುವುದು.
1) ಅತಿಥಿ ನಿವಾಸಗಳು
2) ಭಕ್ತ ನಿವಾಸಗಳು
3) ಯಾತ್ರಿ ನಿವಾಸಗಳು
4) ದಿಂಡಿ ನಿವಾಸಗಳು
5) ಶ್ರೀ ಚಿದಂಬರ ಕಲ್ಯಾಣ ಮಂಟಪ ಹಾಗೂ ಸಭಾ ಭವನ
6) ವಿಶಾಲವಾದ ಪಾಕಶಾಲೆ ಹಾಗೂ ಭೋಜನ ಶಾಲೆ.
7) ಗೋಶಾಲೆ,
8) ತಪೋವನ, ಉಪಾಸನಾ ಧ್ಯಾನ ಮಂದಿರ, ರಥಬೀದಿ ಡಾಂಬರೀಕರಣ, ಸುತ್ತಮುತ್ತಲಿನ ಕಂಪೌಂಡ ಗೋಡೆ, ಗಾರ್ಡನ್, ಸ್ನಾನಗೃಹ ಶೌಚಾಲಯಗಳು ನಿರ್ಮಿಸುವುದು.
4) ಶ್ರೀ ಚಿದಂಬರ ಮೂಲಪೀಠ ಮೂಲಮಹಾಕ್ಷೆತ್ರ ಸಂಸ್ಥಾನÀ, ಕೆಂಗೇರಿಯ ಅಂಗ ಸಂಸ್ಥೆಯಾದ ಪಂಚರತ್ನ ಶಿಕ್ಷಣ ಸಂಸ್ಥೆಯಿಂದ ವೇದ ಪಾಠಶಾಲೆ, ಸಂಸ್ಕøತ ಪಾಠಶಾಲೆ, ಶಾಸ್ತ್ರ ಪಾಠಶಾಲೆ, ಸಂಗೀತ ಪಾಠಶಾಲೆ, ಯೋಗ ಪಾಠಶಾಲೆ ನಿರ್ಮಿಸುವುದು ಮತ್ತೊಂದು ಅಂಗಸಂಸ್ಥೆಯಾದ ಪಂಚವಟಿ ಕಲ್ಯಾಣ ಕೇಂದ್ರದ ವತಿಯಿಂದ ನಿರ್ಮಾಣವಾಗತಕ್ಕಂತಹ ಯೋಜನೆಗಳು - ವಾನಪ್ರಸ್ಥಾಶ್ರಮ, ಅನಾಥಾಶ್ರಮ, ಅಂಗವಿಕಲಾಶ್ರಮ, ಅಬಲಾಶ್ರಮ ಮತ್ತು ವಿಧವಾಶ್ರಮ ನಿರ್ಮಾಣ.
5) ಶ್ರೀ ಚಿದಂಬರ ಮೂಲಪೀಠ ಮೂಲಮಹಾಕ್ಷೆತ್ರ ಸಂಸ್ಥಾನÀ, ಕೆಂಗೇರಿಯ ಅಂಗ ಸಂಸ್ಥೆ ಶಿಕ್ಷಣ ಸಂಸ್ಥೆಯಿಂದ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ವಿವಿಧ ಮಹಾವಿದ್ಯಾಲಯಗಳ ಕಟ್ಟಡಗಳನ್ನು ಮತ್ತು ಈ ರಥೋತ್ಸವವನ್ನು ಪ್ರತಿವರ್ಷ ಕಾರ್ತಿಕ ವದ್ಯ ಷಷ್ಠಿ ಶ್ರೀ ಚಿದಂಬರ ಜಯಂತಿ ಮತ್ತು ವೈಶಾಖ ಶುದ್ಧ ಷಷ್ಠಿ ದಿನ ಜರುಗಿಸಲಾಗುವುದು. ಶ್ರೀ ಚಿದಂಬರ ಮಹಾಸ್ವಾಮಿಗಳು ರಾಜ ಮಹಾರಾಜರಿಂದ, ಮಾಂಡಲೀಕರಿಂದ ಯಾವುದೇ ಕಾಣಿಕೆ ಸ್ವೀಕರಿಸದೇ “ಭಕ್ತರೇ ನನ್ನ ಆಸ್ತಿ, ಭಕ್ತರಿಂದಲೇ ಎಲ್ಲ ಕಾರ್ಯಗಳು ನೆರವೇರುತ್ತವೆ” ಎಂದ ಹಾಗೆ ಈ ಅಭಿವೃದ್ಧಿ ಯೋಜನೆಗಳಿಗೆ, ರಜತ ಹಾಗೂ ಸುವರ್ಣ ರಥ ಸಮರ್ಪಣೆಗೆ ಭಕ್ತರು ನಿಷ್ಕಾಮ ಭಕ್ತಿ, ನಿಷ್ಠೆಯಿಂದ ತನು, ಮನ, ಧನ ದಿಂದ ಸೇವೆ ಮಾಡಿ ಆ ಜಗನ್ನಿಯಂತನಾದ ಶ್ರೀ ಚಿದಂಬರನ ಕೃಪೆಗೆ ಪಾತ್ರರಾಗಬೇಕೆಂದು ನಾವುಗಳು ಇಚ್ಛಿಸುತ್ತೇವೆ.
6) ಅಖಿಲ ವಿಶ್ವ ಬ್ರಾಹ್ಮಣ ಸಮಾಜ ಸಂಘಟನೆ ಹಾಗೂ ಅಭಿವೃದ್ಧಿಗೆ ಪ್ರೇರೇಪಿಸುವುದು.
7) ಅಖಿಲ ವಿಶ್ವ ಹಿಂದೂ ಸರ್ವ ಸಮಾಜ ಸಂಘಟನೆ ಹಾಗೂ ಅಭಿವೃದ್ಧಿಗೆ ಪ್ರೇರೇಪಿಸುವುದು.
8) ಅಖಿಲ ವಿಶ್ವ ಸರ್ವಧರ್ಮ ಸಮನ್ವಯ ವಿಶ್ವಮಾನವ ಜಾಗೃತಿ ಸಂಘಟನೆ ಹಾಗೂ ಅಭಿವೃದ್ಧಿಗೆ ಪ್ರೇರೇಪಿಸುವುದು.
9) ಪ್ರತಿ ಗ್ರಾಮ/ಪಟ್ಟಣದ ಓಣಿ ಓಣಿಯಲ್ಲಿ ಶ್ರೀ ಚಿದಂಬರ ಉಪಾಸನಾ ಕುಟಿರಗಳನ್ನು ಸ್ಥಾಪನೆ ಮಾಡಿ ಭಕ್ತ ಸಂಪ್ರದಾಯವನ್ನು ಜಾಗೃತಿಗೊಳಿಸಲಾಗುವುದು. ಈ ಮೂರು ಸಂಘಟನೆಗಾಗಿ ಸಮಯೋಚಿತ ವೇಳೆ ತೆಗೆದುಕೊಂಡು ನಾವು ಸಭೆ ಸಮಾವೇಶ, ಸಮ್ಮೇಳನಗಳನ್ನು ಏರ್ಪಡಿಸಿ ಈ ಮೂಲಕ ಜನ ಜಾಗೃತಿ ಮೂಡಿಸುವುದು.
10) 211 ಶ್ರೀ ಚಿದಂಬರ ದಿಂಡಿ ಶಾಖೆಗಳನ್ನು ಮತ್ತು 11 ಲಕ್ಷಕ್ಕೂ ಮಿಕ್ಕಿ ಭಕ್ತರ ಮನೆ ಮನೆಯಲ್ಲಿ ಶ್ರೀ ಚಿದಂಬರ ಭಕಿ ಸಂಪ್ರದಾಯ ಪ್ರಚಾರ ಮತ್ತು ಪ್ರಸಾರ.

ಶ್ರೀಮನೃಪ ಶಾಲಿವಾಹನ ಶಕೆ 1939 ಹೇಮಲಂಬಿನಾಮ ಸಂವತ್ಸರ ವೈಶಾಖ ಶುದ್ಧ ಪ್ರತಿಪದೆ ಶನಿವಾರ ತಾ. 07.05.2016 ರಿಂದ ಸಪ್ತಮಿ 13.05.2016 ವರೆಗೆ ಆಚರಿಸುವ 200ನೇ ವರ್ಷದ ಶ್ರೀ ಚಿದಂಬರ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾನ ಮತ್ತು ಸಂಸ್ಥಾನ ಸಂಸ್ಥಾಪನೆಯ ದ್ವೀಶತಮಾನೋತ್ಸವದ ಅಂಗವಾಗಿ ಜರುಗುವ ಕಾರ್ಯಕ್ರಮಗಳು

7) ವಿವಿಧ ಹೋಮ, ಹವನಗಳು.
8) ಶ್ರೀ ಚಿದಂಬರ ದಿಂಡಿಯಿಂದ ಅಖಂಡ ವೀಣಾ ಸ್ಥಾಪನೆ ಹಾಗೂ ಅಖಂಡ ನಾಮಸ್ಮರಣೆv 9) ವಿವಿಧ ದಿಂಡಿಗಳಿಂದ ಭಜನೆ, ಕೀರ್ತನೆ, ಉಪನ್ಯಾಸ, ವಿದ್ವತ್ ಜನರಿಂದ ಉಪನ್ಯಾಸ, ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕøತಿಕ ಮನೋರಂಜನೆ ಕಾರ್ಯಕ್ರಮಗಳು.
10) ಸಂತ ಭಕ್ತರ ದಾನಿಗಳ ಸತ್ಕಾರ ಸಮಾರಂಭ.
11) ಸ್ಮರಣ ಸಂಚಿಕೆ ಬಿಡುಗಡೆ.
12) ಚತುರ್ವೇದ ಪಾರಾಯಣ ಹಾಗೂ ಚತುರ್ವೇದ ಸ್ವಾಹಾಕಾರ ಹೋಮ.
13) ಉಚಿತ ಸಾಮೂಹಿಕ ಜಾವೂಳ ಹಾಗೂ ಧರ್ಮೋಪನಯನಗಳು.
14) ದಿಂಡಿ ಸಂಪ್ರದಾಯ ಪ್ರಾರಂಭವಾಗಿ 200 ವರ್ಷಗಳ ನಿಮಿತ್ತವಾಗಿ 108 ವೀಣಾ ಪೂಜೆ.

"ಶ್ರೀಮನೃಪ ಶಾಲಿವಾಹನ ಶಕೆ 1950 ಕೀಲಕ. ನಾಮ ಸಂವತ್ಸರ ವೈಶಾಖ ಶುದ್ಧ ಪ್ರತಿಪದೆಯಿಂದ ಸಪ್ತಮಿಯವರೆಗೆ ತಾ.25.04.2028 .ರಿಂದ. 01.05.2028 ವರೆಗೆ ಶ್ರೀ ಚಿದಂಬರ ಲಿಂಗ ಪ್ರತಿಷ್ಠಾಪನೆ, ಪ್ರಥಮ ದೇವಸ್ಥಾನ ಹಾಗೂ ಸಂಸ್ಥಾನ ಸಂಸ್ಥಾಪನೆ ಅಂಗವಾಗಿ ಅಖಂಡ ಹನ್ನೊಂದು ವರ್ಷಗಳ ಕಾಲ ಆಚರಿಸಿದ ಕಾರ್ಯಕ್ರಮಗಳು ಸಾಂಗತಾ ಸಮಾರಂಭದ ಕಾರ್ಯಕ್ರಮಗಳು.

1) 11 ಕೋಟಿ ನಾಮಜಪ ಯಜ್ಞ.
2) 11 ಕುಂಡಗಳಲ್ಲಿ ರುದ್ರಸ್ವಾಹಾಕಾರ ಮಹಾಯಾಗ.
3) 24 ಕುಂಡಗಳಲ್ಲಿ ಗಾಯತ್ರಿ ಮಹಾಯಜ್ಞ.
4) 1008 ಸಾಮೂಹಿಕ ಶ್ರೀ ಚಿದಂಬರ ಚರಿತ್ರೆ ಪಾರಾಯಣ 1008 ಭಕ್ತರಿಂದ.
5) 1008 ಸಾಮೂಹಿಕ ಲಿಂಗಾರ್ಚನೆ.
6) 1008 ಸಾಮೂಹಿಕ ಸತ್ಯ ಚಿದಂಬರ ಪೂಜೆ
7) 1008 ಸಾಮೂಹಿಕ ಸತ್ಯ ನಾರಾಯಣ ಪೂಜೆ
8) 1008 ಸಾಮೂಹಿಕ ಕುಂಕುಮಾರ್ಚನೆ.
9) 21 ವಿವಿಧ ಹೋಮಗಳು.
10) ಸಂತ ಭಕ್ತರ ದಾನಿಗಳ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಗಣ್ಯಮಾನ್ಯರಿಗೆ ಆಶೀರ್ವಾದ ಪೂರ್ವಕ ಸತ್ಕಾರ ಸಮಾರಂಭ.
11) ಚತುರ್ವೇ ಸ್ವಾಹಾಕಾರ ಹೋಮ.
12) 200 ದಿನಗಳ ಕಾಲ ಶಿವಪುರಾಣ (18 ಪುರಾಣಗಳಲ್ಲೊಂದಾದ).